ಅಕ್ರಮದಲ್ಲಿ ಸಂಗ್ರಹಿಸಿದ ಅನ್ನಭಾಗ್ಯದ 6 ಕ್ವಿಂಟಾಲ್‌ ಅಕ್ಕಿ ವಶ

0
21
loading...

ಕನ್ನಡಮ್ಮ ಸುದ್ದಿ-ಹುನಗುಂದ: ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಂದ ಪ್ರತಿ ಕಿ.ಜಿಗೆ 10 ರೂ. ದಂತೆ ಅಕ್ಕಿಯನ್ನು ತಗೆದುಕೊಂಡು 12 ರೂ ಗೆ ಮಾರಾಟ ಮಾಡುವ ಸಲುವಾಗಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 6 ಕ್ವಿಂಟಾಲ್‌ ಅಕ್ಕಿ ಗುಡೂರ ಎಸ್‌.ಸಿ ಗ್ರಾಮದ ಮನೆಯೊಂದರಲ್ಲಿ ಪತ್ತೆಯಾಗಿದ್ದು. ಅದನ್ನು ತಹಶೀಲ್ದಾರ ಸುಭಾಸ ಸಂಪಗಾವಿ ನೇತೃತ್ವದಲ್ಲಿ ದಾಳಿ ಮಾಡಿ ವಶಪಡಿಸಿಕೊಂಡಿದ್ದಾರೆ.
ಇದರ ಬಗ್ಗೆ ಗ್ರಾಮದ ಸಾರ್ವಜನಿಕರ ಮೌಖಿಕ ದೂರಿನ ಮೇರಿಗೆ ತಹಶೀಲ್ದಾರರು ಸೋಮವಾರ ಸಂಜೆ 7-30 ಗಂಟೆಗೆ ಧೀಡಿರ ದಾಳಿ ಮಾಡಿದಾಗ ಗುಡೂರ ಎಸ್‌.ಸಿ ಗ್ರಾಮದ ಮಹಾಗುಂಡಪ್ಪ ರುದ್ರಪ್ಪ ಅಳವಂಡಿ ಅವರ ಮನೆಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ ಅಕ್ಕಿಯು ಪತ್ತೆಯಾಗಿದೆ. ಅಕ್ರಮ ಆಹಾರ ದಾನ್ಯವನ್ನು ವಶಕ್ಕೆ ಪಡೆದ ಮೇಲೆ ತಹಶೀಲ್ದಾರ ಈ ಅಕ್ಕಿ ಎಲ್ಲಿಂದ ಬಂದಿದೆ ಎಂಬುವುದರ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸುವದರ ಜೊತೆಗೆ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಮಹಾಗುಂಡಪ್ಪ ಅಳವಂಡಿ ಅವರಿಗೆ ನೋಟಿಸ್‌ ಜಾರಿ ಮಡುವಂತೆ ಆಹಾರ ನಿರೀಕ್ಷಕ ಹೆಬ್ಬಾಳಗೆ ಸೂಚಿಸಿದರು.
ಘಟನೆ ವಿವರ- ಗುಡೂರ ಎಸ್‌.ಸಿ ಗ್ರಾಮದ ಮಹಾಗುಂಡಪ್ಪ ಅಳವಂಡಿ ಎಂಬ ವ್ಯಕ್ತಿಯು ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್‌ ಪಡಿತರ ಚೀಟಿದಾರರಿಂದ 10 ರೂಪಾಯಿಗೆ ಅಕ್ಕಿ ಖರೀದಿಸಿ 12 ರೂಪಾಯಿಗೆ ಮಾರಾಟ ಮಾಡುತ್ತಿದ್ದ. ಇದರ ಬಗ್ಗೆ ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ಮಾಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಅಕ್ರಮ ಗೃಹಪಯೋಗಿ ಸಿಲೆಂಡರ್‌ ವಶಇದೆ. ಈ ಸಂದರ್ಭದಲ್ಲಿ ತಹಶೀಲ್ದಾರ ಗ್ರಾಮದ ವಿವಿಧ ಹೊಟೇಲ್‌ಗಳಿಗೆ ಭೇಟಿ ನೀಡಿದಾಗ ಹೊಟೇಲ್‌ನಲ್ಲಿ ವಾಣಿಜ್ಯ ಸಿಲೆಂಡರಗಳ ಬದಲು ಅಕ್ರಮವಾಗಿ ಗೃಹಪಯೋಗಿ ಸಿಲೆಂಡರ್‌ ಬಳಸುತ್ತಿದ್ದನ್ನು ಕಂಡು ಬಂದಿದ್ದರಿಂದ 6 ಅಕ್ರಮ ಗೃಹಪಯೋಗಿ ಸಿಲೆಂಡರ್‌ಗಳನ್ನು ವಶಕ್ಕೆ ಪಡೆದುಕೊಂಡು ಅವರಿಗೆಲ್ಲಾ ನೋಟಿಸ್‌ ನೀಡಿ ಮತ್ತು ಅವುಗಳನ್ನು ಯಾರು ಪೂರೈಸಿದ್ದಾರೆ ಎಂಬುವುದನ್ನು ಪತ್ತೆ ಹಚ್ಚಿ ವರದಿ ನೀಡುವಂತೆ ಅಹಾರ ನೀರಕ್ಷಕರಿಗೆ ಖಡಕ್‌ ಸೂಚನೆ ನೀಡದರು. ಈ ಸಂದರ್ಭದಲ್ಲಿ ಉಪ ತಹಶೀಲ್ದಾರ ಎಸ್‌.ಬಿ.ಕುಂದರಗಿ, ಅಮೀನಗಡ ಎಸೈ, ಗ್ರಾಮ ಲೆಕ್ಕಾಧಿಕಾರಿ ಎಸ್‌.ಸಿ.ಕೊಣ್ಣೂರ, ಕಂದಾಯ ಇಲಾಖೆಯ ಸಿಬ್ಬಂದಿ ಸುರೇಶ ಬೀಳಗಿ ಇತರರು ಇದ್ದರು.

loading...