ಅನ್ಯಾಯವಾದಾಗ ಪ್ರತ್ಯೇಕತೆ ಕೂಗೂ ಸಹಜ

0
9
loading...

ಬೆಂಗಳೂರು: ಅಖಂಡ ಕರ್ನಾಟಕ ಒಡೆಯಬೇಕು ಎನ್ನುವುದು ಯಾರ ಭಾವನೆಯಲ್ಲೂ ಇಲ್ಲ. ಅನ್ಯಾಯವಾದಾಗ ಪ್ರತ್ಯೇಕತೆ ಕೂಗೂ ಸಹಜ ಎಂದು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ತಿಳಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನ್ಯಾಯ ಆದಾಗ ಜನರು ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಟ್ಟಿರಬಹುದು,ಅದು ಎಲ್ಲರ ಹಕ್ಕು,ಸಿಎಂ ಕುಮಾರಸ್ವಾಮಿ ಅವರು ಅನ್ಯಾಯ ಸರಿಪಡಿಸುವ ಕೆಲಸ ಮಾಡಬೇಕು. ಹೋರಾಟಗಾರರಲ್ಲಿ ಸಾರ್ವಜನಿಕರಲ್ಲಿ ತಪ್ಪುಗಳಿದ್ದರೆ ಸರಿಪಡಿಸುವ ಕೆಲಸ ಮಾಡಬೇಕು ಎಂದರು.
ಉ.ಕ. ಪ್ರತ್ಯೇಕ ರಾಜ್ಯವಾಗಬೇಕು ಎನ್ನುವುದು ಬಹಳ ವರ್ಷಗಳ ಕೂಗಾಗಿದೆ. ಅಖಂಡ ಕರ್ನಾಟಕ ಉಳಿಯಬೇಕು ಎಂದಾದರೆ ಉತ್ತರ ಕರ್ನಾಟಕ ಅಭಿವೃದ್ಧಿ ಮಾಡಬೇಕು. ಇಡೀ ರಾಜ್ಯವನ್ನು ಸಮಾನ ರೀತಿಯಲ್ಲಿ ಕಾಣುವ ಕೆಲಸ ಮಾಡಬೇಕು ಎಂದು ಹೇಳಿದರು.

loading...