ಆಡಳಿತ ನಡೆಸಲು ಆಗದಿದ್ದರೆ ರಾಜಿನಾಮೆ ನೀಡಿ

0
51
loading...

ಕನ್ನಡಮ್ಮ ಸುದ್ದಿ-ಬಾಗಲಕೋಟೆ: ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ನಡೆಸಿ ಏಳು ತಿಂಗಳುಗಳು ಕಳೆದಿವೆ. ಏಳು ತಿಂಗಳು ನಂತರ ಇಂದು ಸಾಮಾನ್ಯ ಸಭೆ ಕರೆದಿದ್ದಿÃರಿ. ಕಾಲ ಕಾಲಕ್ಕೆ ಜಿಪಂ ಸಾಮಾನ್ಯ ಸಭೆ ನಡೆಯುತ್ತಿಲ್ಲ. ಜಿಪಂ ಸದಸ್ಯರ ಅನುದಾನ ಲ್ಯಾಪ್ಸ್ ಆಗಿದೆ. ಇದಕ್ಕೆ ಯಾರು ಹೊಣೆ ಎಂದು ಆಡಳಿತ ಪಕ್ಷದ ಕಾಂಗ್ರೆಸ್ ಸದಸ್ಯರು ಹಾಗೂ ವಿರೋಧ ಪಕ್ಷದ ಬಿಜೆಪಿ ಸದಸ್ಯರು ಒಟ್ಟಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವೀಣಾ ಕಾಶಪ್ಪನವರ ಮೇಲೆ ಮುಗಿಬಿದ್ದ ಘಟನೆ ನಡೆಯಿತು.
ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಜರುಗಿದ ೭ನೇ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್-ಬಿಜೆಪಿ ಸದಸ್ಯರು ಅಧ್ಯಕ್ಷರ ಮೇಲೆ ಮುಗಿಬಿದ್ದು, ಕಳೆದ ತಿಂಗಳು ದಿ.೨೩ ರಂದು ಸಾಮಾನ್ಯ ಸಭೆ ಕರೆದು ನಂತರ ಸಭೆ ರದ್ದುಗೊಳಿಸಿದಿರಿ. ತದನಂತರ ಜುಲೈ ೧೧ ರಂದು ಸಭೆ ಕರೆದು ಮತ್ತೆ ಆ ಸಭೆಯನ್ನು ಜುಲೈ ೧೨ ಕ್ಕೆ ಮುಂದೂಡಿದರೆ. ಜುಲೈ ೧೨ ರಂದು ಸಹ ಸಭೆ ರದ್ದುಗೊಳಿಸಿ ಜುಲೈ ೧೭ಕ್ಕೆ ಮುಂದೂಡಿದಿರಿ. ಏಕೆ ಸಭೆ ಮುಂದೂಡಲಾಯಿತು. ಕಾರಣ ಏನು ಎಂದು ಕಾಂಗ್ರೆಸ್‌ನ ಜಿಪಂ ಸದಸ್ಯ ಬಾಯಕ್ಕೆ ಮೇಟಿ ಅಧ್ಯಕ್ಷರನ್ನು ಪ್ರಶ್ನಿಸಿದರು. ನೀವು ಮನಸಿಗೆ ಬಂದಾಗ ಸಭೆ ಕರೆಯುವುದು ಮತ್ತು ರದ್ದು ಗೊಳಿಸುವುದು ಮಾಡಿದರೆ ನಮ್ಮನ್ನೆÃನು ನಿಮ್ಮ ಮನೆಯ ಕೂಲಿ ಆಳುಗಳು ಎಂದು ತಿಳಿದಿದ್ದಿÃರ ಎಂದಾಗ ಬಿಜೆಪಿಯ ಎಲ್ಲ ಸದಸ್ಯರು ಸಹ ಬಾಯಕ್ಕ ಮೇಟಿ ಅವರ ಪರ ಮಾತನಾಡಿ, ನಿಮಗೆ ಇಷ್ಟ ಬಂದಾಗ ಸಭೆ ನಡೆಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಸದಸ್ಯರಾದ ಶಶಿಕಾಂತ ಪಾಟೀಲ್ ಮತ್ತು ಹೂವಪ್ಪ ರಾಠೋಡ ಜಿಪಂ ಅಧ್ಯಕ್ಷರನ್ನು ತರಾಟೆಗೆ ತೆಗೆದು ಕೊಂಡರು.
ಜಿಪಂ ಸದಸ್ಯ ಹೂವಪ್ಪ ರಾಠೋಡ ಮಾತನಾಡಿ, ಅಧ್ಯಕ್ಷರೇ ನಿಮಗೆ ಆಡಳಿತ ನಡೆಸಲು ಬರುವುದಿಲ್ಲ, ಅಧಿಕಾರಿಗಳು ನಿಮ್ಮ ಹಿಡಿತದಲ್ಲಿ ಇಲ್ಲ ಅಂದರೆ ನೀವು ಅಧ್ಯಕ್ಷ ಹುದ್ದೆಯಲ್ಲಿ ಮುಂದೆವರೆಯಲು ಅನರ್ಹರು, ನೀವು ಯಾವುದೇ ಕಾರಣಕ್ಕೆ ಜಿಪಂ ಅಧ್ಯಕ್ಷೆ ಹುದ್ದೆಯಲ್ಲಿ ಮುಂದುವರೆಯಬಾರದು, ರಾಜಿನಾಮೆ ನೀಡಿ ಎಂದು ಒತ್ತಾಯಿಸಿದರು.
ಜಿಪಂ ಸದಸ್ಯ ಶಶಿಕಾಂತ ಪಾಟೀಲ್ ಮಾತನಾಡಿ, ಇಂತಹ ಶಕ್ತಿ ಇಲ್ಲದ ಜಿಲ್ಲಾ ಪಂಚಾಯತ್ ರಾಜ್ಯದಲ್ಲಿ ಎಲ್ಲೂ ಇಲ್ಲ. ಹುನಗುಂದ ಜನಸಂಪರ್ಕ ಸಭೆಗೆ ನನ್ನನ್ನು ಆಹ್ವಾನಿಸಿಲ್ಲ ಏಕೆ ? ನಾನು ಜನಪ್ರತಿನಿಧಿ ಅಲ್ಲವಾ ಎಂದು ಕೇಳಿದಾಗ ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿ, ಸಭೆಗೆ ಎಲ್ಲ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು ಎಂದು ತಾಪಂ ಇಒ ಅವರಿಗೆ ಸೂಚಿಸಿದ್ದೆ ಎಂದು ಅವರು ಸಭೆಗೆ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಮುತ್ತಪ್ಪ ಕೋಮರ, ಜಿಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಜಿಪಂನ ಎಲ್ಲ ಸದಸ್ಯರು ಹಾಗೂ ಎಲ್ಲ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
====ಬಾಕ್ಸ್====
ಮೈಂಡ್ ಯುವರ್ ಲಾಂಗ್ವೆÃಜ್ ಜಿಪಂ ಸದಸ್ಯ ಶಶಿಕಾಂತ ಪಾಟೀಲ್ ಜಿಪಂ ಸಿಇಒ ಅವರ ಮೇಲೆ ಏಕವಚನದಲ್ಲಿ ಮಾತನಾಡಿದಾಗ ಗರಂ ಆದ ಸಿಇಒ ವಿಕಾಸ ಸುರಳಕರ, ಸರಿಯಾಗಿ ಮಾತನಾಡಿ, ಮೈಂಡ್ ಯುವರ್ ಲಾಂಗ್ವೆÃಜ್ ಎಂದು ಜಿಪಂ ಸದಸ್ಯ ಶಶಕಾಂತ ಪಾಟೀಲ ಅವರಿಗೆ ಎಚ್ಚರಿಕೆ ನೀಡಿದರು.

