ಆರ್ಥಿಕ ಸ್ಥಿತಿ ಸುಧಾರಿಸುವಲ್ಲಿ ಲೆಕ್ಕ ಪರಿಶೋದಕರ ಪ್ರಾಮಾಣಿಕ ಪ್ರಯತ್ನ :ಬಿದರೂರ

0
4
loading...

ಕನ್ನಡಮ್ಮ ಸುದ್ದಿ- ಗದಗ: ಗದುಗಿನ ಮುಳಗುಂದ ನಾಕಾ ಕೆಇಬಿ ಹತ್ತಿರ,ಪೊಲೀಸ್ ಅತಿಥಿ ಗೃಹ ಎದರಿಗೆ ಇರುವ ಬಿ.ಬಿ.ಹೊಂಬಳ ಕಟ್ಟಡದಲ್ಲಿ ಕಾಮರ್ಸ ಕಾರ್ನರ್ ಉದ್ಘಾಟನೆ ಹಾಗೂ ಲೆಕ್ಕ ಪರಿಶೋಧಕರ ದಿನಾಚರಣೆಯನ್ನು ವಿಜೃಂಬಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊಂಬಳ ಅಸೋಸಿಯೇಟ್‍ನ ಶ್ರೀ ಜಗದೀಶ ಬಿದರೂರವರು ವಹಿಸಿ ಮಾತನಾಡಿ, ಸಮಾಜದಲ್ಲಿ ಅತ್ಯಂತ ಪಾರದರ್ಶಕತೆಯಿಂದ ಕಾರ್ಯ ನಿರ್ವಸುವುದರ ಮೂಲಕ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದಾರೆ.ಸಾರ್ವಜನಿಕವಾಗಿ ದಿನಾಚರಣೆಯನ್ನು ಮಾಡುತ್ತಿರುವುಲೆಕ್ಕ ಪರಿಶೋದಕರುದು ಶ್ಲಾಘನೀಯ, ಹಿರಿಯ ಲೆಕ್ಕ ಪರಿಶೋಧಕರನ್ನು ಗೌರವಿಸುವುದರ ಮೂಲಕ ಇನ್ನೂ ಅರ್ಥಪೂರ್ಣವಾಗಿ ಆಚರಿಸುವಂತಾಗಲೆಂದು ಹೇಳಿ. ಇಂದೇ ಕಾಮರ್ಸ ಕಾರ್ನರ್ ಉದ್ಘಾಟನೆಗೊಂಡಿದ್ದು ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿಶ್ವ ಕಲ್ಯಾಣ ಸಂಸ್ಥೆಯ ಅಧ್ಯಕ್ಷ, ರಾಜ್ಯ ಪ್ರಶಸ್ತಿ ಪುರಸ್ಕøತ ಮಂಜುನಾಥ ದು. ಹದ್ದಣ್ಣವರ ಆಗಮಿಸಿ ಮಾತನಾಡಿ, ಪ್ರತಿಯೊಂದು ವ್ಯವಹಾರಿಕ ಕ್ಷೇತ್ರಕ್ಕೆ ಲೆಕ್ಕ ಪರಿಶೋಧಕರು ಅವಶ್ಯವಾಗಿ ಬೇಕು. ಸಮಾಜಲ್ಲಿ ಇವರನ್ನೂ ಗುರುತಿಸಿ ಗೌರವಿಸುವುದು ನಮ್ಮೇಲ್ಲರ ಕರ್ತವ್ಯವಾಗಿದೆ. ನಮ್ಮೇಲ್ಲರ ಆರ್ಥಿಕತೆಯನ್ನು ನಿರ್ವಹಿಸಿ, ಸೂಕ್ತವಾದ ನ್ಯಾಯ ಸಮ್ಮತವಾದ ಮಾರ್ಗದರ್ಶ ನೀಡುವುದರ ಮೂಲಕ ಸಮಾಜಕ್ಕೆ ತಮ್ಮ ಅಮೂಲ್ಯವಾದ ಸೇವೆಯನ್ನು ಅತ್ಯಂತ ಸಮರ್ಪಣಾ ಭಾವದಿಂದ ಮಾಡುತ್ತಿದ್ದಾರೆ.ಇವರಿಗೆ ನಮ್ಮದೊಂದು ದೊಡ್ಡ ಸಲಾಮ್. ಇಂದು ಉದ್ಘಾಟನೆಗೊಂಡ ಕಾಮರ್ಸ ಕಾರ್ನರ್ ಕೇವಲ ಬೋಧನೆ ಮಾತ್ರ ಸಿಮೀತವಾಗದೇ ಯುವಕ-ಯುವತಿಯರಲ್ಲಿ ಸಂಸ್ಕಾರ ಹಾಗೂ ವ್ಯಕ್ತಿತ್ವ ವಿಕಸನದ ಮೌಲ್ಯಗಳನ್ನು ತಿಳಸುವುದರ ಮೂಲಕ ಸಮಾಜಕ್ಕೆ ಪ್ರಜ್ಞಾವಂತ ಪ್ರಜೆಯನ್ನಾಗಿಸುವಂತಾಗಲೆಂದು ಹೇಳಿದರು.

