ಹಳೆ ವೈಷಮ್ಯ, ಅನೈತಿಕ ಸಂಬಂಧವೇ ಕೊಲೆ ಕಾರಣ : ಎಸ್ಪಿ

0
31
loading...

ಕೊಪ್ಪಳ : ಜೂನ್‌ 9ರಂದು ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುದರಿಮೋತಿ ಗ್ರಾಮದ ವ್ಯಾಪ್ತಿಯ ಕುದರಿಮೋತಿ-ಚಿಲಕಮುಖಿ ರಸ್ತೆಯಲ್ಲಿ ನಡೆದಿದ್ದ ಚಿಲಕಮುಖಿ ಗ್ರಾಮದ ಹನುಮಂತಪ್ಪ ಬಾಳಪ್ಪ ದಳಪತಿ(43) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಡಾ. ಅನೂಪ್‌ ಶೆಟ್ಟಿ ತಿಳಿಸಿದರು.
ಕೊಲೆ ಪ್ರಕರಣದ ಕುರಿತು ಗುರುವಾರ ಬೆಳಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೂಲತಃ ಅದೇ ಗ್ರಾಮದ ಸಧ್ಯ ಕೊಪ್ಪಳದಲ್ಲಿ ವಾಸವಾಗಿರುವ ವೀರಣ್ಣ ತಿಮ್ಮಣ್ಣ ಕಟ್ಟಿ, ಪುಣ್ಯಮೂರ್ತಿ ಮಲ್ಲಪ್ಪ ಬಂಡಾರ ಹಾಗೂ ರಮೇಶ ನಿಂಗಪ್ಪ ಕೊಲೆ ಆರೋಪಿಗಳಾಗಿದ್ದಾರೆ.
ಹಳೇಯ ದ್ವೇಷಕ್ಕೆ ಹನಮಂತಪ್ಪನ ಕೊಲೆ ಮಾಡಲಾಗಿದೆ. ಪ್ರಕರಣ ಬೇವೂರ ಪೊಲೀಸ್‌ ಠಾಣೆಯಲ್ಲಿ ದಾಖಲು, ಐಪಿಸಿ 302, & 303 ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳು ಆಸ್ತಿ ವೈಷಮ್ಯ ಹಾಗೂ ಮೃತ ಹನುಮಂತ ಪ್ರಮುಖ ಆರೋಪಿ ವೀರಣ್ಣ ಎಂಬಾತನ ಪತ್ನಿ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು. ಇದಲ್ಲದೆ ವೀರಣ್ಣ ಎಂಬಾತನಿಗೆ ಮೇಲಿಂದ ಮೇಲೆ ಆಸ್ತಿ ವಿಷಯವಾಗಿ ಕಿರುಕುಳ ನೀಡುತ್ತಿದ್ದರಿಂದ ಬೇಸತ್ತು ಪುಣ್ಯಮೂರ್ತಿ ಎಂಬಾತನೊಂದಿಗೆ ಕೊಲೆ ಮಾಡುವ ಸಂಚು ರೂಪಿಸಿದ್ದರು.
ಚಿಲಕಮುಖಿ ಗ್ರಾಮದ ರಮೇಶ್‌ ಎಂಬಾತನೊಂದಿಗೆ ಕುಡಿಯಲು ಕೊಪ್ಪಳಕ್ಕೆ ಕರೆತಂದು ರಾತ್ರಿ ಆತನಿಗೆ ಕುಡಿಸಿದ್ದಾರೆ. ನಂತರ ಇವರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ನಂತರ ಚಿಲಕಮುಖಿ ಗ್ರಾಮಕ್ಕೆ ಹೋಗುವಾಗ ಎರಡು ಹರಿತವಾದ ಮಚ್ಚುಗಳಿಂದ ಕೊಚ್ಚಿ ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು. ಹನುಮಂತನು ವೀರಣ್ಣ ಎಂಬಾತನನ್ನು ಈ ಹಿಂದೆ ಒಂದು ಕೇಸಿನಲ್ಲಿ ಸಿಕ್ಕಿ ಹಾಕಿಸಿದ್ದನು. ಇದಲ್ಲದೆ 2005ರಲ್ಲಿ ವೀರಣ್ಣನ ಪತ್ನಿ ಮೇಲೆ ಅತ್ಯಾಚಾರ ಎಸಗಿದ್ದನು ಎಂದು ಆರೋಪಿ ಆರೋಪಿಸಿದ್ದಾನೆ. ಅದಲ್ಲದೆ ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಇದ್ದ ಕಾರಣ ಆತನನ್ನು ಸಂಚು ರೂಪಿಸಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಗಳ ವಿರುದ್ಧ ಐಪಿಸಿ 201,302 ಅಡಿ ಬೇವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಡಿಎಸ್‌ಪಿ ಎಸ್‌.ಎಂ. ಸಂದಿಗವಾಡ, ಸಿಪಿಐ ರಮೇಶ್‌ ರೊಟ್ಟಿ, ಬೇವೂರು ಪಿಎಸ್‌ಐ ನಾಗರಾಜ ಇದ್ದರು.

loading...