ಸೆಮಿಸ್‌ನಲ್ಲಿ ಮುಗ್ಗರಿಸಿದ ಸಿಂಧು

0
4
loading...

ಕೌಲಾಲಂಪುರ: ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿ ಫೈನಲ್ ನಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು ವಿಶ್ವದ ನಂಬರ್ ೧ ಆಟಗಾರ್ತಿ ಚೀನಾದ ತೈ ತ್ಸು ಯಿಂಗ್ ವಿರುದ್ಧ ಸೋಲಿನ ಆಘಾತ ಅನುಭವಿಸಿದರು.ಇಂದು ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ನಲ್ಲಿ ಪಿವಿ ಸಿಂಧು – ತೈ ತ್ಸು ಯಿಂಗ್ ವಿರುದ್ಧ ೧೫-೨೧, ೨೧-೧೯, ೧೧-೨೧ರ ನೇರ ಗೇಮ್ ಗಳಿಂದ ಸೋಲು ಅನುಭವಿಸಿದರು.ಮೊದಲ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದ ಸಿಂಧು ದ್ವಿತೀಯ ಸುತ್ತು ವಶಡಿಸಿಕೊಂಡರೂ ನಿರ್ಣಾಯಕ ಸುತ್ತಿನಲ್ಲಿ ಮತ್ತೆ ಎಡವಿದ ಪರಿಣಾಮ ಫೈನಲ್ ಮುಖ ಕಾಣದೆ ಹಿಂತಿರುಗಬೇಕಾಯಿತು.ಪಿವಿ ಸಿಂಧು ನಿನ್ನೆ ಸ್ಪೆÃನ್ ನ ಕರೊಲಿನ ಮರಿನ್ ವಿರುದ್ಧ ೨೨-೨೦, ೨೧-೧೯ ನೇರ ಸೆಟ್ ಗಳಿಂದ ಗೆದ್ದು ಸೆಮಿಫೈನಲ್ ಗೆ ಪ್ರವೇಶಿಸಿದ್ದರು.

loading...