ಪೌರಕಾರ್ಮಿಕರಿಗೆ ರೇನ್‍ಕೋಟ್ ವಿತರಿಸಿದ ಶಾಸಕ ಬೇನಕೆ

0
55
loading...

ಪೌರಕಾರ್ಮಿಕರಿಗೆ ರೇನ್‍ಕೋಟ್ ವಿತರಿಸಿದ ಶಾಸಕ ಬೇನಕೆ
ಕನ್ನಡಮ್ಮ ಸುದ್ದಿ-ಬೆಳಗಾವಿ: ನಗರವನ್ನು ಪ್ರತಿನಿತ್ಯ ಸ್ವಚ್ಛವಾಗಿಸುವ ಪೌರಕಾರ್ಮಿಕರಿಗೆ ಮಳೆಗಾಲದಲ್ಲಿ ಅವರ ಆರೋಗ್ಯವನ್ನು ಕಾಪಡಿಕೊಳ್ಳುವಂತೆ ಕರೆ ನೀಡುವುದರ ಜೊತೆಗೆ ಶಾಸಕ ಅನಿಲ ಬೇನಕೆ ಪೌರಕಾರ್ಮಿಕರಿಗೆ ರೇನ್‍ಕೋಟ್ ವಿತರಿಸಿದರು.
ಬುಧವಾರ ಚವಾಟ್ ಗಲ್ಲಿಯಲ್ಲಿರುವ ಕಚೇರಿಯಲ್ಲಿ 60 ಜನ ಪೌರಕಾರ್ಮಿಕರಿಗೆ ಸೇರಿದಂತೆ ಉತ್ತರ ಮತಕ್ಷೇತ್ರದ ಎಲ್ಲಾ ಕಾರ್ಮಿಕರಿಗೂ ರೇನ್ ಕೋಟ್ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಪುಂಡಲಿಕ್ ಪರೀಕ್, ಕನ್ನಬಾಯಿ ಠಕ್ಕರ್, ಮಹಾದೇವ ಮೋಹತೆ, ಸತೇಶ ನಾಂದೋಳ್ಕರ್, ದೀಪೇಂದ್ರ ಟಕರ್, ಯಲ್ಲಪ್ಪ ಠಕ್ಕರ್, ಬಿ.ಬಿ ಸಲದಗೆ ಹಾಗೂ ಪೌರಕಾರ್ಮಿಕರು ಉಪಸ್ಥಿತರಿದರು.

loading...