ಅಜಿತ ಹತ್ಯೆಗೈದ ಆರೋಪಿಯನ್ನು ಬಂಧಿಸದಿದ್ದರೇ ಹೋರಾಟ ಅನಿವಾರ್ಯ-ಆಸೀಪ್

0
19
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ದುಷ್ಕರ್ಮಿಯಿಂದ ಹತರಾದ ದಾಂಡೇಲಿಯ ಖ್ಯಾತ ವಕೀಲ, ಹೋರಾಟಗಾರ ಅಜಿತ ನಾಯಕರವರ ಬರ್ಬರ ಕೊಲೆ ಅಮಾನವೀಯ ಘಟನೆ. ಇದನ್ನು ಇಡೀ ರಾಜ್ಯದ ವಕೀಲರೆಲ್ಲರೂ ಬಲವಾಗಿ ಖಂಡಿಸಿದ್ದಾರೆ. ಸಹದ್ಯೋಗಿಯ ಬರ್ಬರ ಕೊಲೆಯನ್ನು ಎಂದು ಸಹಿಸುವುದಿಲ್ಲ. ಆರೋಪಿ ಯಾರೇ ಆಗಿರಲಿ, ತಕ್ಷಣವೆ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ರಾಜ್ಯ ವಕೀಲರ ಸಂಘದ ಬಾರ್ ಅಸೋಸಿಯೇಶನ್ ಸದಸ್ಯ ಕೊಪ್ಪಳದ ಹಿರಿಯ ವಕೀಲ ಆಸೀಪ್ ಆಲಿ ಅವರು ಆಗ್ರಹಿಸಿದರು.
ಅವರು ಬಾನುವಾರ ನಗರದ ಸಿವಿಲ್ ನ್ಯಾಯಾಲಯದಲ್ಲಿರುವ ವಕೀಲರ ಸಂಘದ ಸಭಾಭವನದಲ್ಲಿ ಮೃತ ಅಜಿತ ನಾಯಕರವರಿಗೆ ಶೃದ್ದಾಂಜಲಿ ಅರ್ಪಿಸಿ ಮಾತನಾಡುತ್ತಿದ್ದರು. ಸಮಾಜಕ್ಕೆ ನ್ಯಾಯವನ್ನು ಒದಗಿಸಿಕೊಡುವ ವಕೀಲರಾದ ನಾವೆಲ್ಲರೂ ವೃತ್ತಿ ಬಾಂಧವನ ಮೇಲೆ ಈ ರೀತಿಯ ದುಷ್ಕøತ್ಯ ನಡೆದಾಗ ಸಾಮೂಹಿಕವಾಗಿ, ಸಂಘಟನಾತ್ಮಕವಾಗಿ ಹೋರಾಟಕ್ಕಿಳಿಯಬೇಕಾದ ಅನಿವಾರ್ಯ ಸ್ಥಿತಿಯಲ್ಲಿದ್ದೇವೆ. ವಕೀಲ ಅಜಿತ ನಾಯಕರವರ ಕೊಲೆಯನ್ನು ಖಂಡಿಸಿ, ರಾಜ್ಯ ವ್ಯಾಪಿ ವಕೀಲರು ನ್ಯಾಯಕ್ಕಾಗಿ ಪ್ರತಿಭಟನೆಯನ್ನು ನಡೆಸಿ ಕಲಾಪವನ್ನು ಬಹಿಷ್ಕರಿಸಿರುವುದು ಅಜಿತ ನಾಯಕರವರ ಜನಪ್ರಿಯತೆಗೆ ಸಾಕ್ಷಿ. ಪೊಲೀಸ್ ಇಲಾಖೆ ವಿಶೇಷ ತಂಡವನ್ನು ರಚಿಸಿ, ತಕ್ಷಣವೆ ಆರೋಪಿಯನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯವ್ಯಾಪಿ ವಕೀಲರು ಪ್ರತಿಭಟನೆ, ಹೋರಾಟ ಮಾಡುವುದು ಅನಿವಾರ್ಯ ಎಂದರು. ವೃತ್ತಿ ಬಾಂಧವರ ಮೇಲೆ ಈ ರೀತಿಯ ಬರ್ಬರ ಹತ್ಯೆ ಘಟನೆಗಳಾದಾಗ ನಾವೆಲ್ಲರೂ ಅವರ ಬೆಂಬಲಕ್ಕೆ ನಿಂತು ನ್ಯಾಯ ಒದಗಿಸುವುದರ ಜೊತೆಗೆ ನೊಂದ ಕುಟುಂಬದ ಕಣ್ಣೀರೊರೆಸುವ ಸಾಂತ್ವನ ನೀಡುವ ಬಂಧುಗಳಾಗಬೇಕೆಂದು ಆಸೀಪ್ ಆಲಿ ಕರೆ ನೀಡಿದರು.

ಈ ಸಂದರ್ಭದಲ್ಲಿ ಹಿರಿಯ ವಕೀಲರುಗಳಾದ ವಿ.ಆರ್.ಹೆಗಡೆ, ಎಸ್.ಎಂ.ದಬಗಾರ, ಎಸ್.ಸೋಮಕುಮಾರ್, ಎಂ.ಸಿ.ಹೆಗಡೆ, ವಕೀಲರುಗಳಾದ ರಾಜಶೇಖರ.ಆರ್.ಎಚ್, ವಿಶ್ವನಾಥ ಜಾಧವ, ವಿಶ್ವನಾಥ ಲಕ್ಷೆಟ್ಟಿ, ಅನಿತಾ ಸೋಮಕುಮಾರ್, ಶೈಲಾ, ರಾಘವೇಂದ್ರ ಗಡೆಪ್ಪನವರ, ಸುನೀಲ ದೇಸಾಯಿ, ಕವಿತಾ ಗಡೆಪ್ಪನವರ, ಫೀರಸಾಬ ನದಾಪ್, ರೂಪಾ ಕೇರವಾಡಕರ, ಮುಸ್ತಾಕ ಶೇಖ, ಮಮ್ತಾಜ್ ಹಾಗೂ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

loading...