ಆಹಾರವಿಲ್ಲದೆ ಗುಹೆಯಲ್ಲಿ ಬಾಲಕರು ೯ ದಿನ ಕಳೆದಿದ್ದುಅಚ್ಚರಿ

0
18
loading...

ಥೈಲ್ಯಾಂಡ್ ಗುಹೆಯಲ್ಲಿ ಜೀವನ್ಮರಣದ ಹೋರಾಟ ನಡೆಸಿ ಕೊನೆಗೂ ಜಯಶಾಲಿಯಾಗಿ ಬಂದ ಫುಟ್ಬಾಲ್ ಆಟಗಾರರು ತಮ್ಮ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ತರಬೇತುದಾರ ಸೇರಿದಂತೆ 12 ಫುಟ್ಬಾಲ್ ಆಟಗಾರರನ್ನು ಗುಹೆಯಿಂದ ಸುರಕ್ಷಿತವಾಗಿ ಕರೆತರಲು ಅಂತರಾಷ್ಟ್ರೀಯ ತಂಡ ಯಶಸ್ವಿಯಾಗಿತ್ತು. ನಾಲ್ಕು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಬಾಲಕರು ಈಗ ಮನೆಗೆ ತೆರಳಿದ್ದಾರೆ.
ತರಬೇತುದಾರ ಹಾಗೂ ಫುಟ್ಬಾಲ್ ಆಟಗಾರರು ಇದೇ ಮೊದಲ ಬಾರಿ ಪತ್ರಿಕಾಗೋಷ್ಠಿ ನಡೆಸಿ ಆ ಕರಾಳ ದಿನಗಳನ್ನು ಮೆಲುಕು ಹಾಕಿದ್ರು. ಗುಹೆಯಲ್ಲಿ 9 ದಿನ ಆಹಾರವಿಲ್ಲದೆ ಕಳೆಯೋದು ಚಮತ್ಕಾರದ ವಿಚಾರ. ಗುಹೆಯಲ್ಲಿ ಸಿಕ್ಕ ನೀರನ್ನು ಕುಡಿದು ಮಕ್ಕಳು ಹೊಟ್ಟೆ ತುಂಬಿಸಿಕೊಂಡಿದ್ದರಂತೆ. ಒಬ್ಬರನ್ನೊಬ್ಬರು ಅಂಟಿ ಕುಳಿತು ದಿನ ಕಳೆಯುತ್ತಿದ್ದರಂತೆ.
ರಕ್ಷಣೆಗೆ ಬಂದ ವ್ಯಕ್ತಿಗಳ ಇಂಗ್ಲೀಷ್ ಕೇಳಿ ಇಂಗ್ಲೆಂಡ್ ಗೆ ಬಂದಿದ್ದೇವೆ ಎಂದುಕೊಂಡಿದ್ದರಂತೆ. ಹಸಿವಾದ್ರೆ ಏನು ಮಾಡ್ತಿದ್ರಿ ಎನ್ನುವ ಪ್ರಶ್ನೆಗೆ ಚಿಕ್ಕ ಬಾಲಕನೊಬ್ಬ ಉತ್ತರ ನೀಡಿದ್ದಾನೆ. ಹಸಿವಾದ್ರೆ ಫ್ರೈಡ್ ರೈಸ್ ತಿನ್ನುವ ಕನಸು ಕಾಣ್ತಿದ್ದೆ ಎಂದಿದ್ದಾನೆ. ಮನೆಗೆ ಹೋದ್ಮೇಲೆ ಅಮ್ಮ ಹೊಡಿತಾಳೆ ಎಂಬ ಭಯ ಗುಹೆಯಲ್ಲಿರುವ ಬಾಲಕನೊಬ್ಬನಿಗೆ ಕಾಡಿತ್ತಂತೆ.

loading...