ಅಹಿಂದ ವರ್ಗದವರಿಗೆ ತಂದ ಯೋಜನೆ ಮುಂದುವರಿಕೆಗೆ ಕುಮಾರ ನಕಾರ

0
25
loading...

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರ್ಕಾರ ಅಹಿಂದ ವರ್ಗದವರನ್ನು ಮಾತ್ರ ಕೇಂದ್ರಿÃಕರಿಸಿ ಜಾರಿಗೆ ತಂದಿದ್ದ ಹಲವು ಯೋಜನೆಗಳಿಗೆ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಬೆಂಬಲ ಸಿಗುವುದು ಅನುಮಾನ ಅನ್ನುವ ಮಾತು ಕೇಳಿ ಬರುತ್ತಿದೆ.
ಮುಂದಿನ ೯ ತಿಂಗಳ ಅವಧಿಗೆ ಕುಮಾರಸ್ವಾಮಿ ಒಂದು ಬಜೆಟ್ ಮಂಡಿಸುತ್ತಿದ್ದಾರೆ. ಹಿಂದಿನ ಸರ್ಕಾರದ ಬಜೆಟ್‌ನಲ್ಲಿ ಇರುವ ಅಂಶಗಳೂ ಇರಲಿವೆ ಎಂದು ತಿಳಿಸಿರುವುದರಿಂದ ಇದು ಪರಿಷ್ಕöÈತ ಬಜೆಟ್ ಅನ್ನುವುದರಲ್ಲಿ ಅನುಮಾನವಿಲ್ಲ. ನಾಲ್ಕು ತಿಂಗಳ ಹಿಂದೆ ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್‌ನಲ್ಲಿನ ಕೆಲ ಸಣ್ಣಪÅಟ್ಟ ಬದಲಾವಣೆ ಆಗುವ ಸಾಧ್ಯತೆ ಹೆಚ್ಚಿದೆ.
ಪ್ರಮುಖ ಜನಪ್ರಿಯ ಯೋಜನೆಗಳ ಬಗ್ಗೆ ಕಣ್ಣು ಹಾಯಿಸಿದರೆ`ಅನ್ನಭಾಗ್ಯ’,`ಕೃಷಿ ಭಾಗ್ಯ’, `ಕ್ಷಿÃರಭಾಗ್ಯ’, `ಶಾದಿಭಾಗ್ಯ’, `ಆರೋಗ್ಯ ಕರ್ನಾಟಕ’, `ಹೊಸ ಬೆಳಕು’, `ಇಂದಿರಾ ಕ್ಯಾಂಟೀನ್’, `ಪಶುಭಾಗ್ಯ’ ಸೇರಿದಂತೆ ಹಲವು ಯೋಜನೆಗಳು ಮುಂದುವರಿಯುವ ಸಾಧ್ಯತೆ ಹೆಚ್ಚಿದೆ.
ಆದರೆ ಅಹಿಂದ ವರ್ಗವನ್ನೆÃ ಮುಖ್ಯವಾಗಿಟ್ಟುಕೊಂಡು ತಂದಿದ್ದ ಕೆಲ ಯೋಜನೆಗಳಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ. ಒಂದು ವರ್ಗದ ಜನರ ಅನುಕೂಲಕ್ಕೆ ತಂದಿದ್ದ ಯೋಜನೆ ಮುಂದುವರಿಸಲು ಕುಮಾರಸ್ವಾಮಿಗೆ ಮನಸ್ಸಿಲ್ಲ ಎನ್ನಲಾಗುತ್ತಿದೆ.
`ಕೃಷಿಭಾಗ್ಯ’ದಡಿ ೧,೮೯೮ ಕೋಟಿ ರೂ. ವೆಚ್ಚದಲ್ಲಿ ೧.೯ಲಕ್ಷ ಕೃಷಿ ಹೊಂಡ ನಿರ್ವಿಸಿದ್ದು,೧.೯೨ಲಕ್ಷ ರೈತರು ಅನುಕೂಲ ಪಡೆದಿದ್ದಾರೆ. `ಪಶುಭಾಗ್ಯ’ದಲ್ಲಿ ೫೯,೧೯೩ ಫಲಾನುಭವಿಗಳಿಗೆ ಪ್ರಯೋಜನ ದೊರೆತಿದೆ.
ವಾರ್ಷಿಕ ಸುಮಾರು ೧೦ಸಾವಿರ ಕೋಟಿ ರೂ. ವ್ಯಯಿಸುವ ರಾಜ್ಯದ ೧.೩೪ಕೋಟಿ ಕುಟುಂಬಗಳಿಗಾಗಿ`ಆರೋಗ್ಯ ಕರ್ನಾಟಕ’ವನ್ನು ಈ ಹಿಂದಿನ ಸರ್ಕಾರ ಜಾರಿಗೆ ತಂದಿತ್ತು. ಇದು ಮುಂದುವರಿಯುವ ಸಾಧ್ಯತೆ ಇದೆ. ಸಮನ್ವಯ ಸಮಿತಿ ಸಭೆಯಲ್ಲಿ ಕೂಡ ಇದನ್ನು ಉಳಿಸಿಕೊಳ್ಳುವ ಮಾತು ಕೇಳಿಬಂದಿದೆ.
