ಸಣ್ಣ ನೀರಾವರಿ ಇಲಾಖೆ ನಿರ್ಲಕ್ಷ್ಯ

0
9
loading...

ಧನ್ಯಕುಮಾರ ಧನಶೆಟ್ಟಿ
ಇಂಡಿ: ತಾಲೂಕಿನ ಬಬಲಾದ ಕೆರೆಗೆ ನೀರಿಲ್ಲದೇ ಬೀಕೋ ಎನ್ನುತ್ತಿದೆ ಆದರೆ ಇದಕ್ಕೆ ಬರುವ ಅನುದಾನವು ದುರುಪಯೋಗವಾಗುತ್ತಿದೆ.ಇದರಿಂದ ಕರೆ ಸ್ವಚ್ಚತೆ ಮಾತ್ರ ಕಾಗದದಲ್ಲಿದೆ ಆದರೆ ಅದಕ್ಕ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸ್ವಚ್ಚತೆ ಕಾಣದೇ ಹಲವಾರು ವರ್ಷಗಳೇ ಕಳೆದಿದೆ ಆದರೆ ಅನುದಾನ ಮಾತ್ರ ಖರ್ಚಾಗಿದೆ ಹೂಳು ಮಾತ್ರ ಹಾಗೇಯಿದೆ.
ಹಿಂದೆ ಆರಂಭಗೊಂಡು ಪೂರ್ಣಗೊಳ್ಳದಿರುವ ಕೆರೆಯ ಬಗ್ಗೆ ಇಲ್ಲಿಯವರೆಗೆ ಯಾರೊಬ್ಬರು ಗಮನ ನೀಡಿಲ್ಲ. ಅಲ್ಲದೆ ಕೆರೆಯಲ್ಲಿ ಕನಿಷ್ಟ ಸ್ವಚ್ಚತೆ ಕಾರ್ಯಗಳನ್ನುದ ಕೈಗೊಳ್ಳದ ಕಾರಣದಿಂದಾಗಿ ಮುಳ್ಳು ಕಂಟಿ ಬೆಳೆದು ಹೂಳು ತುಂಬಿದೆ. ಕೆರೆಯು 100 ಎಂ.ಸಿ.ಎಫ್‌.ಟಿ. ನೀರು ಸಂಗ್ರಹಿಸುವ ಸಾಮರ್ಥ ಹೊಂದಿದ್ದು ಸುಮಾರು 100 ರಿಂದ 150 ಹೇಕ್ಟರ್‌ ಪ್ರದೇಶದವರೆಗೆ ನೀರು ನಿಲ್ಲುತ್ತಿತ್ತು. ಮಳೆಗಾಲದಲ್ಲಿ ಕೆರೆ ತುಂಬಿಕೊಂಡರೆ ಸಾಕು ಇಡೀ ವರ್ಷ ಈ ಭಾಗದಲ್ಲಿರುವ ಬಾವಿ, ಕೊಳವೆ ಬಾವಿಗಳು ನೀರಿನಿಂದ ತುಂಬಿಕೊಳ್ಳುತ್ತಿದ್ದವು.
ಸುಮಾರು 500 ರಿಂದ 600 ಹೇಕ್ಟರ್‌ ಪ್ರದೇಶಕ್ಕೆ ನೀರುಣಿಸುವುದು ಮತ್ತು ಬೇಸಿಗೆಯಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುತ್ತದೆ. ಕಳೆದ 60 ವರ್ಷಗಳ ಇತಿಹಾಸವಿರುವ ಕೆರೆ ಬಗ್ಗೆ ಸಣ್ಣ ನೀರಾವರಿಯ ಅಧಿಕಾರಿಗಳು ನಿರ್ಲಕ್ಷ್ಯವಹಿಸಿರುವುದರಿಂದ ಕೆಲವರು ಒತ್ತುವರಿ ಮಾಡುವ ಮೂಲಕ ಕೆರೆಯ ಜಾಗವನ್ನು ಹೊಲವನ್ನಾಗಿ ಮಾಡುಕೊಳ್ಳುತ್ತಿದ್ದು, ಇನ್ನು ಕೆಲವೇ ವರ್ಷದಲ್ಲಿ ಕೆರೆಯ ಯಾವ ಗುರುತು ಇಲ್ಲದಂತಾದವರು ಆಶ್ಚರ್ಯವಿಲ್ಲ. ಇದ್ದ ಕೆರೆಯನ್ನು ಸ್ವಚ್ಚಗೊಳಿಸುವ ಕಾರ್ಯವನ್ನಾದರು ಮಾಡಬೇಕೆಂದು ಕೆರೆಯ ಸುತ್ತ ಮುತ್ತಲು ಬರುವ ಗ್ರಾಮಗಳವರು ಸರಕಾರಕ್ಕೆ ಸಂಬಂಧಿಸಿದ ಸಣ್ಣ ನೀರಾವರಿ ಇಲಾಖೆಯು ಸರಿಯಾದ ಸ್ವಚ್ಚತೆ ನಿರ್ವಹಸುವ ಕಾರ್ಯ ಮಾಡುತ್ತಿಲ್ಲ ಇದರಿಂದ ಕರೆಯು ವಿನಾಶವಾಗುವ ಹಂತದಲ್ಲಿದೆ. ಇದರಿಂದ ಗ್ರಾಮಸ್ಥರು ಮತ್ತು ಹಿರೇಇಂಡಿಯ ವಸತಿ ಜನರು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಅನೇಕ ವರ್ಷಗಳಿಂದ ಮನವಿ ಮಾಡುತ್ತ ಬಂದರು ಪ್ರಯೋಜನವಿಲ್ಲದಂತಾಗಿದೆ. ಕೆರೆ ಪೂರ್ಣಗೊಂಡರೆ ಕುಡಿಯುವ ನೀರು, ನೀರಾವರಿ, ಅಂತರ್ಜಲದ ಮಟ್ಟದ ಸುಧಾರಣೆಯಂತಹ ಪ್ರಯೋಜನವಾಗುತ್ತದೆಯಾದರು, ನಿರ್ಲಕ್ಷ್ಯ ಧೋರಣೆಯಿಂದ ಜನ ಹಲವು ಸಮಸ್ಯಗಳನ್ನು ಎದುರುಸುವಂತಾಗಿದೆ. ಆದರೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸರಿಯಾದ ಮಾಹಿತಿಯನ್ನು ರೈತರಿಗೆ ನೀಡುತ್ತಿಲ್ಲ ಆದ್ದರಿಂದ ಅಧಿಕಾರಿಗಳ ಮೇಲೆ ಕೂಡಲೇ ಕ್ರಮಕೈಕೊಳ್ಳಬೇಕು ಎಂದು ರೈತರ ಒತ್ತಾಯವಾಗಿದೆ.

loading...