ಸಮಾಜದಲ್ಲಿ ಎಲ್ಲರೂ ಸಮಾನರು: ಶಾಸಕ ಪಾಟೀಲ

0
19
loading...

ನರಗುಂದ: ಸಮಾಜದಲ್ಲಿ ಎಲ್ಲರೂ ಒಂದೇ ಎಂಬ ಭಾವನೆ ಬರಬೇಕಿದೆ. ಸಮಾಜದಲ್ಲಿ ಒಡಕುಮೂಡುವಂತಹ ಕೆಲಸವೂ ಆಗಬಾರದು. ಜಾತಿ ಸಾಮರಸ್ಯಗಳು ಎಲ್ಲ ಒಂದು. ಆದರೆ ಇಂದು ಜಾತಿ, ಸಾಮರಸ್ಯದಲ್ಲಿ ಒಡಕು ಉಂಟಾಗುವಂತಹ ಅನೇಕ ಘಟಣೆಗಳು ರಾಜ್ಯದೆಲ್ಲಡೆನಡೆದು ಜನತೆ ತೊಂದರೆ ಅನುಭವಿಸುವಂತಾಗಿದೆ. ಇದು ಸರಿಯಲ್ಲವೆಂದು ಶಾಸಕ ಸಿ.ಸಿ. ಪಾಟೀಲ ವಿಷಾದ ವ್ಯಕ್ತಪಡಿಸಿದರು.

ನರಗುಂದ ತಾಲೂಕ ಮುಸ್ಲೀಂ ಸರ್ಕಾರಿ ನೌಕರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಜೂ. 11 ರಂದು ನರಗುಂದ ಪಟ್ಟಣದ ಯಡೆಯೂರ ಸಿದ್ದಲಿಂಗೇಶ್ವರ ಬಿಎಡ್ ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾದ ಇಪ್ತಿಯಾರ್ ಕೂಟದಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕಗಳಿಸಿದ ಪ್ರತಿಭಾವಂತ ಮುಸ್ಲೀಂ ಸಮಾಜದ ವಿದ್ಯಾರ್ಥಿ/ ವಿದ್ಯಾರ್ಥಿನಿಯರನ್ನು ಹಾಗೂ ಸಮಾಜದ ಹಿರಿಯರನ್ನು ಶಾಲು ಹೊದೆಸಿ ಸನ್ಮಾನಿಸಿ ಮಾತನಾಡಿದ ಅವರು, ನಾವೆಲ್ಲ ಇದೇ ಧರ್ಮದಲ್ಲಿ ಜನಿಸಬೇಕೆಂದು ಹಣೆ ಬರಹದಲ್ಲಿ ಬರೆದುಕೊಂಡು ಜನ್ಮ ತಾಳಿಲ್ಲ. ಜಾತಿ ಧರ್ಮ ಎನ್ನುವುದು ಒಂದು ವ್ಯವಸ್ಥೆಗೆ ಮಾತ್ರ ಸಿಮಿತವಾಗಿದೆ. ಆದರೆ ಬದುಕಿನಲ್ಲಿ ಎಲ್ಲರೂ ಒಂದೇ ಎನ್ನುವ ಮನೋಭಾವಣೆ ರೂಡಿಸಿಕೊಂಡು ಬಾಳು ನಡೆಸುವಂತಾಗಬೇಕೆಂದು ತಿಳಿಸಿದರು.
ಮುಸ್ಲೀಂ ಸರ್ಕಾರಿ ನೌಕರ ರಾಜ್ಯ ಮಹಿಳಾ ಸಂಘದ ಅಧ್ಯಕ್ಷೆ ಪರದಾತ ಜಲಗೇರಿ ಮಾತನಾಡಿ, ಇಂದಿನ ಜಾಗಥಿಕ ದಿನಗಳಲ್ಲಿ ನಾವೆಲ್ಲ ಅದಕ್ಕೆ ಹೊಂದಿಕೊಂಡು ನಡೆಯಬೇಕಾಗಿದೆ. ಮುಸ್ಲೀಂ ಹಿರಿಯರು ತಮ್ಮ ಹೆಣ್ಣು ಮಕ್ಕಳನ್ನು ನಾಲ್ಕು ಗೋಡೆಯ ಮಧ್ಯೆ ಬೆಳೆಸದೇ ತಾಂತ್ರಿಕ ಯುಗದಲ್ಲಿ ಅವರಿಗೆ ಉತ್ತಮ ಜ್ಞಾನಾರ್ಜನೆಮಾಡುವಂತಹ ಅವಕಾಶ ಕಲ್ಪಿಸಿ. ಮಹಿಳೆಯರಿಗೆ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಲು ಎಲ್ಲ ಉತ್ತಮ ಸಲಹೆಗಳನ್ನು ನೀಡಿ ಎಂದು ವಿನಂತಿಸಿಕೊಂಡರು.

ಮುಸ್ಲೀಂ ಸರ್ಕಾರಿ ನೌಕರ ಸಂಘದ ತಾಲೂಕ ಅಧ್ಯಕ್ಷ ಝಡ್.ಎಂ. ಖಾಜಿ ಮಾತನಾಡಿ, ಸಂಘದ ಬೆಳವಣಿಗೆ ಕುರಿತು ವಿವರ ನೀಡಿದರು. ಜಿಲ್ಲಾ ಸಂಘದ ಅಧ್ಯಕ್ಷ ಎಸ್.ಎಚ್. ಹುಯಿಲಗೋಳ, ವೈ.ಆರ್. ಬೇಲೇರಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಹೆಬೂಬಸಾಬ ಮಟಿಗೇರ, ಚಂದ್ರು ದಂಡಿನ, ನಿವೃತ್ ಶಿಕ್ಷಕ ವ್ಹಿ.ಎಸ್. ಢಾಣೆ, ಸಂಘದ ಗೌರವಾಧ್ಯಕ್ಷ ಆರ್.ಎಂ. ತಬಲಚಿ, ಮೌಲಾನಾ ತನ್ವೀರ ಅಹಮದ ಸರಖಾಜಿ, ಎ.ಎ. ನಧಾಫ್, ಎಮ.ಎಸ್. ಮುಲ್ಲಾ, ಮಹೆಬೂಬ ಫನಿಬಂದ, ಆರ್.ಎ. ನಮಾಜಿ, ರಫೀಕ್ ಗಸ್ತಿ, ಡಿ.ಐ. ಕಡ್ಡೇಗಾರ, ಎಂ.ಎ. ದಳವಾಯಿ, ಮೌಲಾಸಾಬ ಮುನವಳ್ಳಿ, ಮಾಬೂಸಾಬ ಮಟಿಗೇರ, ಎ.ಆರ್. ವಚಡಿ ಉಪಸ್ಥಿತರಿದ್ದರು. ಮಹೆಬೂಬ ಫನಿಬಂದ ಕಾರ್ಯಕ್ರಮ ನಿರ್ವಹಿಸಿದರು.

loading...