ಅಬ್ಬಿಗೇರಿ: ಕೆವಿಜಿ ಬ್ಯಾಂಕ್‍ನಲ್ಲಿ ಕರೆಂಟ್ ಸಮಸ್ಯೆ, ನಡೆಯದ ವ್ಯವಹಾರ

0
7
loading...

ಕನ್ನಡಮ್ಮ ಸುದ್ದಿ-ಅಬ್ಬಿಗೇರಿ : ಕೆವಿಜಿ ಬ್ಯಾಂಕ್‍ನಲ್ಲಿ ಕರೆಂಟ್ ಸಮಸ್ಯೆ. ವಿದ್ಯುತ್ ಇಲ್ಲದಿದ್ದರೆ ವ್ಯವಹಾರವಿಲ್ಲ. ಗ್ರಾಹಕರ ಆಕ್ರೋಶ. ಕನ್ನಡಮ್ಮ ಸುದ್ದಿ ನರೇಗಲ್ಲ ಸಮೀಪದ ಅಬ್ಬಿಗೇರಿ ಗ್ರಾಮದ ಕೆವಿಜಿ ಬ್ಯಾಂಕ್‍ನಲ್ಲಿ ಕಳೆದ ಒಂದು ವಾರದಿಂದ ವಿದ್ಯುತ್ ಸಮಸ್ಯೆ ಎದುರಾಗಿದ್ದು, ಕರೆಂಟ್ ಇಲ್ಲದಿದ್ದರೆ ಯಾವುದೇ ವ್ಯವಹಾರ ನಡೆಯುವುದಿಲ್ಲ. ಬ್ಯಾಂಕ್‍ಗೆ ಬರುವ ಗ್ರಾಹಕರು ಗಂಟೆಗಟ್ಟಲೆ ಕಾಯುವುದು ಅನಿವಾರ್ಯವಾಗಿದೆ. ಪರ್ಯಾಯವಾಗಿ ಹಾಕಲಾಗಿರುವ ಬ್ಯಾಟರಿಗಳು ಕಳೆದ ಒಂದು ವಾರದ ಹಿಂದೆ ಕೆಟ್ಟು ಹೋಗಿದ್ದು, ಅವುಗಳು ಇನ್ನೂ ದುರಸ್ಥಿಯಾಗದೆ ಇರುವುದರಿಂದ ಸಮಸ್ಯೆ ಸೃಷ್ಟಿಯಾಗಲು ಕಾರಣ ಎಂದು ಸಾರ್ವಜನಿಕರು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ಬೆಳಗ್ಗೆ ಬ್ಯಾಂಕ್‍ಗೆ ಆಗಮಿಸಿದ ಗ್ರಾಹಕರಿಗೆ ಬ್ಯಾಂಕ್ ಸಿಬ್ಬಂದಿ ವಿದ್ಯುತ್ ಇಲ್ಲ. ಬ್ಯಾಟರಿಗಳು ಕೆಟ್ಟಿದ್ದು, ಕರೆಂಟ್ ಬರುವರೆಗೂ ಯಾವುದೆ ವ್ಯವಹಾರವಿಲ್ಲ ಎಂಬ ಸಿದ್ದ ಉತ್ತರ ನೀಡಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ರಾಹಕರು ಸಿಬ್ಬಂದಿಗಳನ್ನು ತೀರ್ವ ತರಾಟೆಗೆ ತೆಗೆದುಕೊಂಡ ಘಟನೆ ಜರುಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಅಬ್ಬಿಗೇರಿ ಗ್ರಾಮಸ್ಥ ಸಂಗಪ್ಪ ಕುಂಬಾರ, ಅಬ್ಬಿಗೇರಿ ಗ್ರಾಮದಲ್ಲಿರುವುದು ಇದೊಂದೆ ಬ್ಯಾಂಕ್. ಇದು ಸಹ ಕಳೆದೊಂದು ವಾರದಿಂದ ವಿದ್ಯುತ್ ಇದ್ದರೆ ಮಾತ್ರ ಕಾರ್ಯ ನಿರ್ವಹಿಸುತ್ತದೆ. ಇಲ್ಲದಿದ್ದರೆ ಯಾವುದೇ ವ್ಯವಹಾರವಿಲ್ಲ. ಬಹುತೇಕ ಬಡ ರೈತರ ಖಾತೆಗಳನ್ನು ಹೊಂದಿರುವ ಈ ಬ್ಯಾಂಕ್ ಸಮರ್ಪಕವಾಗಿ ಕಾರ್ಯ ನಿರ್ವಹಿಸದೆ ಇರುವುದು ಸಾಕಷ್ಟು ತೊಂದರೆಗೆ ಕಾರಣವಾಗಿದೆ. ಶಾಲಾ ಮಕ್ಕಳ, ಮಹಿಳೆಯರ ಹಾಗೂ ರೈತರ ಅನೇಕ ಸರ್ಕಾರಿ ಯೋಜನೆಗಳ ಹಣವನ್ನು ಪಡೆಯಲು ದಿನಗಟ್ಟಲೆ ಬ್ಯಾಂಕ್ ಮುಂದೆ ಕಾಯುವುದು ಅನಿವಾರ್ಯವಾಗಿದೆ. ಸಿಬ್ಬಂದಿಗಳನ್ನು ವಿಚಾರಿಸಿದರೆ ಕರೆಂಟ್ ಇಲ್ಲದಾಗ ಉಪಯೋಗಿಸುವ ಬ್ಯಾಟರಿಗಳು ಕೆಟ್ಟು ಹೋಗಿವೆ. ಅವುಗಳ ಬಗ್ಗೆ ಈಗಾಗಲೇ ಮೇಲಾಧಿಕಾರಿಗಳಿಗೆ ತಿಳಿಸಿ, ಅವುಗಳನ್ನು ದುರಸ್ಥಿಗಾಗಿ ಕಳುಹಿಸಿಕೊಡಲಾಗಿದೆ. ಅವುಗಳು ಮರಳಿ ಬಂದ ಮೇಲೆ ಸಮಸ್ಯೆ ಪರಿಹಾರವಾಗಲಿದೆ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಹಿರಿಯ ಅಧಿಕಾರಿಗಳು ಈಗಲಾದರೂ ಇತ್ತ ಗಮನ ಹರಿಸಿ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು. ಗ್ರಾಹಕರಾದ ಮಹಾದೇವಪ್ಪ ಬಸವರಡ್ಡೇರ, ಯಲ್ಲಪ್ಪ ಹಿರೇಮನಿ, ಶಿವರುದ್ರಪ್ಪ ದ್ವಾಸಲ, ಪ್ರಕಾಶ ನಾಯ್ಕರ, ಶಿವನಗೌಡ ಪಾಟೀಲ, ವೀರಪ್ಪ ಹರದಾರಿ ಇತರರು ಇದ್ದರು.

loading...