ಇಂಡೋನೆಷ್ಯಾದಲ್ಲಿ ಭಾರಿ ಭೂಕಂಪ ಅಪಾಯದಲ್ಲಿ ಸಿಲುಕಿದ 560 ಪರ್ವತಾರೋಹಿಗಳು

0
27
loading...

ಲೊಮ್ಬೊಕ್(ಇಂಡೋನೆಷ್ಯಾ)- ಇಂಡೋನೆಷ್ಯಾದ ವಿಹಾರ ದ್ವೀಪದ.ಲ್ಲಿ ಪ್ರಬಲ ಭೂಕಂಪದಿಂದ ಸಾವು-ನೋವು ಸಂಭವಿಸಿದ ಬೆನ್ನಲ್ಲೇ ಲೊಮ್ಬೊಕ್ನಲ್ಲಿ ಸಕ್ರಿಯ ಜ್ವಾಲಾಮುಖಿ ಬಳಿ ಭೂಕುಸಿತ ಉಂಟಾಗಿ 560ಕ್ಕೂ ಹೆಚ್ಚು ಪರ್ವತಾರೋಹಿಗಳು ಮತ್ತು ಮಾರ್ಗದರ್ಶಕರು ಅತಂತ್ರರಾಗಿದ್ದು, ಅಪಾಯಕ್ಕೆ ಸಿಲುಕಿದ್ದಾರೆ.
ಪ್ರವಾಸಿಗರು ಶಿಖರ ಏರುವ ಮಾರ್ಗವಾದ ಮೌಂಟ್ ರಿನ್ಜನಿ ಪರ್ವತದಲ್ಲಿ ಸಂತ್ರಸ್ತರ ರಕ್ಷಣೆಗಾಗಿ ಹೆಲಿಕಾಪ್ಟರ್ಗಳು ಮತ್ತು ರಕ್ಷಣಾ ತಂಡ ಈಗಾಗಲೇ ಕಾರ್ಯೋನ್ಮುಖವಾಗಿವೆ ಎಂದು ರಾಷ್ಟ್ರೀಯ ಉದ್ಯಾನವನ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ. 560 ಮಂದಿ ಈಗಲೂ ಪರ್ವತ ಪ್ರದೇಶದಲ್ಲಿ ಸಿಲುಕಿದ್ದಾರೆ. ಸೆಗಾರ ಅನಕನ್ ಪ್ರದೇಶದಲ್ಲಿ 500 ಮಂದಿ ಹಾಗೂ ಬಟು ಸೆಪರ್ ಪರ್ವತದಲ್ಲಿ 60 ಜನರು ಅಪಾಯದಲ್ಲಿದ್ದಾರೆ. ಅವರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ ಎಂದು ರಿನ್ಜನಿ ನ್ಯಾಷನಲ್ ಪಾರ್ಕ್ನ ಮುಖ್ಯಸ್ಥ ಸುದಿಯೊನೊ ಹೇಳಿದ್ದಾರೆ.
ಇದೇ ಪ್ರದೇಶದಲ್ಲಿ ನಿನ್ನೆ 6.4 ತೀವ್ರತೆಯ ಭೂಕಂಪದಿಂದ 16 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದರು. ನೂರಾರು ಕಟ್ಡಡಗಳು ನಾಶವಾಗಿ ಅಪಾರ ನಷ್ಟ ಸಂಭವಿಸಿದೆ. ಈ ದುರ್ಘಟನೆಯಲ್ಲಿ ನಾಪತ್ತೆಯಾದವರಿಗಾಗಿ ತೀವ್ರ ಶೋಧ ಮುಂದುವರಿದಿದೆ.

loading...