ಸ್ಟಿಲ್ಟ್ ಸ್ಕೇಟಿಂಗ್: ವಿಶ್ವ ದಾಖಲೆ ಸಾಧಿಸಿದ ಕೈಗಾದ ಬಾಲಕ ಶ್ಯಾಮ್ ಹೆಬ್ಳೇಕರ್

0
31
loading...

ಕನ್ನಡಮ್ಮ ಸುದ್ದಿ-ಕಾರವಾರ: ಸ್ಟಿಲ್ಟ್ (ಮರಕಾಲು)ಸ್ಕೆಟಿಂಗ್‍ನಲ್ಲಿ ಮೂರು ವಿಶ್ವ ದಾಖಲೆ ಮಾಡುವುದರ ಮೂಲಕ ಇಂಗ್ಲೆಂಡಿನ ರೆಕಾಡ್ರ್ಸ್ ಹೋಲ್ಡರ್ ಪಬ್ಲಿಕ್, ಫರ್ಫೆಕ್ಟ್ ಬುಕ್ ಆಫ್ ರೆಕಾಡ್ರ್ಸ್, ಹೈ ರೇಂಜ್ ಆಫ್ ರೆಕಾಡ್ರ್ಸ್, ಏಷಿಯನ್ ಬುಕ್ ಆಫ್ ರೆಕಾಡ್ರ್ಸ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್‍ನಲ್ಲಿ 5 ವರ್ಷದ ಪುಟಾಣಿ ಬಾಲಕ ಶ್ಯಾಮ್ ಸುಮಂತ್ ಹೆಬ್ಳೇಕರ ಇಲ್ಲಿನ ಮಾರುತಿ ಮಂಗಲ ಕಾರ್ಯಾಲಯದಲ್ಲಿ ಭಾನುವಾರ ನಡೆದ ಪ್ರದರ್ಶನದಲ್ಲಿ ಸಾಹಸಗಾಥೆ ಮೆರೆದು ತನ್ನ ಹೆಸರಲ್ಲಿ ನೂತನ ದಾಖಲೆ ಬರೆಯಿಸಿಕೊಂಡಿದ್ದಾನೆ.

