ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಕಾಂಚಾನಂ ಕಾರ್ಯ ಸಿದ್ದಿ “ಹಣ ನೀಡದೆಯಿದ್ದರೆ ಆಗಲ್ವಂತೆ ಪಾಸ್‍ಪೊರ್ಟ್ ವೇರಿಪಿಕೇಶನ್”

0
154
loading...

ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಕಾಂಚಾನಂ ಕಾರ್ಯ ಸಿದ್ದಿ

“ಹಣ ನೀಡದೆಯಿದ್ದರೆ ಆಗಲ್ವಂತೆ ಪಾಸ್‍ಪೊರ್ಟ್ ವೇರಿಪಿಕೇಶನ್”

ಕನ್ನಡಮ್ಮ ವಿಶೇಷ

ಸಂಕೇಶ್ವರ:ನೊಂದವರು ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ಹೋಗಬೇಕು ಆದರೆ ಠಾಣೆಗೆ ಹೋಗಬೇಕೆಂದರೆ ಹಣ ಬೇಕಲ್ವ?ಠಾಣೆಗೆ ಹೋಗಲು ಯಾಕೆ ಹಣ ಎಂದು ಯೋಚಿಸಿದರೆ ಪಟ್ಟಣದ ಪೋಲಿಸ ಠಾಣೆಯಲ್ಲಿ ಸಾರ್ವಜನಿಕರ ಯಾವುದೇ ಕೆಲಸಗಳಿದರು, ಪೋಲಿಸರ ಕೈ ಬಿಸಿ ಮಾಡಿದರೆ ಮಾತ್ರ ಕೆಲಸಗಳು ಆಗುತ್ತವೆ ಎಂದು ಸಾರ್ವಜನಿಕರು ಗಂಭೀರವಾಗಿ ಆರೋಪಿಸುತ್ತಿದಾರೆ.ಹಣ ಕಳೆದುಕೊಳ್ಳಲು ಠಾಣೆಗೆ ಹೋಗಬೇಕೆ ಎಂದು ಸಾರ್ವಜನಿಕರು ಸಾಮಾನ್ಯವಾಗಿ ಮಾತನಾಡಿಕೊಳ್ಳುತ್ತಿದ್ದಾರೆ.

ತಾಲೂಕಿನ ಸಂಕೇಶ್ವರ ಠಾಣೆಯಲ್ಲಿ (ಪಾಸ್ ಪೋರ್ಟ್) ಹಾಗೂ ಇನ್ನಿತರ ಯಾವುದೇ ಕಾಗದ ಪತ್ರಗಳ ಕೆಲಸ ಅಂತ ಬಂದ ಜನರಿಂದ ಹಣ ಪೀಕದೆ ಬಿಡುವುದಿಲ್ಲ. ಹಣ ನೀಡದೇ ಇದ್ದಲಿ ಠಾಣೆಗೆ ಅಲೆದು ಒಂದು ಜೊತೆ ಚಪ್ಪಲಿ ಹರಿದು ಹೊದರು ಕೆಲಸ ಆಗುವುದಿಲ್ವಂತೆ.

ಉದ್ಯೂಗಕ್ಕಾಗಿ ಅಪರಾಧ ಹಿನ್ನಲೆ ಬಗ್ಗೆ ಪೊಲೀಸ್ ಠಾಣೆಗೆ ಪರಿಶೀಲನೆಗಾಗಿ ಬರುವ ಯುವಕ/ಯುವತಿಯರ ಅಪರಾಧದಲ್ಲಿ ಭಾಗಿಯಾಗಿಲ್ಲ ಯಾವುದೇ ಕ್ರಿಮಿನಲ್ ಕೆಸ್ ಈ ಇಲ್ಲ ಎಂದು ದೃಡಿಕರಣ ಪತ್ರ ನೀಡಲು ಠಾಣೆಯಲ್ಲಿ ಸಿಕ್ಕಿದಷ್ಟೂ ಬಾಚುವದು ಸಾಮಾನ್ಯವಂತೆ.500 ರಿಂದ 2000 ಸಾವಿರ ರೂಪಾಯಿವರೆಗೂ ಹಣ ಬೇಡಿಕೆಯಿಟ್ಟು ಪಡೆದುಕೊಂಡಿದ್ದು ನಮ್ಮ ಆರಕ್ಷಕರ ಕರ್ತವ್ಯಕ್ಕೆ ಸಾರ್ವಜನಿಕರು ಠಾಣೆಯ ಮೆಟ್ಟಿಲು ತುಳಿಯಲು ಹಿಂಜರಿವಂತಾಗಿದೆ

