ಸಂಭ್ರಮದ ‘ಕರಿ’ ಹರಿಯುವ ಕಾರ್ಯಕ್ರಮ

0
11
loading...

ರಬಕವಿ-ಬನಹಟ್ಟಿ: ಕಾರ ಹುಣ್ಣಿಮೆಯ ಪ್ರಯುಕ್ತ ನಗರದಲ್ಲಿ ಶುಕ್ರವಾರ ಸಂಜೆ ಕರಿ ಹರಿಯುವ ಕಾರ್ಯಕ್ರಮ ಅತಿ ವಿಜೃಂಭಣೆಯಿಂದ ನಡೆಯಿತು. ಸಾವಿರಾರು ಜನ ಈ ಗ್ರಾಮೀಣ ಆಚರಣೆಯನ್ನು ನೋಡಲು ಆಗಮಿಸಿದ್ದರು. ಗಾಂಧಿ ವೃತ್ತದ ಹತ್ತಿರ ಊರಿನ ಗೌಡರಾದ ಸಿದ್ದನಗೌಡ ಪಾಟೀಲ ಎತ್ತುಗಳಿಗೆ ಪೂಜೆ ಸಲ್ಲಿಸಿ ಎತ್ತುಗಳ ಓಟಕ್ಕೆ ಚಾಲನೆ ನೀಡಿದರು. ಒಟ್ಟು ನಾಲ್ಕು ಎತ್ತುಗಳು ಓಟದಲ್ಲಿ ಪಾಲ್ಗೊಂಡಿದ್ದವು. ಅದರಲ್ಲಿ ರಾಜುಗೌಡ ಪಾಟೀಲ ಎತ್ತು ಮೊದಲ ಸ್ಥಾನ ಪಡೆಯಿತು. ಎರಡನೇ ಸ್ಥಾನವನ್ನು ಮಹಾದೇವ ಗುಂಡಿ ಹಾಗು ಮೂರನೇಯ ಸ್ಥಾನವನ್ನು ಸಿದ್ಧನಗೌಡ ಪಾಟೀಲರ ಎತ್ತು ಪಡೆದುಕೊಂಡವು.
ಪಾಟೀಲ ಹಾಗು ಗುಂಡಿಯವರ ಎರಡೂ ಎತ್ತುಗಳು ವೇಗದಲ್ಲಿ ಕೊನೆಯವರೆಗೂ ಭಾರಿ ಪೈಪೋಟಿ ನಡೆಸುವ ಮೂಲಕ ನೋಡುಗರಿಗೆ ಅತ್ಯಂತ ಕುತೂಹಲ ಮೂಡಿಸುವಲ್ಲಿ ಕಾರಣವಾಯಿತು. ಈ ಎತ್ತುಗಳ ಸ್ಪರ್ಧೆಯಲ್ಲಿ ಸ್ಥಾನ ನೀಡಬೇಕಾದರೆ ವಿಡಿಯೋ ಸಹಾಯಕಾರಿಯಾಗಿ ಕೆಲ ನಿಮಿಷಗಳ ಕಾಲ ನಿರ್ಣಾಯಕರು ಹಲವಾರು ವಿಡಿಯೋ ಚಿತ್ರೀಕರಣಗಳನ್ನು ವೀಕ್ಷಿಸಿ ಅಧಿಕೃತವಾಗಿ ಸ್ಥಾನ ಘೋಷಣೆ ಮಾಡುವಲ್ಲಿ ಕಾರಣವಾಯಿತು.
ಕರಿ ಹರಿಯುವ ಕಾರ್ಯಕ್ರಮದ ನಂತರ ಹನುಮಾನ ದೇವಸ್ಥಾನದಲ್ಲಿ ಮಾಳಿಂಗರಾಯ ಪೂಜಾರಿಯಿಂದ ಬಿತ್ತನೆಗಾಗಿ ರೈತರಿಗೆ ಬೀಜ ಕೊಡುವ ಕಾರ್ಯಕ್ರಮ ನಡೆಯಿತು. ಇಲ್ಲಿ ಕೊಡುವ ಬೀಜಗಳನ್ನು ರೈತರು ತಮ್ಮ ಹೊಲದಲ್ಲಿ ಬಿತ್ತನೆ ಮಾಡುವ ಕಾಳುಗಳಲ್ಲಿ ಕೂಡಿಸಿ ಬಿತ್ತನೆ ಮಾಡುವುದರಿಂದ ಬೆಳೆ ಸಮೃದ್ಧಿಯಾಗಿ ಬರುತ್ತದೆ ಎಂಬ ನಂಬಿಕೆ ಇದೆ.
ಇದೇ ಸಂದರ್ಭದಲ್ಲಿ ಊರಿನ ಗೌಡರಾದ ಸಿದ್ದನಗೌಡ ಪಾಟೀಲ, ರಾಜುಗೌಡ ಪಾಟೀಲ, ಬಸವರಾಜ ಗುಂಡಿ, ಶ್ರೀಶೈಲ ಉಳ್ಳಾಗಡ್ಡಿ, ಭೀಮಶಿ ಆದಗೊಂಡ, ಮಹಾದೇವ ಗುಂಡಿ, ಸಿದ್ದಪ್ಪ ಮಿರ್ಜಿ, ಪಂಡಿತಪ್ಪ ಪಟ್ಟಣ, ಮಹಾಶಾಂತ ಶೆಟ್ಟಿ, ಮಲ್ಲಿಕಾರ್ಜುನ ಮಿರ್ಜಿ, ಭೀಮಶಿ ಪಾಟೀಲ, ಕಾಡಪ್ಪ ಬಿ. ಪಾಟೀಲ, ಶೇಖರ ಸಂಪಗಾಂವಿ, ಮೋಹನ ಪತ್ತಾರ, ಶಂಕರ ಜಾಲಿಗಿಡದ, ಚಿದಾನಂದ ಪತ್ತಾರ, ಸೋಮನಾಥ ಗೊಂಬಿ, ರೈತರು ಮತ್ತು ಗೌಡರ ದೈವ ಮಂಡಳ, ಮಂಗಳವಾರ ಪೇಟೆ ದೈವ ಮಂಡಳ ಹಾಗೂ ಸೋಮವಾರ ಪೇಟೆ ಸಮಸ್ತ ದೈವ ಮಂಡಳದ ಹಿರಿಯರು, ಸುತ್ತಲಿನ ಗ್ರಾಮದ ರೈತರು ಉಪಸ್ಥಿತರಿದ್ದರು.

loading...