ಸ್ಟಿಲ್ಟ್ ಸ್ಕೆಟಿಂಗ್ ಸಾಧನೆಯಲ್ಲಿ ವಿಶ್ವ ದಾಖಲೆಗೆ ಬಾಲಕ ಶ್ಯಾಮ್ ಸಜ್ಜು

0
21
loading...

ಕಾರವಾರ: ಸ್ಟಿಲ್ಟ್ (ಮರಕಾಲು)ಸ್ಕೆಟಿಂಗ್‍ನಲ್ಲಿ ಮೂರು ವಿಶ್ವ ದಾಖಲೆಯ ಸಾಹಸಗಾಥೆ ಮೆರೆಯಲು ಕೈಗಾದ 5 ವರ್ಷದ ಪೆÇೀರ ಶ್ಯಾಮ್ ಸುಮಂತ್ ಹೆಬ್ಳೇಕರ ಅಣಿಯಾಗಿದ್ದಾನೆ. ಜೂನ್ ಮೂರರಂದು ಕಾರವಾರದಲ್ಲಿ ಶ್ಯಾಮ ಸುಮಂತ್ ಕೈಗೊಳ್ಳಲಿರುವ ಸಾಹಸವನ್ನು ಇಂಗ್ಲೆಂಡಿನ ರೆಕಾಡ್ರ್ಸ್ ಹೋಲ್ಡರ್ ಪಬ್ಲಿಕ್, ಫರ್ಫೆಕ್ಟ್ ಬುಕ್ ಆಫ್ ರೆಕಾಡ್ರ್ಸ್,ಹೈ ರೇಂಜ್ ಆಫ್ ರೆಕಾಡ್ರ್ಸ್, ಏಷಿಯನ್ ಬುಕ್ ಆಫ್ ರೆಕಾಡ್ಸ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್ ಸಂಸ್ಥೆಗಳು ದಾಖಲೀಕರಿಸಿಕೊಳ್ಳಲಿವೆ. ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತರಬೇತುದಾರ ದಿಲೀಪ ಹಣಬರ ಕೈಗಾದ ಟೌನ್‍ಶಿಪ್‍ನಲ್ಲಿ ಜರುಗಿದ ಲಿಂಬೋ ಸ್ಕೆಟಿಂಗ್ ಸ್ಪರ್ಧೆಯಲ್ಲಿ ಶ್ಯಾಮ್ ಸುಮಂತ್ ಹೆಬ್ಳೇಕರ ಈಗಾಗಲೇ ಹಲವಾರು ದಾಖಲೆ ಬರೆದಿದ್ದಾನೆ.

