ಸರ್ಕಾರ ಸೌಲಭ್ಯ ಪ್ರಯೋಜನ ಪಡೆದುಕೊಳ್ಳಿ: ಗುರುಪ್ರಸಾದ

0
9
loading...

ನರಗುಂದ: ಸರ್ಕಾರ ಕ್ಷೀರಭಾಗ್ಯ ಸೇರಿದಂತೆ ಸಮವಸ್ತ್ರ ಮತ್ತು ಇತರ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಬಿಇಒ ಜೆ.ಎನ್‌ ಗುರುಪ್ರಸಾದ ತಿಳಿಸಿದರು.
ಪಟ್ಟಣದ ಸರ್ಕಾರಿ ಶಾಸಕರ ಮಾದರಿ ಕೇಂದ್ರ ಶಾಲಾ ಸಂಖ್ಯೆ 1 ರಲ್ಲಿಯ ಶಿಕ್ಷಕ ಡಿ.ಆರ್‌. ಗದ್ದಿನಕೇರಿ ಅವರು ತಮ್ಮ ತಂದೆ ಸ್ಮರಣಾರ್ಥವಾಗಿ 40 ಮಕ್ಕಳಿಗೆ ಉಚಿತ ಶಾಲಾ ಬ್ಯಾಗಗಳನ್ನು ಜೂ. 15 ರಂದು ನಡೆದ ಕಾರ್ಯಕ್ರಮದಲ್ಲಿ ವಿತರಣೆ ಮಾಡಿದ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಬಿಇಒ ಅವರು, ಸರ್ಕಾರಿ ಶಾಲೆಗಳಲ್ಲಿ ಎಲ್ಲ ಸೌಲಭ್ಯಗಳನ್ನು ಒದಗಿಸಿದ್ದರೂ ಕೂಡಾ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗುತಿಲ್ಲ. ಮಕ್ಕಳ ಪಾಲಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಿ ಉತ್ತಮ ಶಿಕ್ಷಣ ಒದಗಿಸಿ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಬೇಕೆಂದು ತಿಳಿಸಿದರು.
ಶಾಲಾ ಮುಖ್ಯೋಪಾದ್ಯಾಯ ಎಸ್‌.ಐ. ಅಂಕಲಿ ಮಾತನಾಡಿ, ಶಿಕ್ಷಕ ಡಿ.ಆರ್‌. ಗದ್ದನಕೇರಿ ಅವರು ತಮ್ಮ ತಂದೆಯವರಾದ ಆರ್‌.ಎಂ. ಗದ್ದನಕೇರಿ ಅವರ ಸ್ಮರಣಾರ್ಥ ಸುಮಾರು 40 ಮಕ್ಕಳಿಗೆ ಉಚಿತ ಶಾಲಾ ಬ್ಯಾಗಗಳನ್ನು ವಿತರಣೆಮಾಢಿದ್ದಾರೆ. ಆರ್‌.ಎಂ. ಗದ್ದನಕೇರಿಯವರು ಶಿಕ್ಷಕರಾಗಿ ಸೇವೆ ಸಲ್ಲಿಸಿ ತಮ್ಮ ವಿಶ್ರಾಂತಿ ಜೀವನದಲ್ಲಿಯೂ ಶಿಕ್ಷಣಕೇತ್ರದಲ್ಲಿ ಹೆಚ್ಚಿನ ಶ್ರಮವಹಿಸಿದ್ದರು. ಅವರು ದಿವಂಗತರಾದರೂ ಕೂಡಾ ಅವರ ಪುತ್ರರಾದ ಡಿ.ಆರ್‌. ಗದ್ದನಕೇರಿಯವರು ಶಿಕ್ಷಣ ಪ್ರೇಮಿಗಳಾಗಿ ತಂದೆಯವರ ಆದರ್ಶದ ಗುಣಗಳಂತೆ ಶಿಕ್ಷಣ ಪಡೆಯುವ ಮಕ್ಕಳ ಹಿತಕ್ಕಾಗಿ ಶ್ರಮವಹಿಸುತ್ತಿರುವುದು ಶ್ಲಾಘನೀಯ ಕಾರ್ಯವೆಂದು ತಿಳಿಸಿದರು.
ಸಂಪನ್ಮೂಲ ಕೇಂದ್ರದ ಸಮನ್ವಯಧಿಕಾರಿ ಶ್ರೀಧರ ಬಡಿಗೇರ, ಎ.ಬಿ. ಕಲ್ಲಯ್ಯನಮಠ ಮಾತನಾಡಿದರು. ಶಿಕ್ಷಣ ಪ್ರೇಮಿ ನೀಲಪ್ಪ ಗುಡದನ್ನವರ, ಶಿಕ್ಷಕಿಯರಾದ ಎಸ್‌.ಎಸ್‌. ಪಾಣಿಗಟ್ಟಿ, ಗಿರೀಶ ದಾಸರ, ಎಸ್‌.ಜಿ. ಪೂಜಾರ ಉಪಸ್ಥಿತರಿದ್ದರು. ವ್ಹಿ.ವ್ಹಿ. ಕರಿಗಾರ, ಎಸ್‌.ಬಿ. ಸಿರಸಂಗಿ ನಿರ್ವಹಿಸಿದರು.

loading...