ಹಲವು ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿ ಕುಂಟಿತ: ಬೆನಕೆ

0
22
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ತಮ್ಮ ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಬಗ್ಗೆ ಪರಿಶೀಲನೆ ನಡೆಸುವ ಮೂಲಕ ಅಲ್ಲಿನ ಸಮಸ್ಯೆಗಳನ್ನು ಆಲಿಸಿದರು.
ಸೋಮವಾರದಂದು ರುಕ್ಮಿಣಿ ನಗರ ಸೇರಿದಂತೆ ಸುತ್ತಮುತ್ತಲಿನ ಭೇಟಿ ನೀಡಿ ರಸ್ತೆ, ಗಟಾರು, ಒಳಚರಂಡಿಗಳ ದುಸ್ತಿತಿಗಳ ಬಗ್ಗೆ ಸ್ಥಳಿಯರೊಂದಿಗೆ ಚರ್ಚಿಸಿದರು. ಇದೇ ವೇಳೆ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಇಲಾಖೆ ಹಾಗೂ ಮಾಜಿ ಶಾಸಕರ ನಿರ್ಲಕ್ಷ್ಯದಿಂದ ನಗರದ ಅನೇಕ ಪ್ರದೇಶಗಳಲ್ಲಿ ಅಭಿವೃಧ್ಧಿಯು ಕುಂಟಿತಗೊಂಡಿದ್ದು, ಅವುಗಳ ಪರಿಹಾರಕ್ಕಾಗಿ ಸಂಭಂದಿಸಿದ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡುತ್ತೇನೆ ಹಾಗೂ ಆದಷ್ಟು ಬೇಗನೆ ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದ ಸ್ಥಳಿಯ ಹಿರಿಯರು, ನಾಗರೀಕರು ಉಪಸ್ಥಿತರಿದ್ದರು.

loading...