ಹೊಳೆಗದ್ದೆ ಗ್ರಾಮಸ್ಥರು ಪೊಲೀಸ್ ಠಾಣೆಗೆ ಮುತ್ತಿಗೆ

0
14
loading...

ಕುಮಟಾ : ತಾಲೂಕಿನ ದೇವಗಿರಿ ಗ್ರಾಮ ಪಂಚಾಯತ ವ್ಯಾಪ್ತಿಯ ಹೊಳೆಗದ್ದೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವನ್ನು ತಕ್ಷಣ ತಡೆಯಬೇಕೆಂದು ಒತ್ತಾಯಿಸಿ ಆ ಭಾಗದ ಮಹಿಳೆಯರು ಹಾಗೂ ಸಾರ್ವಜನಿಕರು ಶನಿವಾರ ಪೆÇಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ಹೊಳೆಗದ್ದೆಯಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟದಿಂದ ಈ ಭಾಗದ ಯುವಕರು, ಶಾಲಾ-ಕಾಲೇಜ್ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಹಲವು ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಈ ದುಶ್ಚಟಕ್ಕೆ ಬಲಿಯಾದ ಯುವಕರಿಂದ ಅಪರಾಧ ಕೃತ್ಯಗಳು ದಿನದಿಂದ ದಿನಕ್ಕೆ ಹೆಚಾಗುತ್ತಿವೆ. ಈ ಅಕ್ರಮ ದಂಧೆಯಲ್ಲಿ ದಯಾನಂದ ಕಾಮೇಶ್ವರ ನಾಯ್ಕ ಸೇರಿದಂತೆ ಬಹುತೇಕರು ಈ ಅಕ್ರಮ ದಂಧೆಯನ್ನು ನಡೆಸುತ್ತಿರುವುದರಿಂದ ಈ ಕುರಿತು ಗ್ರಾಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರಿಂದ ಕೆಲ ದಿನಗಳಲ್ಲಿ ಅಕ್ರಮ ಮದ್ಯದ ದಂಧೆ ನಿಂತಿತ್ತು. ಈಗ ಮತ್ತೆ ನಮ್ಮ ಗ್ರಾಮದಲ್ಲಿ ಅಕ್ರಮ ಮದ್ಯದ ದಂಧೆ ವ್ಯಾಪಕವಾಗಿ ಶುರುವಾಗಿದೆ. ಈ ಅಕ್ರಮ ದಂಧೆ ಚಟುವಟಿಕೆಯನ್ನು ಶಾಶ್ವತವಾಗಿ ಬಂದ್ ಮಾಡಿಸಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಹಿಳೆಯರು ಹಾಗೂ ಸಾರ್ವಜನಿಕರು ಪೆÇಲೀಸರನ್ನು ಒತ್ತಾಯಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ದೇವಗಿರಿ ಗ್ರಾಪಂ ಅಧ್ಯಕ್ಷ ಎಸ್ ಟಿ ನಾಯ್ಕ ಅವರು, ಹೊಳೆಗದ್ದೆಯಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ನಿಲ್ಲಿಸುವಂತೆ ಪಂಚಾಯಿತಿಯಿಂದ ಅನೇಕ ಬಾರಿ ಅಬಕಾರಿ ಅಧಿಕಾರಿಗೆ ಮನವಿ ಸಲ್ಲಿಸಿದರೂ ಇನ್ನುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಈ ಅಬಕಾರಿ ಇಲಾಖೆಯ ಸಹಕಾರದಿಂದಲೇ ನಮ್ಮ ಭಾಗದಲ್ಲಿ ಅಕ್ರಮ ಮದ್ಯದ ದಂಧೆ ರಾಜಾರೋಶವಾಗಿ ನಡೆಯುತ್ತಿದೆ.

loading...