ಅವ್ಯವಸ್ಥೆಯ ಆಗರವಾಗಿರುವ ಗುಡೂರ ಗ್ರಾಮ ಪಂಚಾಯತ್‌..

0
10
loading...

ಕನ್ನಡಮ್ಮ ಸುದ್ದಿ-ಬಾಗಲಕೋಟೆ: ಹುನಗುಂದ ತಾಲೂಕಿನ ಗುಡೂರ (ಎಸ್‌.ಸಿ) ಗ್ರಾಮ ಪಂಚಾಯತವು ಅವ್ಯವಸ್ಥೆಯ ಆಗಾರವಾಗಿದ್ದು, ಇಡೀ ಗ್ರಾಮ ಕೊಳಚೆಮಯವಾಗಿದೆ. ಇದರಿಂದ ಆರೋಗ್ಯ ಹದಗೆಡುತ್ತಿದ್ದು, ಗ್ರಾಮ ಪಂಚಾಯತ್‌ ಆಡಳಿತ ಮಂಡಳಿಯವರು ಕ್ಯಾರ್‌ ಎನ್ನುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮ ಪಂಚಾಯತ್‌ ಮುಂದೆಯೇ ಸ್ವಚ್ಚತೆ ಆದತ್ಯೆ ನೀಡಿಲ್ಲ. ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದರು ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ.ಗ್ರಾಮ ಪಂಚಾಯತ್‌ ಅಧ್ಯಕ್ಷರು,ಉಪಾಧ್ಯಕ್ಷರ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಆರೋಪಿಸಿಲಾಗಿದೆ.
ಚಿನಿವಾಲರ ಎಂಬ ಪಿಡಿಓ ಬಂದು ಒಂಬತ್ತು ತಿಂಗಳು ಆಗಿದೆ.ಆದರೆ ಇದುವರೆಗೂ ಸದಸ್ಯರ ಸಭೆ ಕರೆದಿಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದ ಆಡಳಿತ ಇರುವುದರಿಂದ ಸದಸ್ಯರು ರಾಜಕೀಯ ಮಾಡುತ್ತಾ,ಕೋರಂ ಭರ್ತಿ ಆಗುತ್ತಿಲ್ಲ ಎಂಬ ನೆಪ ಒಡ್ಡಿ ಕಳೆದ ಒಂದು ವರ್ಷದಿಂದಲೂ ಸಭೆ ನಡೆದಿಲ್ಲ. ಹೀಗಾಗಿ ಗ್ರಾಮಸ್ಥರ ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ. ಅದು ಅಲ್ಲದೆ ಕುಡಿಯುವ ನೀರು, ಚರಂಡಿ ಸ್ವಚ್ಚತೆ ಮತ್ತು ರಸ್ತೆ ಸ್ವಚ್ಚತೆ ಇಲ್ಲದೆ ಸ್ಥಳೀಯರು ಪರದಾಡುವಂತಾಗಿದೆ. ಇದರಿಂದ ಮಲೇರಿಯಾ, ಡೆಂಗು ಸೇರಿದಂತೆ ಇತರ ರೋಗಗಳು ಹರಡುತ್ತಿದೆ ಎಂದು ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷರಾಗಿರುವ ಶಂಕರಪ್ಪ ಮುರಡಿ ಆರೋಪಿಸಿದ್ದಾರೆ.
ಸ್ವಚ್ಚತೆ ಹಾಗೂ ಗ್ರಾಮ ಪಂಚಾಯತ್‌ ಕೆಲಸ ಕಾರ್ಯಗಳನ್ನು ಮಾಡುವಂತೆ ಕೇಳಲು ಹೋದರೆ ಉಪಾಧ್ಯಕ್ಷರಾದ ಯಮನೂರಿ ನನ್ನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ ಎಂದು ಮಾಜಿ ಅಧ್ಯಕ್ಷರಾಗಿರುವ ಶಂಕರಪ್ಪ ಮುರಡಿ ಆರೋಪಿಸಿದ್ದಾರೆ.
ಕಳೆದ ಒಂದು ವರ್ಷದಿಂದಲೂ ಅಧ್ಯಕ್ಷರು ಸಭೆ ಕರೆದಿಲ್ಲ. ಗ್ರಾಮದ ಅಭಿವೃದ್ದಿ ಬಗ್ಗೆ ಚರ್ಚೆ ಆಗಿಲ್ಲ. ಇದರಿಂದ ಸ್ಥಳೀಯರ ಯಾವುದೇ ಕೆಲಸ ಆಗುತ್ತಿಲ್ಲ. ಈ ಬಗ್ಗೆ ಜಿಲ್ಲಾ ಪಂಚಾಯತ್‌ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಜಿ.ಪಂ ಅಧ್ಯಕ್ಷರಿಗೆ ಗಮನಕ್ಕೆ ತಂದು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮನವಿ ಸಲ್ಲಿಸಲಾಗುವುದು ಇದಕ್ಕೂ ಸ್ಪಂದನೆ ಮಾಡದೇ ಇದಲ್ಲಿ ಉಗ್ರ ಸ್ವರೂಪದ ಹೋರಾಟ ಮಾಡಲಾಗುವುದು ಎಂದು ಮಾಜಿ ಅಧ್ಯಕ್ಷರಾಗಿರುವ ಶಂಕರಪ್ಪ ಮುರಡಿ, ಚಂದಪ್ಪ ಕಂಚೇರ ಹಾಗೂ ಹನಮಂತ ಭಂಜತ್ರೀ ಸೇರಿದಂತೆ ಇತರ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

loading...