ಸತೀಶ ಜಾರಕಿಹೊಳಿಗೆ ತಪ್ಪಿದ ಸಚಿವ ಸ್ಥಾನ:ರಾಜಿನಾಮೆಗೆ ಮುಂದಾದ ತಾ.ಪಂ ಜಿ.ಪಂ ಸದಸ್ಯರು.

0
57
loading...

ಸತೀಶ ಜಾರಕಿಹೊಳಿಗೆ ತಪ್ಪಿದ ಸಚಿವ ಸ್ಥಾನ:ರಾಜಿನಾಮೆಗೆ ಮುಂದಾದ ತಾ.ಪಂ ಜಿ.ಪಂ ಸದಸ್ಯರು.

ಕನ್ನಡಮ್ಮ ಸುದ್ದಿ-ಬೆಳಗಾವಿ:ಜೆಡಿಎಸ್ ಕಾಂಗ್ರೆಸ್ ಸಮೀಶ್ರ ಸರಕಾರದಲ್ಲಿ ಮಂತ್ರಿ ಸ್ಥಾನ ಸಿಗದ ಹಿನ್ನೆಲೆ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರ ಬೆಂಬಲಿಗರು ಇಂದು ಕೈ ಹೈಕಮಾಂಡ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು .

ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯ ನಡೆಸಿ ಮಾತನಾಡಿದ ಜಿಲ್ಲಾ ಪಂಚಾಯತ ಸದಸ್ಯ ಗಂಗಾಧರಸ್ವಾಮಿ ತವಗಮಠ ಪ್ರಭಾವಿ ನಾಯಕ ಸತೀಶ ಜಾರಕಿಹೊಳಿ ಸಂಪುಟದಲ್ಲಿ ಸೇರಿಸಿಕೊಳ್ಳದೆಯಿರುವುದು ಖೇದಕರ ವಿಷಯ, ರಾಜ್ಯದಲ್ಲಿ ಕಾಂಗ್ರೆಸ್ ೭೮ ಶಾಸಕರು ಆಯ್ಕೆ ಆಗಲು ಶಾಸಕ ಸತೀಶ ಜಾರಕಿಹೊಳಿ ಅವರು ಕಾರಣ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಎಐಸಿಸಿ ಕಾರ್ಯದರ್ಶಿಯಾಗಿ ಪಕ್ಷವನ್ನು ಸಂಘಟನೆಯಲ್ಲಿ ದುಡಿಯುತ್ತಿರುವ ಅಹಿಂದ ನಾಯಕನಿಗೆ ಕಾಣದ ಕೈಗಳು ಸಚಿವ ಸ್ಥಾನ ತಪ್ಪಿಸಿದ್ದು.ಈ ಹಿನ್ನೆಲೆ ಶಾಸಕರಿಗಾದ ಅನ್ಯಾಯ ಖಂಡಿಸಿ ಇಂದು ಯಮಕನಮರಡಿ ಕ್ಷೇತ್ರದ ಸತೀಶ ಜಾರಕಿಹೊಳಿಗೆ ಬೆಂಬಲಿಗರಾದ ಜಿ.ಪಂ ತಾ.ಪಂ.ಮತ್ತು ಎಪಿಎಂಸಿ ಸದಸ್ಯರು ರಾಜಿನಾಮೆ ನೀಡುವ ನಿರ್ಧಾರ ಮಾಡಿದ್ದೆವೆ ಎಂದರು.

ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯರಾದ ಅರುಣ ಕಟಾಂಬಳಿ ,ಮಂಜುನಾಥ ಪಾಟೀಲ ,ತಾ.ಸದಸ್ಯರಾದ ನಿಂಗನಗೌಡ ಪಾಟೀಲ, ಯಲ್ಲಪ್ಪ ಕೊಳೆಕಾರ,ಮುಖಂಡರಾದ ವೀರಣ್ಣ ಬಿಸಿರೋಟ್ಟಿ,ಮುಂತಾದವರು ಇದ್ದರು.

loading...