ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ಬಂಧನ

0
6
loading...

ಕನ್ನಡಮ್ಮ ಸುದ್ದಿ-ನರಗುಂದ: ಅಪ್ರಾಪ್ತ ಬಾಲಕಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ ಯುವಕನನ್ನು ನರಗುಂದ ಪೊಲೀಸರು ಜೂ. 30 ರಂದು ಬಂಧಿಸಿ ನ್ಯಾಯಾಂಗ ಬಂಧನದಲ್ಲಿರಿಸಿದ ಘಟಣೆ ತಡವಾಗಿ ಬೆಳಕಿಗೆ ಬಂದಿದೆ.
ಪಟ್ಟಣದ ಪತ್ರಿವನಮಠದ ಹತ್ತಿರದಲ್ಲಿಯ ಆಶ್ರಯ ಬಡಾವಣೆಯ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ನಡೆಸಿದ ಪ್ರಕರಣವನ್ನು ಜೂ. 30ರಂದು ಪೊಲೀಸರು ದಾಖಲಿಸಿಕೊಂಡು ಈ ಕೃತ್ಯ ಎಸಗಿದ ಅಸೀಫ್‌ ಬಿಚಗತ್ತಿಯನ್ನು ಬಂಧಿಸಿ ನ್ಯಾಯಾಲಯದ ಆದೇಶದಂತೆ ಬಂಧನದಲ್ಲಿರಿಸಿದ್ದಾರೆ.
ಕೃತ್ಯವೆಸಗಿದ ವ್ಯಕ್ತಿಯು ನರಗುಂದ ಪಟ್ಟಣದ ಹೊರಕೇರಿ ಬಡಾವಣೆಯವನೆಂದು ತಿಳಿದು ಬಂದಿದೆ. ಅತ್ಯಾಚಾರಕ್ಕೆ ಒಳಗಾದ ಬಾಲಕೀಯ ತಾಯಿ ಸ್ಥಳೀಯ ಪೊಲೀಸ್‌ ಠಾಣೆಗೆ ಜೂ. 30 ರಂದು ದೂರು ನೀಡಿದ್ದರು. ಕಳೆದ ತಿಂಗಳು 27 ರಂದು ಕೃತ್ಯಕ್ಕೆ ಕಾರಣವಾದ ಅಸೀಫ್‌ ಬಾಲಕಿಯನ್ನು ಅಪಹರಣಮಾಡಿಕೊಂಡು ಹುಬ್ಬಳ್ಳಿ ಮತ್ತು ಕುಂದಾಪೂರ ಹಾಗೂ ಸವದತ್ತಿ ನಗರಗಳಿಗೆ ಕರೆದ್ಯೋಯ್ದು ಅತ್ಯಾಚಾರ ಮಾಡಿರುವ ಕುರಿತು ಮಾಹಿತಿಗಳು ಲಭ್ಯವಾಗಿವೆ. ಜೂ. 30 ರಂದು ಸವದತ್ತಿ ಪಟ್ಟಣದಲ್ಲಿರುವ ತನ್ನ ಸ್ನೇಹಿತನ ಮನೆಯಲ್ಲಿ ಬಾಲಕಿಯನ್ನು ಇರಿಸಿದ್ದನೆಂದು ತಿಳಿದು ಬಂದಿದೆ. ಬಾಲಕಿಯನ್ನು ಬೇರೆ ಊರಿಗೆ ಆಸೀಫ್‌ ಜೂ. 30 ರಂದು ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಈ ಮಾಹಿತಿ ಅರಿತ ಪೊಲೀಸರು ಸವದತ್ತಿ ಪಟ್ಟಣದ ಬಸ್‌ ನಿಲ್ದಾಣದಲ್ಲಿ ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದರು. ಕೋರ್ಟ್‌ ಆದೇಶದ ಮೇರೆಗೆ ಸಧ್ಯ ಆಸೀಫ್‌ನನ್ನು ನಾಯ್ಯಾಂಗ ಬಂಧನದಲ್ಲಿರಿಸಲಾಗಿದೆ. ಬಾಲಕಿಯನ್ನು ಆಕೆಯ ತಾಯಿಯ ವಶಕ್ಕೆ ಒಪ್ಪಿಸಲಾಗಿದೆ. ಈ ಕುರಿತು ದೂರು ದಾಖಲಿಸಿಕೊಂಡಿರುವ ಸಿಪಿಐ ಶ್ರೀನಿವಾಸ ಮೇಟಿ ತನಿಖೆ ಕೈಗೊಂಡಿದ್ದಾರೆ.

loading...