ಆರೋಪಿಗಳು ಪಾತಾಳದಲ್ಲಿರಲಿ, ನೇಪಾಳದಲ್ಲಿರಲಿ ಬಿಡುವುದಿಲ್ಲ: ಐಜಿಪಿ ಅಲೋಕ್

0
12
ಕನ್ನಡಮ್ಮ ಸುದ್ದಿ-ವಿಜಯಪುರ : ಅಪರಾಧಿಕ ಚಟುವಟಿಕೆಗಳಿಗೆ ಫುಲ್ ಸ್ಟಾಪ್ ಹಾಕುವ ಜೊತೆಗೆ ಭೀಮಾತೀರಕ್ಕೆ ಅಂಟಿಕೊಂಡಿರುವ ಕಳಂಕ ಕಳಚಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ ಎಂದು ಉತ್ತರ ವಲಯ ಐಜಿಪಿ ಅಲೋಕ್ ಕುಮಾರ ಆಶಯ ವ್ಯಕ್ತಪಡಿಸಿದರು.
ಚಡಚಣ ತಾಲೂಕಿನ ಉಮರಾಣಿಯಲ್ಲಿ ಗುರುವಾರ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜನ ಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

loading...

೧೯೮೮ ರಿಂದ ಇಲ್ಲಿಯವರೆಗೆ ದಾಖಲಾಗಿರುವ ವಿವಿಧ ಗಂಭೀರ ಅಪರಾಧಿಕ ಪ್ರಕರಣಗಳಲ್ಲಿ ಪರಾರಿಯಾಗಿರುವ ಆರೋಪಿಗಳ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಈಗಾಗಲೇ ಈ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ಸಹ ನೀಡಿದ್ದೆÃನೆ. ಪರಾರಿಯಾಗಿರುವ ಆರೋಪಿಗಳು ಪಾತಾಳದಲ್ಲಿಯೇ ಅಡಗಿ ಕುಳಿತಿರಲಿ, ನೇಪಾಳದಲ್ಲಿಯೇ ಅಡಗಿ ಕುಳಿತಿರಲಿ ಬಿಡುವುದಿಲ್ಲ. ಅವರನ್ನು ಹುಡುಕಿ ತರುತ್ತೆÃನೆ ಎಂದು ಐಜಿಪಿ ಅಲೋಕ್ ಕುಮಾರ ಗುಡುಗಿದರು.
ಈ ಭಾಗದಲ್ಲಿ ಹಂತಕರ ಮಕ್ಕಳು ಹಂತಕರಾಗಿಯೇ ಮುಂದುವರೆಯುತ್ತಿರುವುದು ನೋವಿನ ಸಂಗತಿ. ಈ ಭಾಗದಲ್ಲಿ ಸಮೃದ್ಧವಾದ ನೀರು ಹರಿಯುತ್ತಿದೆ, ಉತ್ತಮ ಬೆಳೆ ಬರುತ್ತದೆ. ಎರಡು ಕುಟುಂಬಗಳ ಧ್ವೆÃಷಮಯ ವಾತಾವರಣದಿಂದಾಗಿ ಈ ಭಾಗಕ್ಕೆ ಒಂದು ರೀತಿಯ ಅಪರಾಧಿಕ ಸ್ಪರ್ಶವಾಗಿ ಬಿಟ್ಟಿದೆ. ಈಗ ಹಳೆಯದನ್ನು ಮರೆತು ಹೊಸ ಬದುಕು ಕಟ್ಟಿಕೊಳ್ಳುವತ್ತ ಜನತೆ ಮುಂದಾಗಬೇಕು, ಇದಕ್ಕೆ ಇಲಾಖೆ ಸಹ ಸಂಪೂರ್ಣವಾಗಿ ಸಹಕರಿಸಲಿದೆ ಎಂದರು.

ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ಅಣ್ಣ ಬಸವಣ್ಣನವರ ವಚನವನ್ನು ಉಲ್ಲೆÃಖಿಸಿದ ಐಜಿಪಿ, ಅಣ್ಣ ಬಸವಣ್ಣನವರು ಜನ್ಮ ತಾಳಿದ ನಾಡು ಇದು. ಅಣ್ಣ ಬಸವಣ್ಣನವರು ಕಳ್ಳತನ ಮಾಡಬೇಡಿ, ಕೊಲೆ ಮಾಡಬೇಡಿ ಎಂದು ಹೇಳಿದ್ದಾರೆ. ಆದರೆ ಅವರ ತತ್ವಗಳಿಂದ ವಿಮುಖವಾಗಿ ಕೊಲೆ ಮಾಡುವ ಸಂಸ್ಕೃತಿ ಈ ಭಾಗದಲ್ಲಿ ಬೆಳೆದು ಬಂದಿರುವುದು ನಿಜಕ್ಕೂ ನೋವಿನ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.
ಎಚ್ಚರಿಕೆ: ಈ ಭಾಗದಲ್ಲಿ ಅಪರಾಧಿಕ ಚಟುವಟಿಕೆಗಳನ್ನು ಪೋಷಿಸುವರಿಗೆ ಕಠಿಣ ಎಚ್ಚರಿಕೆ ರವಾನಿಸಿದ ಐಜಿಪಿ, ಇನ್ನು ಮುಂದೆಯೂ ಸಹ ಅಪರಾಧಿಕ ಚಟುವಟಿಕೆಗಳನ್ನು ನಡೆಸಿದರೆ ಕರ್ನಾಟಕ ಆರ್ಗನೈಸ್ಡ್ ಕ್ರೆöÊಂ ಆಕ್ಟ್ ಅನ್ವಯ ಪ್ರಕರಣ ದಾಖಲಿಸಲಾಗುವುದು. ಇದೊಂದು ಕಠಿಣವಾದ ಕಾನೂನು ಇದ್ದು, ಈಗಾಗಲೇ ಹಲವಾರು ಪ್ರಕರಣಗಳಲ್ಲಿ ಕಠಿಣವಾದ ಶಿಕ್ಷೆ ಅನುಭವಿಸುವಂತಾಗಿದೆ.

ಅಕ್ರಮ ಮರಳು, ಸುಫಾರಿ, ಕಿಡ್ನಾö್ಯಪ್, ಹಫ್ತಾ ವಸೂಲಿ ಸೇರಿದಂತೆ ಹಲವಾರು ಅಪರಾಧಿಕ ಚಟುವಟಿಕೆಗಳಿಂದ ಹಣ ಸಂಗ್ರಹಣೆ ಮಾಡುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಈ ಕಠಿಣವಾದ ಕಾನೂನು ರೂಪಿಸಲಾಗಿದೆ. ಮುಂದೆಯೂ ಅಪರಾಧಿಗಳು ಬಾಲ ಬಿಚ್ಚಿದರೆ ಈ ಕಠಿಣ ಕಾನೂನಿನ ಅಸ್ತç ಪ್ರಯೋಗಿಸಬೇಕಾಗುತ್ತದೆ ಎಂದು ವಾರ್ನಿಂಗ್ ನೀಡಿದರು. ವಿವಿಧ ಪ್ರಕರಣಗಳಲ್ಲಿ ಪರಾರಿಯಾದವರು ಸಹ ಕೂಡಲೇ ಶರಣಾಗತಿಯಾಗಬೇಕು ಎಂದು ಐಜಿಪಿ ಎಚ್ಚರಿಕೆ ಸಂದೇಶ ರವಾನಿಸಿದರು.
ಹತ್ತಳ್ಳಿ ಮಠದ ಶ್ರಿÃ ಗುರುಪಾದೇಶ್ವರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಜಿಲ್ಲಾ ಪೊಲೀಸ್ ಅಧೀಕ್ಷಕ ಪ್ರಕಾಶ ನಿಕ್ಕಂ ಅಮೃತ, ಎಎಸ್‌ಪಿ ಆರ್. ಶಿವಕುಮಾರ, ಶ್ರಿÃಶೈಲ ಭೈರಗೊಂಡ, ಭೀಮು ಭೈರೊಗಂಡ, ಶ್ರಿÃಶೈಲಗೌಡ ಬಿರಾದಾರ, ಬಾಪುಗೌಡ ಪಾಟೀಲ, ತಹಶೀಲ್ದಾರ ಎಸ್.ಎಚ್. ಮೆಳ್ಳಿಗೇರಿ ಪಾಲ್ಗೊಂಡಿದ್ದರು.

loading...