ಅದೇ ಖದರ್ ಉಳಿಸಿಕೊಂಡ ಸಿದ್ದರಾಮಯ್ಯ

0
11
loading...

ಬೆಂಗಳೂರು: ಮಾಜಿ ಸಿಎಂ ಆದರೂ ಕೂಡ ಸಿದ್ದರಾಮಯ್ಯ ಅದೇ ಖದರ್ ಉಳಿಸಿಕೊಂಡಿರುವುದು ಮೊನ್ನೆ ವಿಧಾನಸಭೆ ಅಧಿವೇಶನದಲ್ಲಿ ಸಾಬೀತಾಯಿತು. ಪ್ರಕೃತಿ ಚಿಕಿತ್ಸೆಗೆ ತೆರಳಿದ್ದಾಗ ಹಲವು ಶಾಸಕರು, ಸಚಿವರು, ಮಾಜಿ ಸಚಿವರು ಸಿದ್ದರಾಮಯ್ಯರನ್ನು ಭೇಟಿ ಮಾಡಿ ಬಂದಿದ್ದರು. ಅಲ್ಲದೇ ಬೆಂಗಳೂರಿಗೆ ವಾಪಸಾದ ಮೇಲೆ ಕೂಡ ಭೇಟಿ ಮಾಡಿ ಚರ್ಚಿಸಿದ್ದರು. ವಿವಿಧ ಸಭೆಗಳಲ್ಲಿ ಪಾಲ್ಗೊಂಡಿದ್ದಾಗಲೂ ಸಿದ್ದರಾಮಯ್ಯನವರೇ ಹೈಲೈಟ್ ಆಗಿದ್ದರು.

ಸಮನ್ವಯ ಸಮಿತಿ ಸಭೆ, ಕಾಂಗ್ರೆಸ್ ಪಕ್ಷದ ನಾಯಕರ ಸಭೆಯಲ್ಲಿ ಇವರು ಸಿಎಂ, ಡಿಸಿಎಂಗಿಂತ ಹೆಚ್ಚು ಹೈಲೈಟ್ ಆಗಿದ್ದರು. ಸ್ವಂತ ಕ್ಷೆÃತ್ರ ಚಾಮುಂಡೇಶ್ವರಿಯಲ್ಲಿ ಹೀನಾಯ ಸೋಲು, ವಲಸೆ ಕ್ಷೆÃತ್ರ ಬದಾಮಿಯಲ್ಲಿ ಅಲ್ಪ ಮತಗಳ ಅಂತರದ ಗೆಲುವು ಒಂದು ಹಂತದಲ್ಲಿ ಸಿದ್ದರಾಮಯ್ಯರನ್ನು ಮೂಲೆಗುಂಪಾಗಿ ಮಾಡಲಿದೆ ಎಂದು ನಿರೀಕ್ಷಿಸಲಾಗಿತ್ತು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ಥಿತ್ವಕ್ಕೆ ಬಂದ ಮೇಲೆ ನೆಪ ಮಾತ್ರಕ್ಕೆ ಇವರು ಸಮನ್ವಯ ಸಮಿತಿ ಅಧ್ಯಕ್ಷರಾಗಿರುತ್ತಾರೆ. ದಿನ ಕಳೆದಂತೆ ಇವರ ಮಾತಿಗೆ ಬೆಲೆ ಇರುವುದಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು.ಆದ್ರೆ ಆ ಮತುಗಳು ಇದೀಗ ಸುಳ್ಳಾಗುತ್ತಿವೆ.

ಸಿದ್ದರಾಮಯ್ಯರ ಮಾತಿಗೆ ಬೆಲೆ ಸಿಗುತ್ತಿದೆ. ಹಾಗೆಯೇ ಮಾಜಿ ಸಿಎಂಗೆ ಹಲವು ಶಾಸಕರ ಬಲವೂ ಕೂಡ ಇದೆ.

ಇನ್ನು ಖಾಸಗಿ ಹೋಟೆಲ್‌ನಲ್ಲಿ ಸಿದ್ದರಾಮಯ್ಯ ಎಲ್ಲಾ ಶಾಸಕರಿಗೆ ಔತಣಕೂಟ ಹಮ್ಮಿಕೊಳ್ಳುವ ಮೂಲಕ ತಾವು ಪ್ರಕೃತಿ ಚಿಕಿತೆಗೆ ತೆರಳಿದ್ದ ವೇಳೆ ವಿಚಾರಿಸಿ, ಮಾಜಿ ಸಿಎಂ ಆದ ಮೇಲೂ ಅದೇ ವಿಶ್ವಾಸದಲ್ಲೆÃ ಮಾತನಾಡಿಸಿದ ಶಾಸಕರಿಗೆ ಈ ಮೂಲಕ ಗೌರವ ಸಲ್ಲಿಸಿದ್ದಾರೆ.

ರಾಜ್ಯ ಸರ್ಕಾರದ ಹಿರಿಯ ಶಾಸಕರಾಗಿ,ಮಾಜಿ ಸಿಎಂ ಆಗಿ ತಾವು ಸಂಪಾದಿಸಿದ ಶಾಸಕ ಬಲವನ್ನು ತೋರಿಸುವುದಕ್ಕಾಗಿ ಸಿದ್ದರಾಮಯ್ಯ ಈ ಔತಣಕೂಟವನ್ನು ಕರೆದಿದ್ದಾರೆಯೇ ಎಂಬ ಪ್ರಶ್ನೆಗಳು ರಾಜಕೀಯ ವಲದಲ್ಲಿ ಹರಿದಾಡುತ್ತಿವೆ.

loading...