ಸಚಿವರಿಂದ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ತಲಾ 4ಲಕ್ಷ ರೂ.ಗಳ ಚೆಕ್ ವಿತರಣೆ

0
35
loading...

 

ಕನ್ನಡಮ್ಮ ಸುದ್ದಿ-ಗೋಕಾಕ: ಗೋಕಾಕ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಶಿಂದಿಕುರಬೇಟ ಗ್ರಾಮದ ಮಾಯಮ್ಮದೇವಿ ದೇವಸ್ಥಾನ, ಬೆಣಚಿನಮರಡಿ ಗ್ರಾಮದ ವಿಠ್ಠಲ ರುಕ್ಮಿಣಿ ದೇವಸ್ಥಾನ, ಅಜ್ಜನಕಟ್ಟಿ ಗ್ರಾಮದ ರಂಗಸಿದ್ದೇಶ್ವರ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಮುಜರಾಯಿ ಇಲಾಖೆಯಿಂದ ಮಂಜೂರಾದ ತಲಾ 4ಲಕ್ಷ ರೂ.ಗಳ ಮೊತ್ತದ ಚೆಕ್ ಗಳನ್ನು ಸೋಮವಾರದಂದು ನಗರದ ಸಚಿವರ ಕಾರ್ಯಾಲಯದಲ್ಲಿ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರು ವಿತರಿಸಿದರು.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರಾದ ಟಿ.ಆರ್.ಕಾಗಲ, ಮಡ್ಡೆಪ್ಪ ತೋಳಿನವರ, ಗ್ರಾಮಗಳ ಹಿರಿಯರಾದ ಲಕ್ಕಪ್ಪ ಮಾಳಗಿ, ಶಿವಲಿಂಗ ಜಕ್ಕನ್ನವರ, ಯಲ್ಲಪ್ಪ ಜಕ್ಕನ್ನವರ, ಮಾಯಪ್ಪ ಮಾಯನ್ನವರ, ಸಿದ್ದಪ್ಪ ಮಾಯನ್ನವರ, ಕೆಂಚಪ್ಪ ಮಾಯನ್ನವರ ಸೇರಿದಂತೆ ಇತರರು ಇದ್ದರು.

loading...