ದಿನಾಲೂ ನೊಂದವರು ಅದೇಷ್ಟೊ ಜನ ಠಾಣೆಯ ಮುಂದೆ ಬಂದು ನಿಲ್ಲುತ್ತಾರೆ ಆದರೆ ಇಲ್ಲಿನ ಪಿಎಸ್‍ಐ ಸಾಹೇಬ್ರು ಆಗೊಮ್ಮೆ , ಈಗೊಮ್ಮೆ ಮಾತ್ರ ಸಿಗುತ್ತಾರೆ. ಸಿಕ್ಕರು ಸಾರ್ವಜನಿಕ ಸಮಸ್ಯೆಗಳಿಗೆ ಸರಿಯಾಗಿ ಸ್ಪಂಧನೆ ನೀಡುವುದಿಲ್ಲ ಎಂಬುವುದು ಠಾಣೆಗೆ ಬರುವ ಜನರ ಮಾತಾಗಿದೆ.

ನಗರದ ಹಳೆ ಪಿಬಿ ರಸ್ತೆ ಕಾಮಗಾರಿ ಆರಂಭವಾದ ಹಿನ್ನಲೆ ರಸ್ತೆ ಸಂಚಾರದ ಸಮಸ್ಯೆಯಿಂದ ನಗರದಲ್ಲಿ ಟ್ರಾಫಿಕ್ ಸಮಸ್ಯೆ ದಿನೇ ದಿನೆ ಹೆಚ್ಚುತ್ತಿದರು ಪೋಲಿಸರು ಮಾತ್ರ ನಮಗೂ ಇದಕ್ಕು ಯಾವುದೇ ಸಂಬಂಧ ಇಲ್ಲದ ರೀತಿ ಸುಮ್ಮನೆ ಇದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನ ಹೊಂದಿದ್ದು ಪೋಲಿಸ ಅಧಿಕಾರಿಗಳು ಜನ ಸ್ನೇಹಿಯಾಗಿ ಪೊಲೀಸ ಠಾಣೆ ಎಂದು ಭಾಷಣ ಮಾಡುವ ಬದಲಾಗಿ ನಿಜವಾಗಿಯೂ ಕೆಲಸ ಮಾಡಲಿ ಎಂಬುವುದೆ ಜನರ ಬಯಕೆಯಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಸೂಕ್ತ ಕ್ರಮಕೈಗೋಳ ಬೇಕು ಎಂದು ಸಾರ್ವಜನಿಕರ ಬೇಡಿಕೆಯಾಗಿದೆ.

ಭಾಕ್ಸ

ಸಂಕೇಶ್ವರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳೆದ ಒಂದು ವರುಷದಿಂದ ಹೆಬ್ಬಾಳ ಡಿಸಿಸಿ ಬ್ಯಾಂಕ್ ಕಳತನ ಪ್ರಕರಣ ಸೇರಿದಂತೆ ಸಾಲು ಸಾಲು ಮನೆ,ಬೈಕ್ ದರೋಡೆ ಪ್ರಕರಣಗಳು ನಡೆದಿವೆ.ಆದರೆ ಈ ಬಗ್ಗೆ ತನಿಖೆ ಯಾವ ಹಂತದಲ್ಲಿದೆ ಎಂಬುವುದು ಮಾತ್ರ ನಿಗೂಡವಾಗಿದೆ.

loading...