ಅಂಡಮಾನ ದ್ವೀಪದಲ್ಲಿ ಕಂಪಿಸಿದ ಭೂಮಿ, ಬೆಚ್ಚಿ ಬಿದ್ದ ಜನರು

0
16
loading...

ನವದೆಹಲಿ : ಅಂಡಮಾನ್ ದ್ವೀಪ ಪ್ರದೇಶ ಕೆಲವೆಡೆ ಇಂದು ನಸುಕಿನ ಜಾವ 2.00 ಗಂಟೆಯ ಆಸು ಪಾಸು ಭೂಕಂಪ ಸಂಭವಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಸಂಭವಿಸಿದ ಭೂಕಂಪನವು 10 ಕಿ.ಮೀ ಆಳದವರೆಗೆ ಕಂಪನ ಉಂಟಾಗಿದ್ದು ಯಾವುದೇ ಸಾವು-ನೋವುಗಳ ಕುರಿತು ವರದಿಯಾಗಿಲ್ಲ. ಭೂಕಂಪನದ ತೀವ್ರತೆಯು 5.2 ರಷ್ಟಿದೆ ಎಂದು ಕಂಡುಬಂದಿದೆ. ಇದರಿಂದ ಜನರಲ್ಲಿ ಕೆಲ ಕಾಲ ಭಯದ ವಾತಾವರಣ ಉಂಟಾಗಿದ್ದು ಮಲಗಿದ್ದವರೆಲ್ಲರು ಆಚೆ ಬಂದು ರಾತ್ರಿ ಕಳೆದಿದ್ದಾರೆ.
ಬುಧವಾರ, ಬೆಳಗ್ಗೆ 5.25 ಕ್ಕೆ 4.5 ರಷ್ಟು ಭೂಕಂಪನದ ತೀವ್ರತೆ ಇತ್ತು ಎನ್ನವುದು ರಿಕ್ಟರ್ ಮಾಪಕದಿಂದ ತಿಳಿದು ಬಂದಿದೆ.

loading...