ಸ್ಥಳೀಯ ಕಾರ್ಮಿಕರಿಗೆ ಆದ್ಯತೆ ನೀಡಲು ಆಗ್ರಹಿಸಿ ಪ್ರತಿಭಟನೆ

0
11
loading...

ಶಿಗ್ಗಾವಿ : ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಡೆದಿರುವ 6 ಲೈನ್ ಕಾಮಗಾರಿಯಲ್ಲಿ ಸ್ಥಳೀಯ ಕಾರ್ಮಿಕರಿಗೆ ಆದ್ಯತೆ ಕೊಡಬೇಕು, ಹೊರರಾಜ್ಯಗಳಿಂದ ಬಂದ ಕಾರ್ಮಿಕರಿಗೆ ಅವಕಾಶ ನೀಡಬಾರದು ಈಗಾಗಲೆ ಅಲ್ಲಿ ಕೆಲಸ ಮಾಡುತ್ತಿರುವ 13 ಜನ ಕಾರ್ಮಿಕರನ್ನು ಕಿತ್ತುಹಾಕಲಾಗಿದೆ ಅವರನ್ನು ತಕ್ಷಣ ಕೆಲಸಕ್ಕೆ ನೇಮಕ ಮಾಡಿಕೊಂಡು ಕಂಪನಿಯ ನಿಯಮಾನುಸಾರ ಯೋಗ್ಯ ಸಂಬಳ ನೀಡಬೇಕೆಂದು ಉತ್ತರ ಕರ್ನಾಟಕ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಕಾರ್ಮಿಕ ಹಿತರಕ್ಷಣಾ ವೇದಿಕೆ ಕಲ್ಯಾಣ ಅಧ್ಯಕ್ಷರು ಹಾಗೂ ಸದಸ್ಯರು ಕಾರ್ಮಿಕರು ಸೋಮವಾರ ತಹಶಿಲ್ದಾರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಮನವಿಯಲ್ಲಿ ಕಂಪನೀಯ ನಿಯಮದಂತೆ ಎಲ್ಲ ಸೌಲಬ್ಯಗಳನ್ನು ಒದಗಿಸಬೇಕು, ಕೆಲಸ ಮಾಡುವ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಬೇಕು, ವಾರಕ್ಕೆ ಒಮದು ರಜೆ ನಿಡಬೇಕು ಹಾಗೂ ಕಂಪನಿಯವರು ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಕಾರ್ಮಿಕರ ಸಂಘಡ ಗೌರವಯುತವಾಗಿ ನಡೆದುಕೊಳ್ಳಬೇಕು, ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಯಾವುದೇ ಮುನ್ಸೂಚನೆ ಇಲ್ಲದೆ ಏಕಾಏಕಿ ಕಿತ್ತು ಹಾಕುವದರಿಂದ ಕಾರ್ಮಿಕರು ತೀರ್ವ ತೊಮದರೆ ಅನುಭವಿಸುವಂತಾಗಿದ್ದು ಅವರು ಮನೆತನ ನಡೆಸುವದು ದುಸ್ತರವಾಗಿದೆ. ಕಾರಣ ಅವರನ್ನು ಮರು ನೇಮಕ ಮಾಡಿಕೊಂಡು ಕಾರ್ಮಿಕರಿಗೆ ಆದ ಅನ್ಯಾಯ ಸರಿಪಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಹಾಗೂ 15 ದಿನಗಳಲ್ಲಿ ಬೇಡಿಕೆ ಈಡೇರದಿದ್ದರೆ ಸಂಬಂಧ ಪಟ್ಟ ಕಂಪನಿಯ ಗೇಟನ್ನು ಬಮದಮಾಡಿ ಗೇಟಿನ ಎದುರು ಪ್ರತಿಭಟನೆ ಮಾಡಬೆಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಉತ್ತರ ಕರ್ನಾಟಕ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಕಾರ್ಮಿಕ ಹಿತರಕ್ಷಣಾ ವೇದಿಕೆ ಕಲ್ಯಾಣ ಅಧ್ಯಕ್ಷ ಶಂಕರಗೌಡ ಪಾಟೀಲ, ಡಿ.ಟಿ.ಪಾಟೀಲ ಸೇರಿದಂತೆ ಸಂಘಟನೆಯ ಸದಸ್ಯರು ಕಾಮ8ರ್ಇಕರು ಉಪಸ್ತಿತರಿದ್ದರು.

loading...