೩೭.೫೨ ಲಕ್ಷ ಮಕ್ಕಳಿಗೆ `ಕ್ಷಿÃರಭಾಗ್ಯ’ ಲಭಿಸಿದ್ದರಿಂದ ಅಪೌಷ್ಠಿಕತೆ ಪ್ರಮಾಣ ಗಮನಾರ್ಹ ರೀತಿಯಲ್ಲಿ ಇಳಿದಿದೆ.೨೦೧೩ರಲ್ಲಿ ೧೦.೯೭ ಲಕ್ಷ ಮಕ್ಕಳು ಅಪೌಷ್ಠಿಕತೆ, ೫೧,೪೫೩ ಮಕ್ಕಳು ತೀವ್ರ ಅಪೌಷ್ಠಿಕತೆ ಸಮಸ್ಯೆ ಎದುರಿಸುತ್ತಿದ್ದರು.
ಈ ಸಂಖ್ಯೆ ಈಗ ಕ್ರಮವಾಗಿ ೭.೬೭ ಲಕ್ಷ ಹಾಗೂ ೧೭,೭೩೮ಕ್ಕೆ ತಗ್ಗಿದೆ. `ಅನ್ನಭಾಗ್ಯ’ ಯೋಜನೆ ಐದು ವರ್ಷಗಳಲ್ಲಿ ೩.೮೫ ಕೋಟಿ ಜನರಿಗೆ ತಲುಪಿದೆ. ಇದಕ್ಕಾಗಿ ಸರ್ಕಾರ ೧೧,೫೬೪ ಕೋಟಿ ರೂ. ಖರ್ಚು ಮಾಡಿದೆ. ಇಂಧನ ಉಳಿತಾಯಕ್ಕೆ ಜಾರಿಗೆ ತಂದಿದ್ದ `ಹೊಸ ಬೆಳಕು’ ಯೋಜನೆಯಡಿ ೧.೮೪ ಕೋಟಿ ಎಲ್‌ಇಡಿ ಬಲ್ಬ್, ೨.೩೯ ಲಕ್ಷ ಟ್ಯೂಬ್ಲೆöÊಟ್, ೨೨ ಸಾವಿರ ಎನರ್ಜಿ ಎಫಿಷಿಯನ್ಸ್ ಫ್ಯಾನ್‌ಗಳನ್ನು ರಿಯಾಯಿತಿ ದರದಲ್ಲಿ ಸರ್ಕಾರ ವಿತರಿಸಿದ್ದು, ಇವೂ ಮುಂದುವರಿಯಲಿವೆ.
ಬೆಂಗಳೂರಿನ ೧೯೮ ವಾರ್ಡ್ಗಳಲ್ಲೂ `ಇಂದಿರಾ ಕ್ಯಾಂಟೀನ್'(ಸಂಚಾರ ಕ್ಯಾಂಟೀನ್ ಸೇರಿ)ಆರಂಭಿಸಲಾಗಿದೆ.ಅಷ್ಟೆÃ ಅಲ್ಲದೆ, ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲೂ ಆರಂಭಿಸಿ ೧೦ ರೂ.ಗೆ ಊಟ ನೀಡಲಾಗುತ್ತಿದೆ.ವಸತಿಭಾಗ್ಯ ೨೦೧೭-೧೮ರಲ್ಲಿ ೭ಲಕ್ಷ ಮನೆ ಮಂಜೂರು,ಅವುಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ೬ ಲಕ್ಷ, ಬೆಂಗಳೂರಿನಲ್ಲಿ ೧ ಲಕ್ಷ ಮನೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿವೆ. ಅಷ್ಟೆÃ ಅಲ್ಲ, ಕೇಂದ್ರ ಸರ್ಕಾರದ ಉಜ್ವಲಾ ಯೋಜನೆಗೆ ಪರ್ಯಾಯವಾಗಿ ೩೦ ಲಕ್ಷ ಕುಟುಂಬಗಳಿಗೆ ಅಡುಗೆ ಅನಿಲ ಸೌಲಭ್ಯ ಒದಗಿಸುವ `ಅನಿಲಭಾಗ್ಯ’ ಯೋಜನೆ ಕೂಡ ಜಾರಿಯಲ್ಲಿದೆ.ಈ ಎಲ್ಲ ಜನಪರ ಹಾಗೂ ಜನಪ್ರಿಯ ಯೋಜನೆಗಳು ಮುಂದುವ ರಿಯುವುದರಲ್ಲಿ ಅನುಮಾನವಿಲ್ಲ.
ಜನರನ್ನು ನಿರುದ್ಯೊÃಗಿಗಳಾಗಿಸುವ ಕೆಲ ಯೋಜನೆಗಳಿಗೆ, ವಿಶೇಷ ಸಬ್ಸಿಡಿಗಳಿಗೆ ಹಾಗೂ ಒಂದೇ ವರ್ಗದ ವಿಶೇಷ ಅನುಕೂಲಕ್ಕೆ ಅವಕಾಶ ಮಾಡಿಕೊಟ್ಟಿದ್ದ ಕೆಲ ಯೋಜನೆ ನಿಲ್ಲುವುದಲ್ಲಿ ಅನುಮಾನವಿಲ್ಲ ಎಂದು ತಿಳಿದು ಬಂದಿದೆ.

loading...