ಸ್ವಾರ್ಥ ನಾಯಕರು ತುಂಬಿದ ರಾಜ್ಯ ಸಂಪುಟ : ಮುನವಳ್ಳಿ

0
33

 

loading...

ಕನ್ನಡಮ್ಮ ಸುದ್ದಿ- ಬೆಳಗಾವಿ: ರಾಜ್ಯದಲ್ಲಿ ರಚನೆಗೊಂಡಿರುವ ಮೈತ್ರಿ ಸರ್ಕಾರದ ಸಂಪುಟವು ಸ್ವಾರ್ಥ ತುಂಬಿದ ನಾಯಕ ಸಂಪುಟವಾಗಿದೆ. ಕಾಂಗ್ರೆಸ್ ಅವನತಿಯ ಹಾದಿ ಹಿಡಿಯುವ ಸಾದ್ಯತೆಗಳಿವೆ ಎಂದು ಕೆಪಿಸಿಸಿ ಸದಸ್ಯ ಶಂಕರ ಮುನವಳ್ಳಿ ಹೇಳಿದರು.

ಅವರು ಬುಧವಾರ ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿ,ಪರಮೇಶ್ವರ ‌,ಸಿದ್ದರಾಮಯ್ಯವರ ಉದ್ದಟನದಿಂದ ಕಾಂಗ್ರೆಸ್‌ ಅವನತಿಯ ಹಾದಿ ಹಿಡಿಯುವ ಲಕ್ಷಣಗಳು ಕಾಣುತ್ತಿವೆ. ಕಾಂಗ್ರೆಸ್ ಪಕ್ಷದಿಂದ ರಾಹುಲ್ ಗಾಂಧಿ ಯನ್ನು ಪ್ರಧಾನಿ ಯನ್ನಾಗಿ ಮಾಡುವ ಇಚ್ಚೆ ಇದ್ದರೆ ನಾಯಕರು ತಮ್ಮ ವ್ಯಯಕ್ತಿಕ ವರ್ಚಸ್ಸು, ಉದ್ದಟನವನ್ನು ಬಿಟ್ಟು ಒಂದಾಗಿ ಕೆಲಸ ಮಾಡಬೇಕು ಎಂದರು.

ಹೊಟ್ಟೆ ಕಿಚ್ಚಿನಿಂದ ಕಾಂಗ್ರೆಸ್ ಪಕ್ಷವನ್ನು ಕಟ್ಟಲು ಸಾದ್ಯವಿಲ್ಲ.ಪರಿಶಿಷ್ಟ ಜಾತಿಯವರನ್ನು ಸಂಪುಟ ನಿರ್ಲಕ್ಷ್ಯ ಮಾಡಿದೆ.ಕಾಂಗ್ರೆಸ ಪಕ್ಷ ಎಚ್ಚತ್ತು ಕೊಳ್ಳದೆ ಇದ್ದರೆ ಲೋಕ ಸಭಾ ಚುನಾವಣೆಯಲ್ಲಿ ಅದೋಗತಿ ಹಾದಿ ಹಿಡಿಯಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪವನ ದುವೇಕರ, ಮಾರುತಿ ಚೌಗಲೆ, ದತ್ತಾ ಬಿಲೋವಾರ ಸೇರಿದಂತೆ ಇತರರು ಇದ್ದರು.

loading...