ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡಲು ಆಗ್ರಹ

0
16
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ನಾಗನೂರು ಪಟ್ಟಣ ಪಂಚಾಯತಿಯಲ್ಲಿ ವಿವಿಧ ಯೋಜನೆಗಳ ಮನೆಗಳು ಅರ್ಹ ಫಲಾನುಭವಿಗಳಿಗೆ ಸಿಗುತ್ತಿಲ್ಲ ಎಂದು ನಾಗನೂರು ಪಟ್ಟಣದ ಸಾರ್ವಜನಿಕರು ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕೇವಲ ಶ್ರಿÃಮಂತರಿಗೆ ಮನೆ ಹಂಚಿಕೆ ಮಾಡುತ್ತಿದ್ದು, ಬಿಜೆಪಿ ಅವರಿಗೆ ಮಾತ್ರ ಮನೆ ಹಂಚಿಕೆ ಮಾಡುತ್ತಿದ್ದಾರೆ. ಬಡಜನರು ಮನೆ ಕೇಳಿದರೆ ೫೦ ಸಾವಿರ ರೂ. ಹಣ ನೀಡಬೇಕೆಂದು ಕೆಲ ಸದಸ್ಯರು ಕೇಳುತ್ತಿದ್ದಾರೆ. ಮನೆಗಳಿಗಾಗಿ ಸಾಕಷ್ಟು ಬಾರಿ ಅರ್ಜಿ ಸಲ್ಲಿಸಿದರೂ ಕೂಡ ಮನೆಗಳು ನಿಜವಾದ ಫಲಾನುಭವಿಗಳಿಗೆ ಸಿಗುತ್ತಿಲ್ಲೆಂದು ಮನವಿಯಲ್ಲಿ ತಿಳಿಸಿದ್ದಾರೆ.
ವಸತಿ ಯೋಜನೆಯ ಫಲಾನುಭವಿಗಳನ್ನು ಗ್ರಾಮಸಭೆ ಕರೆದು ಆಯ್ಕೆ ಮಾಡುವುದಿಲ್ಲ. ಅಲ್ಲದೇ ಮನೆ ಇಲ್ಲದವರನ್ನು ಆಯ್ಕೆ ಮಾಡುತ್ತಿಲ್ಲ. ಆದ್ದರಿಂದ ಪಟ್ಟಣ ಪಂಚಾಯತಿ ಅವರು ಆಯ್ಕೆ ಮಾಡಿದ ಫಲಾನುಭವಿಗಳ ಪಟ್ಟಿಯನ್ನು ಪುನಹ ಪರಿಶೀಲಸಿ ಅರ್ಹರಿಗೆ ಮನೆ ಮಂಜೂರು ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನೀಲವ್ವ ಬೆಣ್ಣಿ, ರೇಣುಕಾ ಪಡದಲ್ಲಿ, ನಾಗವ್ವ ಮೆಳವಂಕಿ, ಬಾಳಪ್ಪ ದಿನ್ನಿಮನಿ, ಸರಸ್ವತಿ ತಿಗಡಿ, ಶೋಭಾ ಮುಸಗುಪ್ಪಿ, ನೀಲವ್ವ ಉಸಾಬರಿ, ಕಲ್ಲವ್ವ ಪೂಜೇರಿ ಸೇರಿದಂತೆ ಅನೇಕರು ಇದ್ದರು.

loading...