ಆದಷ್ಟು ಬೇಗ ಮೈತ್ರಿ ಸರಕಾರ ಪತನ,ಕರಂದ್ಲಾಜೆ ಭವಿಷ್ಯ

0
16
loading...

ಬೆಂಗಳೂರು:ರಾಜ್ಯದಲ್ಲಿ ಬಿಜೆಪಿ ಅಪರೇಷನ್ ಕಮಲ ಮಾಡಲ್ಲ. ಆದಷ್ಟು ಬೇಗ ಸಮ್ಮಿಶ್ರ ಸರ್ಕಾರ ಕೊನೆಗೊಳ್ಳಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಭವಿಷ್ಯ ನುಡಿದಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಜೆಡಿಎಸ್ ಕಾಂಗ್ರೆಸ್‌ನ್ನು ಒಂದು ದಿನ ತಿಂದು ಹಾಕುತ್ತೆ ಅನ್ನೊÃ ಭಯದಲ್ಲಿದ್ದಾರೆ. ಕಾಂಗ್ರೆಸ್ ನವರು ಹಿಂಬಾಗಿಲಿನ ಮೂಲಕ ಪಾಪದ ಕೃತ್ಯ ಎಸಗಿದ್ದಾರೆ.ನಮ್ಮೊಂದಿಗೆ ಹತ್ತಾರು ಶಾಸಕರು ಸಂಪರ್ಕದಲ್ಲಿದ್ದಾರೆ.ಆದರೆ ನಮಗೆ ಹೈಕಮಾಂಡ್‌ನ ಆದೇಶವಿದೆ.ಹಾಗಾಗಿ ನಾವು ಸರ್ಕಾರ ಬೀಳಿಸಲ್ಲ ಎಂದಿದ್ದಾರೆ.
ಇನ್ನು ಜಮೀರ್‌ಅಹ್ಮದ್ ಇದೇ ಕಾರು ಬೇಕು ಎಂದು ಅಹಂ ಪ್ರದರ್ಶಿಸಿದ್ದಾರೆ.ಸರ್ಕಾರ ಇವರ ಮಾತಿಗೆ ಜಗ್ಗಬಾರದು.ಅವರಿಗೆ ಕೊಟ್ಟರೆಎಲ್ಲರಿಗೂ ಕೊಡುವ ಹಾಗೆ ಆಗಬೇಕು.ಹಾಗಾಗಿ ಜಮೀರ್ ಒತ್ತಾಯಕ್ಕೆ ಮಣೆ ಹಾಕಬೇಡಿ ಎಂದು ವಾಗ್ದಾಳಿ ನಡೆಸಿದರು.

loading...