ಸಮಗ್ರ ದಾಖಲೆಗೆ ಸಹಿ ಹಾಕಿದ ಡೊನಾಲ್ಡ್ ಟ್ರಂಪ್ ಹಾಗು ಕಿಮ್ ಜಾಂಗ್ ಉನ್

0
19
loading...

ಸಿಂಗಾಪುರ-ಅಮೆರಿಕ ಮತ್ತು ಉತ್ತರ ಕೊರಿಯ ಐತಿಹಾಸಿಕ ಶೃಂಗದಲ್ಲಿ ಪಾಲ್ಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಉತ್ತರ ಕೊರಿಯ ನಾಯಕ ಕಿಮ್‌ ಜಾಂಗ್‌ ಉನ್‌ ಅವರು ಅಣ್ವಸ್ತ್ರಗಳಿಗೆ ಸಂಬಂಧಿಸಿದ ತಮ್ಮೊಳಗಿನ ಎಲ್ಲಾ ಭಿನ್ನಮತಗಳನ್ನು ಕಿರಿದುಗೊಳಿಸಿ, ಸಮಗ್ರ ದಾಖಲೆ ಪತ್ರಕ್ಕೆ ಸಹಿ ಹಾಕುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಉಭಯ ನಾಯಕರು ತಮ್ಮೊಳಗಿನ ಶಂಕೆಗಳು, ಹಿಂಜರಿಕೆಗಳು, ಮತ್ತು ಪರಸ್ಪರ ಅವಿಶ್ವಾಸದ ಎಲ್ಲ ಭಿನ್ನಮತಗಳನ್ನು ಬದಿಗಿರಿಸಿ ಐತಿಹಾಸಿಕ ಶೃಂಗ ನಡೆಯುವ ತಾಣಕ್ಕೆ ಆಗಮಿಸಿ ನೇರ ಮಾತುಕತೆಗೆ ಎದುರು ಬದುರಾಗಿ ಕುಳಿತು ವಿವಾದಗಳನ್ನೆಲ್ಲಾ ಬಗೆಹರಿಸುವ ಪ್ರಯತ್ನಕ್ಕೆ ಮುಂದಾದರು. ಟ್ರಂಪ್‌ ಅವರು ಕಿಮ್‌ ಜತೆಗಿನ ಈ ಶೃಂಗದ ಧನಾತ್ಮಕ ಫ‌ಲಶ್ರುತಿಯ ಬಗ್ಗೆ ಪೂರ್ಣ ಆಶಾವಾದಿಯಾಗಿದ್ದರೂ, ಅವರ ವಿದೇಶ ಸಚಿವ ಮೈಕ್‌ ಪಾಂಪಿಯೋ ಅವರು ಕಿಮ್‌ ಪ್ರಾಮಾಣಿಕತೆಯ ಬಗ್ಗೆ ಎಚ್ಚರದಿಂದಿರುವಂತೆ ಟ್ರಂಪ್‌ ಗೆ ಮುನ್ಸೂಚನೆ ನೀಡಿದರು. ಈ ಫ‌ಲಪ್ರದ ಶೃಂಗವನ್ನು ಅನುಸರಿಸಿ, ಉತ್ತರ ಕೊರಿಯ ಅತ್ಯಂತ ತ್ವರಿತವಾಗಿ ನಿಶಸ್ತ್ರಿಕರಣ ಪ್ರಕ್ರಿಯೆಯನ್ನು ಕೈಗೊಳ್ಳುವುದೆಂಬ ಆಶಯವನ್ನು ಅವರು ವ್ಯಕ್ತಪಡಿಸಿದರು. ಉಭಯ ನಾಯಕರೂ ಈಗಿನ್ನು ಶಾಂತಿ ಮತ್ತು ಕಾನೂನಿನ ಪರಮೋಚ್ಚತೆಯನ್ನು ಕಾಪಿಡಲು ಶ್ರಮಿಸುವರೆಂದು ಶೃಂಗ ಸಭೆಯೂ ಹಾರೈಸಿತು. ಟ್ರಂಪ್‌ ಅವರು ಕಿಮ್‌ ಅವರನ್ನು ಅಮೆರಿಕಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು. ಕಿಮ್‌ ಅವರೊಂದಿಗಿನ ಮಾತುಕತೆಯಿಂದ ವಿಶ್ವ ಮಹತ್ತರ ಬದಲಾವಣೆ ಕಾಣಲಿದೆ ಎಂದು ಟ್ರಂಪ್‌ ಹೇಳಿದರು.

loading...