ಅಭಿವೃದ್ಧಿ ಕಾರ್ಯಗಳಿಂದ ಮತದಾರರ ಋಣ ತೀರಿಸುವೆ: ಶಾಸಕ ಹಿಟ್ನಾಳ

0
6
loading...

ಕನ್ನಡಮ್ಮ ಸುದ್ದಿ-ಕೊಪ್ಪಳ: ಕಾಂಗ್ರೆಸ್‌ ಸರ್ಕಾರದ 5 ವರ್ಷದ ಅವಧಿಯಲ್ಲಿ ಕೊಪ್ಪಳ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚು ಅನುದಾನವನ್ನು ತಂದು ಸಣ್ಣ ಗ್ರಾಮಕ್ಕೆ ರೂ.1 ಕೋಟಿಗಿಂತ ಅಧಿಕ ದೊಡ್ಡ ಗ್ರಾಮಗಳಿಗೆ ರೂ.15 ಕೋಟಿವರೆಗೆ ಅನುದಾನ ಬಿಡುಗಡೆ ಮಾಡಿ ಗ್ರಾಮವಿಕಾಸ ಯೋಜನೆ ಅಡಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್‌ ಹೇಳಿದರು.
ಮುನಿರಾಬಾದ್‌ ಗ್ರಾಮದಲ್ಲಿ 2ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಅಭಿನಂದನಾ ಸಮಾರಂಭದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕ್ಷೇತ್ರದ 2 ಮಹತ್ತರ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ರೂ.180 ಕೋಟಿಯ ನವಲ್ಕಲ್‌ ಬಹದ್ದೂರಬಂಡಿ ಏತ ನೀರಾವರಿ ಯೋಜನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೆಚ್ಚಿನ ಮುತುವರ್ಜಿ ವಹಿಸಿ ಚಾಲನೆ ನೀಡಿದ್ದು ಕಾಂಗ್ರೆಸ್‌ ಸರ್ಕಾರದ ಹೆಗ್ಗಳಿಕೆಯಾಗಿದೆ. ಶಿಕ್ಷಣ ಕೃಷಿ ನೀರಾವರಿ ಯೋಜನೆಗಳಿಗೆ ಹೆಚ್ಚು ಅನುಧಾನಗಳ ಬಿಡುಗಡೆಗೊಳಿಸಿ ಕೃಷಿ ವಲಯಕ್ಕೆ ಹೆಚ್ಚುಒತ್ತು ಕೋಡಲಾಗಿದೆ. ಮುನಿರಾಬಾದ್‌ ಗ್ರಾಮಕ್ಕೆ ಡಿಪ್ಲೋಮಾ ಕಾಲೇಜು ಮಂಜೂರಾಗಿದ್ದು, ಬರುವ ದಿನಗಳಲ್ಲಿ ಪದವಿಪೂರ್ವ ಕಾಲೇಜು ಹಾಗೂ ಪದವಿ ಕಾಲೇಜು ಮಂಜೂರಾತಿಗೆ ಪ್ರಾಮಾಣಿಕ ಪ್ರಯತ್ನಮಾಡುವೇನು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹೆಚ್ಚು ಅನುಧಾನ ತಂದು ಕ್ಷೇತ್ರದ ಸಮರ್ಗ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿ ನನ್ನನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿದ ಮತದಾರರ ಋಣ ತಿರಿಸುವೇನೆಂದು ಹೇಳಿದರು.
ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷ ಬಾಲಚಂದ್ರನ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸುರೇಶ ಬೂರಮರೆಡ್ಡಿ, ಜಿ.ಪಂ.ಸದಸ್ಯ ಬೀನಾ ಗೌಸ್‌, ಮುಖಂಡರುಗಳಾದ ಗಾಳೆಪ್ಪ ಪೂಜಾರ, ಕಿಶೋರಿ ಬುದನೂರು, ಶ್ರೀಮತಿ ರಾಧಾರವಿ, ರಾಮಮೂರ್ತಿ, ವೀರಣ್ಣ ಹುಲಗಿ, ಭರಮಪ್ಪ ಬೇಲ್ಲದ, ಕಪತ್ತೇಪ್ಪ, ವಿಜಯ ಹುಲಗಿ, ಅನ್ವರ ಮುನಿರಾಬಾದ್‌, ಶೇರಖಾನ್‌, ಗ್ರಾ.ಪಂ.ಅಧ್ಯಕ್ಷರು ಸರ್ವಸದಸ್ಯರು ಉಪಸ್ಥಿತರಿದ್ದರು.

loading...