371ಜೆ ಅನುದಾನದ ಸಮರ್ಪಕ ಸದ್ಬಳಕೆ : ಶ್ರೀನಿವಾಸ

0
15
loading...

ಕನ್ನಡಮ್ಮ ಸುದ್ದಿ-ಕೊಪ್ಪಳ : ಸತತ ಹೋರಾಟದ ಫಲವಾಗಿ 371ಜೆ ಕಲಂ ಈ ಭಾಗಕ್ಕೆ ಜಾರಿಯಾದರೂ ಸಹ ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ, 371ಜೆ ಕಲಂ ಸಮರ್ಪಕ ಅನುಷ್ಠಾನಗೊಳಿಸಲು ಮತ್ತು ಕಾನೂನು ಬದ್ದ ಮೀಸಲಾತಿ ಹಾಗೂ ಅನುದಾನವನ್ನು ಸದ್ಬಳಕೆ ಮಾಡಲು ತಮ್ಮನ್ನು ಬೆಂಬಲಿಸುವುಂತೆ ಕೆ.ಬಿ.ಶ್ರೀನಿವಾಸ್ ಹೇಳಿದರು.

ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಕೆ.ಬಿ.ಶ್ರೀನಿವಾಸ್ ವಿವಿದಡೆ ಮತ ಯಾಚನೆ ಮಾಡಿ ಕನ್ನಡಮ್ಮ ದೊಂದಿಗೆ ಮಾತನಾಡಿದ ಅವರು ಮೊದಲ ಪ್ರಾಶಸ್ತ್ಯದ ಮತ ನೀಡಿ ಆಯ್ಕೆ ಮಾಡಿದರೆ ಪರಿಷತ್‍ನಲ್ಲಿ ನಿಮ್ಮೆಲ್ಲರ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಗೆಲುವಿನ ಬಗ್ಗೆ ತುಂಬಾ ಆತ್ಮವಿಶ್ವಾಸವನ್ನು ಹೊಂದಿದ್ದು, ಪಕ್ಷದ ನಾಯಕರ, ಕಾರ್ಯಕರ್ತರ ಶ್ರಮ ಹಾಗೂ ಪದವೀಧರರ ಒಲವು ತಮ್ಮಗಿದ್ದು, ತಾವು ಹಾಕಿಕೊಂಡಿರುವ ಕಾರ್ಯಕ್ರಮಗಳು ಹಾಗೂ ನನ್ನ ಅನುಭವವನ್ನು ನೋಡಿ ಮತದಾರರ ಬೆಂಬಲದಿಂದ ಖಡಿಂತ ಗೆಲುವು ಸಾಧಿಸುವದಾಗಿ ಹೇಳಿದರು. ಸಮಗ್ರ ಹೈದರಾಬಾದ್-ಕರ್ನಾಟಕ ಪ್ರದೇಶದ ವ್ಯಾಪ್ತಿಗೆ ಬರುವ ಎಲ್ಲಾ ಪದವಿಧರರಿಗೆ, ಶಿಕ್ಷಕರಿಗೆ ಮತ್ತು ಮಹಿಳೆಯರಿಗೆ, 371 (ಜೆ) ಕಾಯ್ದೆಯ ಸೌಲಭ್ಯಗಳನ್ನು ಅನುಷ್ಠಾನಗೊಳಿಸಲು ಹಾಗೂ ಮೀಸಲಾಗಿರುವ ಸಂಪೂರ್ಣ ಅನುದಾನವನ್ನು ಎಲ್ಲಾ 41 ಕ್ಷೇತ್ರಗಳಲ್ಲೂ ಸದುಪಯೋಗ ಮಾಡಲು ಶಾಸಕರ ಜೊತೆಗೂಡಿ ಶ್ರಮಿಸುವದಾಗಿ ಭರವಸೆ ನೀಡಿದ ಅವರು ಹೈದರಾಬಾದ್-ಕರ್ನಾಟಕ ಪ್ರದೇಶದ 6 ಜಿಲ್ಲೆಗಳಿಗೂ ಎಲ್ಲಾ ರೀತಿಯ ಉದ್ಯೋಗವಕಾಶಗಳನ್ನು ಕಲ್ಪಿಸಲು ಹಾಗೂ ಸ್ವಾವಲಂಬಿಗಳಾಗಿ, ಉಧ್ಯಮಿಗಳಾಗಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಗನೆಗಳ ಸೌಲಭ್ಯಗಳನ್ನು ಒದಗಿಸಲು ಪ್ರಮಾಣಿಕ ಯತ್ನಿಸುವದಾಗಿ ಭರವಸೆಯನ್ನು ನೀಡಿದರು.

loading...