ಕಾಮರ್ಸ ಕಾರ್ನರ್‍ನ ಕಿರಣ ಶ್ಯಾವಿ, ವಿರೇಶ ಕುರಟ್ಟಿ & ಆನಂದ ದೇಸಾಯಿಪಟ್ಟಿಯವರು ಮಾತನಾಡಿ ಸರಳ ವಿಧಾನ ಹಾಗೂ ಕ್ರಮಬದ್ಧವಾಗಿ ನುರಿತ, ಅನುಭವಿಕ ತಜ್ಞರಿಂದ ಬೋಧನೆ & ಪ್ರಾಯೋಗಿ ತರಬೇತಿ ನೀಡುವುದರ ಮೂಲಕ ಕಾಮರ್ಸನಲ್ಲಿ ಕ್ರಾಂತಿಯನ್ನೇ ಸೃಷ್ಠಿ ಮಾಡುವುದೇ ನಮ್ಮ ಉದ್ದೇಶವಾಗಿದೆ. ಬೆಳಗ್ಗೆ & ಸಾಯಂಕಾಲ ನಡೆಯುವ ತರಗತಿಗಳಿಗೆ ಎಲ್ಲ ಕಾಮರ್ಸ ಸಹೋದರ ಸಹೋದರಿಯರು ಶೀಘ್ರವಾಗಿ ನೋಂದಣಿ ಮಾಡಿಕೊಳ್ಳಬೇಕು. ಕೆಲವರಿಗೆ ಮಾತ್ರ ಅವಕಾಶ ಮೊದಲು ಬಂದವರಿಗೆ ಆಧ್ಯತೆ ನೀಡಲಾಗುವುದೆಂದು ಹೇಳಿದರು.

ಕಾಮರ್ಸ ಕಾರ್ನರ್ ಉದ್ಘಾಟನೆ ಹಾಗೂ ಲೆಕ್ಕ ಪರಿಶೋಧಕರ ದಿನಾಚರಣೆಯನ್ನು ಪೂಜೆ & ದೀಪ ಬೆಳಗಿಸಿ, ಹೂಗಳನ್ನು ಸಮರ್ಪಣೆ ಮಾಡುವುದರ ಮೂಲಕ ವಿಜೃಂಬಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಶಂಕರಲಿಂಗ ಶ್ಯಾವಿ, ಜಯಮ್ಮ ಶ್ಯಾವಿ, ಶೈಲಾ ಕುರಟ್ಟಿ, ಮಂಜುಳಾ ದೇಸಾಯಿಪಟ್ಟಿ, ರಜನಿ ರಜಪೂತ, ಗಿರೀಶ ಡಿ. ಪ್ರವೀಣ ಕಲ್ಲೂರ, ಸಿದ್ಧಲಿಂಗಯ್ಯ ಹಿರೇಮಠ & ಅಕ್ಷಯ ಓದಸೂಮಠವರು ಉಪಸ್ಥಿತರಿದ್ದರು. ಕೊನೆಗೆ ಎಲ್ಲರಿಗೂ ಸಿಹಿಯೊಂದಿಗೆ ಉಪಹಾರ ಹಂಚಲಾಯಿತು.

loading...