ಈ ಬಾಲಕ ಇದುವರೆಗೂ ಜಗತ್ತಿನಲ್ಲಿ ಯಾರೂ ಮಾಡದ ಸ್ಟಿಲ್ಟ್ (ಮರಕಾಲು) ಸ್ಕೆಟಿಂಗ್‍ನಲ್ಲಿ ಸಾಧನೆಯ ವಿಶ್ವ ದಾಖಲೆ ಮಾಡಲು ಸಜ್ಜಾಗಿದ್ದಾನೆ.  ಮೊದಲಿಗೆ ಸ್ಟಿಲ್ಟ್ (ಮರಕಾಲು) ಸ್ಕೆಟಿಂಗ್‍ನಲ್ಲಿ ನಿರಂತರವಾಗಿ 2 ಕಿ.ಮೀ.ತನಕದ ಮಾರ್ಗವನ್ನು ಪ್ರತಿಗಂಟೆಗೆ 10 ಕಿ.ಮೀ. ವೇಗದಲ್ಲಿ 72 ಇಂಚು ಎತ್ತರದ ಕಮಾನುಗಳನ್ನು ದಾಟಿ ನಿಗದಿತ ಅವಧಿಯೊಳಗೆ ಕ್ರಮಿಸಲಿದ್ದಾನೆ. ನಂತರ ಅದೇ 72 ಇಂಚು ಎತ್ತರದ ಮಾರ್ಗದಲ್ಲಿ ಹಾಕಲಾಗಿರುವ ಕಮಾನುಗಳನ್ನು ನಿರಂತರವಾಗಿ 500 ಮೀಟರ್ ತನಕ ಹಿಮ್ಮುಖವಾಗಿ ಚಲಿಸುವುದರ ಮೂಲಕ ಎರಡನೇ ದಾಖಲೆಯ ಸಾಧನೆ ಮಾಡಲಿದ್ದಾನೆ. ಆನಂತರ ನಿರಂತರವಾಗಿ 500 ಮೀಟರ್ ತನಕ 87 ಇಂಚು ಎತ್ತರ ಕಮಾನುಗಳನ್ನು ಮುಮ್ಮುಖವಾಗಿ ಕೆಲವೇ ಕ್ಷಣಗಳಲ್ಲಿ ಕ್ರಮಿಸಿ ಮೂರನೇ ದಾಖಲೆ ಮೆರೆಯಲಿದ್ದಾನೆ ಎಂದು ತರಬೇತುದಾರ ದಿಲೀಪ್ ಹಣಬರ ಮಾಹಿತಿ ನೀಡಿದರು. ಸ್ಟಿಲ್ಟ್ (ಮರಕಾಲು) ಸ್ಕೆಟಿಂಗ್ ಇದೊಂದು ವಿಶಿಷ್ಠವಾದ ಸ್ಟಿಲ್ಟ್ ವಾಕ್ ಆಗಿದೆ. ಎರಡೂ ಕಾಲುಗಳಿಗೆ ಅವಶ್ಯಕ ಎತ್ತರದ ಮರದ ಕೋಲುಗಳನ್ನು ಕಟ್ಟಿ ಸ್ಕೆಟಿಂಗ್ ಅಳವಡಿಸಲಾಗುತ್ತದೆ. ಬಳಿಕ 2 ಕಿ.ಮೀ.,500 ಮೀಟರ್ ವ್ಯಾಪ್ತಿಯೊಳಗೆ 72 ಮತ್ತು 87 ಇಂಚ್‍ನ ಎತ್ತರದಲ್ಲಿ ಕಮಾನು ಅಳವಡಿಸಲಾಗುತ್ತದೆ. ಇದರಲ್ಲಿ ಶ್ಯಾಮ್ ತನ್ನ ಸಾಹಸ ಮೆರೆದು ದಾಖಲೆ ಬರೆಯಲಿದ್ದಾನೆ ಎಂದು ಕೋಚ್ ದಿಲೀಪ್ ಹಣಬರ ತಿಳಿಸಿದರು. ಇದೇ ಬರುವ ಜೂನ್ 3 ರಂದು ಬೆಳಗ್ಗೆ 9 ರಿಂದ 11 ಗಂಟೆಯವರೆಗೆ ನಗರದ ಕುಟಿನೋ ರಸ್ತೆಯಲ್ಲಿರುವ ಮಾರುತಿ ಮಂಗಲ ಕಾರ್ಯಾಲಯದಲ್ಲಿ ನಡೆಯಲಿರುವ ವಿವಿಧ ರೆಕಾಡ್ಸ್ ್ ಬರೆಯುವ ಕಂಪನಿಗಳ ಪ್ರತಿನಿಗಳ ಎದುರು ತಮ್ಮ ಪ್ರತಿಭೆಯನ್ನು ಶ್ಯಾಮ್ ಅನಾವರಣಗೊಳಿಸಲಿದ್ದಾನೆ ಎಂದರು. ಈ ಸಂದರ್ಭದಲ್ಲಿ ಸುಮಂತ್ ಹೆಬ್ಳೇಕರ,ಶೈಲೇಶ್ ಸೈಲ್,ಮನೋಜ್ ನಾಯ್ಕ ಇದ್ದರು. ಕಳೆದ ನಾಲ್ಕು ತಿಂಗಳುಗಳಿಂದ ಬಾಲಕ ಶ್ಯಾಮ್ ಸುಮಂತ್ ಹೆಬ್ಳೇಕರ್‍ನಿಗೆ ಈಗಾಗಲೇ ಸ್ಟಿಲ್ಟ್ (ಮರಕಾಲು) ಸ್ಕೆಟಿಂಗ್‍ನಲ್ಲಿ ಅವಶ್ಯಕ ತರಬೇತಿ ನೀಡಲಾಗಿದೆ. ನಗರದ ಮಾರುತಿ ಮಂಗಲ ಕಾರ್ಯಾಲಯದಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ರೆಕಾಡ್ರ್ಸ್ ಕಂಪನಿಗಳ ಪ್ರತಿನಿಗಳು ಬಾಲಕನ ಸಾಧನೆಯನ್ನು ದಾಖಲಿಸಿಕೊಳ್ಳಲಿದ್ದಾರೆ. ಜತೆಗೆ ಅಂದು ಇತರೆ ಸ್ಕೆಟಿಂಗ್‍ನಲ್ಲಿ ತರಬೇತಿ ಪಡೆದ ಮಕ್ಕಳು ಜಲ ಸಂರಕ್ಷಣೆ ಹಾಗೂ ಪರಿಸರ ರಕ್ಷಣೆಯ ಸಂದೇಶ ಸಾರುವ ಭಿತ್ತಿಪತ್ರಗಳನ್ನು ಹಿಡಿದು ಜನಜಾಗೃತಿ ಮೂಡಿಸಲಿದ್ದಾರೆ ಎಂದು ತರಬೇತುದಾರ ದಿಲೀಪ್ ಹಣಬರ ಹೇಳಿದರು. ಒಬ್ಬ ತಂದೆಯಾಗಿ ನನ್ನ ಮಗನಿಗೆ ಸ್ಟಿಲ್ಟ್ (ಮರಕಾಲು) ಸ್ಕೆಟಿಂಗ್‍ನಲ್ಲಿ ಸಾಧನೆ ಮೆರೆಯಲು ಎಲ್ಲ ರೀತಿಯ ಸಹಾಯ ಸಹಕಾರ ನೀಡುತ್ತಿದ್ದೇನೆ. ಇಂತಹ ಬೇರೆ ಪ್ರತಿಭಾವಂತ ಮಕ್ಕಳಿಗೆ ಪ್ರೇರಣೆ ನೀಡುವ ಉದ್ದೇಶದಿಂದ ವಿಶಿಷ್ಠವಾದ ಸ್ಟಿಲ್ಟ್ (ಮರಕಾಲು) ಸ್ಕೆಟಿಂಗ್‍ನ ವಿವಿಧ ಬುಕ್ ಆಫ್ ರೆಕಾಡ್ರ್ಸ್ ಕಂಪನಿಗಳು ಈ ಸಾಹಸದ ದಾಖಲೆ ಮಾಡಿದ ಬಗ್ಗೆ ಪ್ರಮಾಣ ಪತ್ರ ನೀಡಲಿವೆ ಎಂಬ ಬಾಲಕನ ಪಾಲಕ ಸುಮಂತ್ ಹೆಬ್ಳೇಕರ ತಿಳಿಸಿದರು.

loading...