========ಹೆಳಿಕೆ-======
ಪರ್ಸೆಂಟೇಜ ಕೊಡದಿದ್ದರೆ ಬಿಲ್ ಪಾಸ್ ಆಗಲ್ಲ ಅಧಿಕಾರಿಗಳು ಯಾವುದೇ ಬಿಲ್ ಮಾಡಬೇಕು ಎಂದರೂ ಸಹ ೩ ಪರ್ಸೆಂಟ್ ಕೊಟ್ಟರೆ ಮಾತ್ರ ಬಿಲ್ ಪಾಸ್ ಮಾಡುತ್ತಾರೆ. ಕೊಡಲಿಲ್ಲ ಎಂದರೆ ಬಿಲ್ ಪಾಸ್ ಆಗುವುದೇ ಇಲ್ಲ. ಹೀಗೆ ಆದರೆ ಗುಣಮಟ್ಟದ ಕಾಮಗಾರಿಗಳು ಕೈಗೊಳ್ಳಲು ಸಾಧ್ಯವೆ?
ಮಹಾಂತೇಶ ಉದಪುಡಿ, ಜಿಪಂ ಸದಸ್ಯ.
=============ಹೇಳಿಕೆ-========
ಅರ್ಹರು ಅಧ್ಯಕ್ಷರಾಗಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ೨೭ ತಿಂಗಳುಗಳು ಕಳೆದಿವೆ. ಈಗಲು ಅಧಿಕಾರಿಗಳು ನಿಮ್ಮ ಮಾತು ಕೇಳುವುದಿಲ್ಲ ಎಂದರೆ ಹೇಗೆ. ಆಡಳಿತ ನಡೆಸಲು ಆಗದಿದ್ದರೆ ರಾಜಿನಾಮೆ ನೀಡಿ ಮನೆಗೆ ಹೋಗಿ. ಯಾರಾದರೂ ಅರ್ಹರು ಅಧಿಕಾರ ನಡೆಸುತ್ತಾರೆ.
ವೀರೇಶ ಉಂಡೋಡಿ, ಜಿಪಂ ಸದಸ್ಯ.

loading...