ಸ್ಟಿಲ್ಟ್ ಸ್ಕೆಟಿಂಗ್‍ನಲ್ಲಿ ಈಗಾಗಲೇ ತರಬೇತುದಾರ ದಿಲೀಪ್ ಹಣಬರ ಅವರಿಂದ ತರಬೇತಿ ಪಡೆದಿರುವ ಈ ಬಾಲಕ ಕೈಗಾ ಅಣುಸ್ಥಾವರದಲ್ಲಿ ಉದ್ಯೋಗಿಯಾಗಿರುವ ತಂದೆ ಸುಮಂತ್ ಹೆಬ್ಳೇಕರ ಅವರ ಬೆಂಬಲದೊಂದಿಗೆ ಬಾಲಕ ಇದುವರೆಗೂ ಜಗತ್ತಿನಲ್ಲಿ ಯಾರೂ ಮಾಡದ ಸ್ಟಿಲ್ಟ್ (ಮರಕಾಲು) ಸ್ಕೆಟಿಂಗ್‍ನಲ್ಲಿ ಸಾಧನೆಯ ವಿಶ್ವ ದಾಖಲೆ ಮೆರೆದಿದ್ದಾನೆ. ಮೊದಲಿಗೆ 72 ಇಂಚ್ ಎತ್ತರದ ಸ್ಟಿಲ್ಟ್ (ಮರಕಾಲು) ಸ್ಕೆಟಿಂಗ್‍ನಲ್ಲಿ ನಿರಂತರವಾಗಿ 2 ಕಿ.ಮೀ.ತನಕದ ಮಾರ್ಗವನ್ನು ಪ್ರತಿಗಂಟೆಗೆ 10 ಕಿ.ಮೀ. ವೇಗದಲ್ಲಿ ನಿಗದಿತ ಅವಯೊಳಗೆ ಕ್ರಮಿಸಿದ್ದಾನೆ. ನಂತರ ಅದೇ 72 ಇಂಚ್ ಎತ್ತರದ ಸ್ಟಿಲ್ಟ್ (ಮರಕಾಲು) ಸ್ಕೆಟಿಂಗ್‍ನಲ್ಲಿ ನಿರಂತರವಾಗಿ 500 ಮೀಟರ್ ತನಕ ಹಿಮ್ಮುಖವಾಗಿ ಚಲಿಸುವುದರ ಮೂಲಕ ಎರಡನೇ ದಾಖಲೆಯ ಸಾಧನೆ ಮಾಡಿದ್ದಾನೆ. ಆನಂತರ ನಿರಂತರವಾಗಿ 500 ಮೀಟರ್ ತನಕ 87 ಇಂಚ್ ಎತ್ತರದ ಸ್ಟಿಲ್ಟ್ (ಮರಕಾಲು) ಸ್ಕೆಟಿಂಗ್‍ನಲ್ಲಿ ಮುಮ್ಮುಖವಾಗಿ ಕೆಲವೇ ಕ್ಷಣಗಳಲ್ಲಿ ಕ್ರಮಿಸಿ ಮೂರನೇ ದಾಖಲೆ ಮೆರೆದಿದ್ದಾನೆ. ಅದರ ಜೊತೆಗೆ ರೋಲರ್ ಸ್ಕೆಟಿಂಗ್ ಮೂಲಕ 1 ಅಡಿ ಎತ್ತರದಲ್ಲಿ ಬೆಂಕಿ ಹಚ್ಚಿ ನಿಲ್ಲಿಸಲಾಗಿದ್ದ ಸರಳಿನ ಮಧ್ಯದಲ್ಲಿ ಕ್ಷಣಾರ್ಧದಲ್ಲಿ ದಾಟಿ ಸಾಹಸ ಮೆರೆದಿರುವುದು ವಿಶೇಷವಾಗಿ ದಾಖಲಾಯಿತು. ಸಾಹಸ ಪ್ರವೃತ್ತಿಯವರು ಛಲದಿಂದ ಅಸಾಧ್ಯವಾದದ್ದನ್ನು ಸಾಧ್ಯವಾಗಿಸಿ ಗುರಿ ಸಾಧಿಸುತ್ತಾರೆ. ಅಂಥವರಿಗೆ ಬುಕ್ ಆಫ್ ರೆಕಾಡ್ರ್ಸ್ ಉತ್ತಮ ವೇದಿಕೆಯನ್ನು ಒದಗಿಸುತ್ತದೆ ಎಂದು ಏಶೀಯನ್ ಬುಕ್ ಆಫ್ ರೆಕಾಡ್ರ್ಸ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್‍ನ ತೀರ್ಪುಗಾರ ಹರೀಶ್ ಆರ್.ಹೇಳಿದರು. ಅವರು ಸ್ಟಿಲ್ಟ್ (ಮರಕಾಲು)ಸ್ಕೆಟಿಂಗ್‍ನಲ್ಲಿ ಮೂರು ವಿಶ್ವ ದಾಖಲೆ ಬರದೆ ಬಾಲಕ ಶ್ಯಾಮ್ ಸುಮಂತ್ ಹೆಬ್ಳೇಕರನಿಗೆ ಸಂಸ್ಥೆಯ ಪ್ರಮಾಣ ಪತ್ರ ವಿತರಿಸಿದರು. ಈ ಸಂದರ್ಭದಲ್ಲಿ ರೊಲರ್ ಸ್ಕೆಟಿಂಗ್ ಸಂಸ್ಥೆಯ ಅಧ್ಯಕ್ಷ ಸುನೀಲ್ ಗಾಡ್ಗೀಳ್, ಸುಮಂತ್ ಹೆಬ್ಳೇಕರ, ಪೂಜಾ ಹೆಬ್ಳೇಕರ ಹಾಗೂ ರೆಕಾಡ್ರ್ಸ್ ಹೋಲ್ಡರ್ ಪಬ್ಲಿಕ್‍ನ ಪ್ರಸಾದ ಆರ್.ಜಿ, ಫರ್ಫೆಕ್ಟ್ ಬುಕ್ ಆಫ್ ರೆಕಾಡ್ರ್ಸ್‍ನ ಹರ್ಷವರ್ಧನ, ಹೈ ರೇಂಜ್ ಆಫ್ ರೆಕಾಡ್ರ್ಸ್‍ನ ತೀರ್ಪುಗಾರರು ಹಾಜರಿದ್ದರು.

loading...