ಹುಚ್ವು ನಾಯಿ ಹಾವಳಿ:ದೊಣ್ಣೆ ಹಿಡಿದು ಹೋರ ಬರುತ್ತಿರುವ ಗ್ರಾಮಸ್ಥರು

0
30
loading...

ಹುಚ್ವು ನಾಯಿ ಹಾವಳಿ:ದೊಣ್ಣೆ ಹಿಡಿದು ಹೋರ ಬರುತ್ತಿರುವ ಗ್ರಾಮಸ್ಥರು
ಕನ್ನಡಮ್ಮ ಸುದ್ದಿ:ಹುಕ್ಕೇರಿ28 ಗ್ರಾಮದಲ್ಲಿ ಹುಚ್ಚ ನಾಯಿ ಹಾವಳಿಗೆ ಬೆಚ್ಚಿ ಬಿದ್ದ ಗ್ರಾಮಸ್ಥರು ಮನೆಯಿಂದ ಹೋರಗೆ ಬರಬೆಕಾದರೆ ದೊಣ್ಣೆ ಹಿಡಿದು ಬರುವ ಪರಿಸ್ಥಿತಿ ತಾಲೂಕಿನ ಗುಡಸ ಗ್ರಾಮದಲ್ಲಿ ನಿರ್ಮಾಣವಾಗಿದೆ.
ಬುದವಾರ ಗುಡಸ ಗ್ರಾಮದಲ್ಲಿ ಎಲ್ಲಿಂದಲೊ ಬಂದ ನಾಯಿ ಸಿಕ್ಕ ಸಿಕ್ಕವರ ಮೇಲೆ ದಾಳಿಮಾಡಲಾರಂಬಿಸಿತು ಇದರಿಂದ ಗ್ರಾಮದಲ್ಲಿ ಜನರು ಭಯಭೀತರಾಗಿದ್ದು. ಗ್ರಾಮದಲ್ಲಿ ಈಗಾಗಲೆ ಎರಡು ಚಿಕ್ಕ ಮಕ್ಕಳಿಗೆ ಕಚ್ಚಿ ಗಾಯಗೊಳಿಸಿದ್ದು ಒಂದುವರೆ ವರ್ಷದ ಹಸೂಗೂಸು ಅಜಿಂತ್ಯ ಹಾಗು 15 ವರ್ಷದ ಬಾಲಕ ಕಿರಣ ಚಿಕ್ಕಾನಿ ಎಂಬ ಗಾಯಾಳಿಯನ್ನು ಗುಡಸ ಗ್ರಾಂ, ಪಂ, ಅಭಿವೃದ್ದಿ ಅಧಿಕಾರಿ ಅವಿನಾಶ ಹೋಳೆಪ್ಪಗೊಳ ಹಾಗು ಗ್ರಾಂ ಪಂ, ಸದಸ್ಯ ಲಘಮನ್ನ ವಡ್ಡರ ಅವರ ನೆತ್ರತ್ವದಲ್ಲಿ ಪ್ರಥಮ ಚಿಕಿತ್ಸೆ ಹುಕ್ಕೇರಿ ಸರಕಾರಿ ಆಸ್ಪತ್ರೆಯಲ್ಲಿ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಹುಚ್ಚು ನಾಯಿ ಈಗ ಬರುತ್ತೆ ಆಗ ಬರುತ್ತೆ ಎಂಬ ಭಯದಲ್ಲಿ ಗುಡುಸ ಗ್ರಾಮಸ್ಥರು ಕಾಲ ಕಳೆಯುತ್ತಿದ್ದು ಹುಚ್ಚು ನಾಯಿಯನ್ನು ಹೊಡಯಲು ಈಡಿ ಗ್ರಾಮವೇ ಕಾವಲಿಗೆ ನಿಂತಿದೆ. ಇನ್ನೂ ಗುಡುಸ ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ಸದಸ್ಯರಯ ಕೂಡ ಹುಚ್ಚು ನಾಯಿ ಹಿಡಿಯಲು ಸಕಲ ಕ್ರಮಗಳನ್ನ ಕೈಗೊಂಡಿದ್ದು ಹುಚ್ಚು ನಾಯಿ ಹಿಡಿಯಲು ಬಲೆ ಬೀಸಿದ್ದಾರೆ

ಬಾಕ್ಸ—-
ನಾಯಿಯ ಭಯದಿಂದ ಗ್ರಾಮದಲ್ಲಿ ಜನರು ಮನೆಯಿಂದ ಹೊರ ಬರಬೇಕಾದರೆ ದೊಣ್ಣೆ ಹಿಡಿದು ಹೋರ ಬರುತ್ತಿದ್ದಾರೆ. ಗುಡಸ ಗ್ರಾಂ,ಪಂ, ಅಧಿಕಾರಿಗಳು ಈಗಾಗಲೆ ನಾಯಿ ಹೀಡಿಯಲು ತಂಡ ರಚಿಸಿದ್ದಾರೆ. ನಾಯಿ ಬೇರೆ ಗ್ರಾಮಕ್ಕೆ ಓಡಿ ಹೋಗಿರುವ ಸಾಧ್ಯತೆಗಳಿದ್ದು ಆದರೂ ಜನರು ಜಾಗೃತೆಯಿಂದ ಇರಲು ಗ್ರಾಮ ಪಂಚಾಯತಿ ವತಿಯಿಂದ ಡಂಗುರ ಸಾರಲಾಗಿದೆ.
ಸುಜಾತಾ ಮಲ್ಲೀಕಾರ್ಜುನ ಪಟ್ಟಣಶೆಟ್ಟಿ, ಗ್ರಾಂ,ಪಂ, ಸದಸ್ಯ ಗುಡಸ.

loading...