ಸಿದ್ದಾಪುರ ಪಟ್ಟಣ ಪಂಚಾಯಿತಿ ಮೀಸಲಾತಿ ತಿದ್ದುಪಡಿಗೆ ಆಗ್ರಹ

0
23
loading...

ಕಾರವಾರ: ಸಿದ್ದಾಪುರ ಪಟ್ಟಣ ಪಂಚಾಯತಕ್ಕೆ ಸಂಬಂಧಿಸಿದಂತೆ ಪ್ರಕಟಿಸಿದ ಕರಡು ಮೀಸಲಾತಿಯನ್ನು ತಿದ್ದುಪಡಿ ಮಾಡುವಂತೆ ಪಟ್ಟಣ ಪಂಚಾಯತ್‌ ಅಧ್ಯಕ್ಷೆ ಸುಮನಾ ಸತೀಶ ಕಾಮತ್‌ ನೇತೃತ್ವದಲ್ಲಿ ಸದಸ್ಯರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಅವರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಸಿದ್ದಾಪುರ ಪ.ಪಂ.ನಲ್ಲಿ 15 ಸ್ಥಾನಗಳಿದ್ದು ಮಹಿಳಾ ಮೀಸಲಾತಿ ಪ್ರಕಾರ ಶೇ.50ರಷ್ಟು ಮಹಿಳೆಯರಿಗೆ ಮೀಸಲಾಗಿಡಬೇಕು. ಹೀಗಾಗಿ ಇದರಲ್ಲಿ ಕನಿಷ್ಠ 8 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕಿತ್ತು. ಆದರೆ ಕೇವಲ 6 ಸ್ಥಾನಗಳನ್ನು ಮಾತ್ರ ಮಹಿಳೆಯರಿಗೆ ಮೀಸಲಿಟ್ಟಿದ್ದು ಮೀಸಲಾತಿ ನಿಯಮಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಲಾಗಿದೆ.
ಅಲ್ಲದೇ ಯಾವುದೇ ಮೀಸಲಾತಿಯನ್ನು ಒಂದೇ ಸ್ಥಾನ ಇದ್ದಲ್ಲಿ ಪ್ರಥಮವಾಗಿ ಮಹಿಳೆಗೆ ಮೀಸಲಿರಿಸಬೇಕಿತ್ತು. ಆದರೆ ಸಿದ್ದಾಪುರ ಪ.ಪಂ.ಗೆ ತಯಾರಿಸಿದ ಕರಡು ಮೀಸಲಾತಿಯಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ಬ ವರ್ಗಕ್ಕೆ ಒಂದೊಂದೇ ಸ್ಥಾನಗಳಿದ್ದು ಅವು ಸಂಬಂಧಿಸಿದ ವರ್ಗದ ಮಹಿಳೆಯರಿಗೆ ಮೀಸಲಿರಿಸಬೇಕಾಗುತ್ತದೆ. ಆದರೆ ಕರಡು ಪ್ರತಿಯಲ್ಲಿ ಸಂಬಂಸಿದ ವರ್ಗಕ್ಕೆ ಸಾಮಾನ್ಯ ಮೀಸಲಾತಿಯನ್ನು ಮಾತ್ರ ಪ್ರಕಟಿಸಲಾಗಿದೆ. ಹೀಗಾಗಿ ಇವೆರಡೂ ತಪ್ಪುಗಳನ್ನು ತಿದ್ದುಪಡಿ ಮಾಡಿ ಮೀಸಲಾತಿ ಬದಲಿಸಬೇಕು ಎಂದು ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಪ.ಪಂ.ಸದಸ್ಯ ಕೆ.ಜಿ.ನಾಯ್ಕ, ಗುರುರಾಜ್‌ ಶಾನಭಾಗ್‌ ಇನ್ನಿತರರು ಇದ್ದರು.

loading...