ಸಾಮಾನ್ಯ ಜನರ ಕೆಲಸ ವಿಳಂಭ: ಜಗನ್ನಾಥ ಆಕ್ರೋಶ

0
12
loading...

ಕನ್ನಡಮ್ಮ ಸುದ್ದಿ-ಕುಮಟಾ: ಸರ್ಕಾರಿ ಕಾರ್ಯಕ್ಕಾಗಿ ತಹಸೀಲ್ದಾರ್ ಕಚೇರಿಗೆ ತೆರಳುವ ಜನರನ್ನು ಮಾತನಾಡಿಸುವ ಸೌಜನ್ಯ ಕೂಡ ಅಲ್ಲಿನ ನೌಕರರಿಗಿಲ್ಲ. ಅದೇ ಏಜೆಂಟರ ಕೆಲಸವಾದರೆ ತಕ್ಷಣದಲ್ಲಿ ಮಾಡಿಕೊಡುತ್ತಾರೆ. ಸಾಮಾನ್ಯ ಜನರ ಕೆಲಸವಾದರೆ ವಿಳಂಭ ಧೋರಣೆ ಅನುಸರಿಸುತ್ತಾರೆ. ಇಂಥವರಿಂದ ಬಡಜನರಿಗೆ ತೊಂದರೆಯಾಗಿದೆ ಎಂದು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಜಗನ್ನಾಥ ನಾಯ್ಕ ಅವರು ಇಲಾಖೆಯ ನೌಕರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅವರು ಮಂಗಳವಾರ ಪಟ್ಟಣದ ತಾಲೂಕ ಪಂಚಾಯತ ಸಭಾಭವನದಲ್ಲಿ ತಾಪಂ ಅಧ್ಯಕ್ಷೆ ವಿಜಯಾ ಪಟಗಾರ ಅವರ ನೇತೃತ್ವದಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಮಾತನಾಡಿ, ತಹಸೀಲ್ದಾರ್ ಕಚೇರಿಯಲ್ಲಿ ಏಜೆಂಟ್‍ರ ಹಾವಳಿ ಹೆಚ್ಚಾಗಿರುವುದರಿಂದ ಅವರ ಮೂಲಕ ಹೋದರೆ ಮಾತ್ರ ಜನರಿಗೆ ಸರ್ಕಾರಿ ಸೌಲಭ್ಯ ಶೀಘ್ರವಾಗಿ ದೊರೆಯುತ್ತದೆ. ಇಲ್ಲವಾದರೆ ಜನರನ್ನು ಸತಾಯಿಸಲಾಗುತ್ತದೆ ಎಂದು ಹೇಳಿದಾಗ ತಾಪಂ ಅಧ್ಯಕ್ಷರು ಮತ್ತು ಬಹುತೇಕ ಸದಸ್ಯರು ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ್ ವಿ ಎಸ್ ಬಣಗಾರ ಅವರು, ಈ ಕುರಿತು ಕಚೇರಿಯ ನೌಕರರಿಗೆ ಕಿವಿಮಾತು ಹೇಳುವ ಜೊತೆಗೆ ಇಂಥ ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸುತ್ತೇನೆ ಎಂದು ಭರವಸೆ ನೀಡಿದರು.
ಅಕ್ರಮ ಮರಳುಗಾರಿಕೆಯ ಬಗೆಗೆ ಪ್ರಸ್ತಾಪ ಮಾಡಿದ ತಾಪಂ ಸದಸ್ಯರಾದ ಈಶ್ವರ ನಾಯ್ಕ ಹಾಗೂ ಮಹೇಶ ಶೆಟ್ಟಿ ಅವರು, ಕಂದಾಯ ಮತ್ತು ಪೆÇಲೀಸ್ ಇಲಾಖೆಗಳ ಸಹಕಾರದಲ್ಲಿಯೇ ಅಕ್ರಮ ಮರಳುಗಾರಿಕೆ ರಾಜಾರೋಷವಾಗಿ ನಡೆಯುತ್ತಿದೆ. ಚೆಕ್ ಪೆÇೀಸ್ಟ್, ಪೆÇಲೀಸ್ ಅಧಿಕಾರಿಗಳು ಶೆಟಿಂಗ್ ಮಾಡಿಕೊಂಡು ಅಕ್ರಮ ಮರಳುಗಾರಿಕೆ ಸಹಕಾರ ನೀಡುತ್ತಿದ್ದಾರೆ. ಅಕ್ರಮ ಮರಳುಗಾರಿಕೆಯನ್ನು ತಡೆಯಬೇಕಾದ ಅಧಿಕಾರಿಗಳು ಪೋಲೀಸ್‍ದಾರರನ್ನು ಬೆದರಿಸಿ ಹಣ ಪಡೆಯುತ್ತಿದ್ದಾರೆ. ಅಕ್ರಮ ದಂಧೆಕೋರರು ಮರಳುಗಾರಿಕೆ ನಡೆಸುತ್ತಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಆರೋಪಿಸಿದರು.

ಕೋಡ್ಕಣಿ ಗ್ರಾಪಂ ಅಧ್ಯಕ್ಷೆ ಸುಮಿತ್ರಾ ನಾಯ್ಕ ಮಾತನಾಡಿ, ಅಕ್ರಮ ಮರಳುಗಾರಿಕೆ, ಸಿಲಿಕಾನ್ ಸ್ಯಾಂಡ್ ಮತ್ತು ಚೀರೆ ಕಲ್ಲು ಸಾಗಣೆ ನಡೆಯುತ್ತದೆ ಎಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೆ, ಅಕ್ರಮ ದಂಧೆಕೋರರಿಗೆ ಇಂಥವರು ದೂರು ನೀಡಿದ್ದಾರೆಂದು ಮಾಹಿತಿ ನೀಡುವುದಲ್ಲದೇ ಅಕ್ರಮ ದಂಧೆಕೋರರಿಗೆ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತಾರೆ. ಏಲ್ಲೆಲ್ಲಿ ಅಕ್ರಮ ಮರಳುಗಾರಿಕೆ, ಸಿಲಿಕಾನ್ ಸ್ಯಾಂಡ್ ಮತ್ತು ಚೀರೆ ಕಲ್ಲು ಸಾಗಣೆ ನಡೆಯುತ್ತದೆ ಎಂಬ ಗ್ರಾಪಂವಾರು ಮಾಹಿತಿ ಸಂಗ್ರಹಿಸಿ, ಅದರಲ್ಲಿ ಅಕ್ರಮವಾಗಿ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಕ್ರಮ ಮರಳುಗಾರಿಕೆ, ಸಿಲಿಕಾನ್ ಸ್ಯಾಂಡ್ ಮತ್ತು ಚೀರೆ ಕಲ್ಲು ಸಾಗಣೆ ಮಾಡುವವರಿಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಹಸೀಲ್ದಾರ್ ಅವರು ತಿಳಿಸಿದರು.

ಸಭೆಯಲ್ಲಿ ತಾಪಂ ಉಪಾಧ್ಯಕ್ಷೆ ಗೀತಾ ಮುಕ್ರಿ, ಇಒ ಮಹೇಶ ಕುರಿಯವರ್, ಸದಸ್ಯರು, ವಿವಿಧ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

loading...