ಸರ್ಕಾರ ಕಾಮಗಾರಿ ಗಂಭೀರವಾಗಿ ಕೈಗೊಂಡಿಲ್ಲ: ಗೋವಿಂದ ಕಾರಜೋಳ

0
17
loading...

ವಿಜಯಪುರ : ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಈ ಬಾರಿ ಮತ್ತೊಮ್ಮೆ ವಿಧಾನಸಭೆಯಲ್ಲಿ ಧ್ವನಿ ಎತ್ತುವುದಾಗಿ ಮಾಜಿ ಸಚಿವ ಗೋವಿಂದ ಕಾರಜೋಳ ಪ್ರಕಟಿಸಿದರು.
ಗುರುವಾರ ಬಿಜೆಪಿ ಸರ್ಕಾರದ ಸಾಧನೆಗಳನ್ನು ವಿವರಿಸಲು ಕರೆಯಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ನಗರದಲ್ಲಿ ವಿಮಾನ ನಿಲ್ದಾಣವಾಗಬೇಕು ಎಂಬುದು ನನ್ನ ಕನಸು ಕೂಡಾ. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ಅವಧಿಯಲ್ಲಿ ಈ ವಿಮಾನ ನಿಲ್ದಾಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿದ್ದೆ. ಸರ್ಕಾರಿ ಜಮೀನು ಸಾಕಾಗುವುದಿಲ್ಲ ಎಂದು ಅಗತ್ಯವಾದ ಜಮೀನು ಸಹ ಸ್ವಾಧೀನಪಡಿಸುವ ಕಾರ್ಯವನ್ನು ಕೈಗೊಂಡಿದ್ದೇ. ಆದರೆ ನಂತರ ಬಂದ ಸರ್ಕಾರಗಳು ಈ ಕಾಮಗಾರಿಯನ್ನು ಗಂಭೀರವಾಗಿ ಕೈಗೊಂಡಿಲ್ಲ. ಹಲವಾರು ಬಾರಿ ನಾನು ವಿಮಾನ ನಿಲ್ದಾಣ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಲು ಕೋರಿದರೂ ಸಹ ಸರ್ಕಾರಗಳಿಂದ ಸ್ಪಂದನೆ ದೊರಕಿರಲಿಲ್ಲ. ಈ ಬಾರಿ ಈ ವಿಷಯವನ್ನು ಸುಮ್ಮನೆ ಬಿಡುವುದಿಲ್ಲ, ಮತ್ತೊಮ್ಮೆ ಈ ವಿಷಯವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಕಾರಜೋಳ ತಿಳಿಸಿದರು.

ಶಾಸಕ ಯತ್ನಾಳ ಅವರು ವಿಜಯಪುರ-ಬಾಗಲಕೋಟೆ ಎರಡು ಜಿಲ್ಲೆಗೆ ಅನುಕೂಲವಾಗುವಂತೆ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ನನಗೆ ಮಾಹಿತಿ ಇಲ್ಲ, ಒಂದು ವೇಳೆ ಎರಡು ಜಿಲ್ಲೆಗಳ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಾಗವಿದ್ದರೆ ಅಲ್ಲಿ ನಿಲ್ದಾಣ ನಿರ್ಮಾಣವಾಗಲಿ ಎಂದರು.
ಅದರಂತೆ ರಾಜ್ಯಕ್ಕೂ ಮೋದಿ ಸರ್ಕಾರದ ಕೊಡುಗೆ ಅನನ್ಯ. ಧಾರವಾಡಕ್ಕೆ ಐಐಟಿ, 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸೌಕರ್ಯ, ರಾಜ್ಯದ 240 ಕ್ಕೂ ಅಧಿಕ ಜನೌಷಧಿ ಕೇಂದ್ರಗಳ ಸ್ಥಾಪನೆ, ಪ್ರಧಾನಮಂತ್ರಿ ಪಸಲ ಭೀಮಾ ಯೋಜನೆಯಡಿಯಲ್ಲಿ ರಾಜ್ಯದ ರೈತರು 11 ಸಾವಿರ ಕೋಟಿ ರೂ. ಪರಿಹಾರ ಪಡೆದಿರುವುದು ಹೀಗೆ ರೈತಪರವಾದ, ಅಭಿವೃದ್ಧಿ ಪರವಾದ ಯೋಜನೆಗಳನ್ನು ಕರ್ನಾಟಕಕ್ಕೆ ನೀಡಿದ ಪಟ್ಟಿ ದೊಡ್ಡದಾಗುತ್ತಲೇ ಹೋಗುತ್ತದೆ ಎಂದರು.

ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಮಾಜಿ ಶಾಸಕ ರಮೇಶ ಭೂಸನೂರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗರಾಜ ದೇಸಾಯಿ, ಆರ್.ಎಸ್. ಪಾಟೀಲ ಕುಚಬಾಳ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

loading...