ಇನ್ನು ಮುಂದೆ ನಿಮ್ಮ ಜಿಮೇಲನ್ನು ಬೇರೆಯವರೂ ಓದಬಹುದು…

0
17
loading...

ವಾಷಿಂಗ್ಟನ್: ಇನ್ನು ಮುಂದೆ ಮೂರನೇ ವ್ಯಕ್ತಿಗಳು ಸಹ ನಿಮ್ಮ ಖಾಸಗಿ ಜಿಮೇಲ್ ಖಾತೆಯನ್ನು ಓದಲು ಸಾಧ್ಯವಿದೆ. ಈ ಅವಕಾಶವನ್ನು ಪ್ರಖ್ಯಾತ ಸರ್ಚ್ ಇಂಜಿನ್ ಗೂಗಲ್ ಥರ್ಡ್ ಪಾಪಾರ್ಟಿ ಅಪ್ಲಿಕೇಷನ್ ಡೆವಲಪರ್ ಗಳಿಗೆ ನೀಡಿದೆ ಎಂದು ಅಮೆರಿಕಾದ ಪ್ರಖ್ಯಾತ ವೃತ್ತಪತ್ರಿಕೆ ವಾಲ್ ಸ್ಟಿçÃಟ್ ಜರ್ನಲ್ ವರದಿ ಮಾಡಿದೆ.
ಸಾಫ್ಟ್ ವೇರ್ ಅಭಿವೃದ್ದಿ ಪಡಿಸುವ ನೂರಕ್ಕೂ ಹೆಚ್ಚಿನ ಹೊರಗುತ್ತಿಗೆ ಸಂಸ್ಥೆಗಳಿಗೆ ಗೂಗಲ್ ಜಿಮೇಲ್ ಇನ್ ಬಾಕ್ಸ್ ಸ್ಕಾ÷್ಯನ್ ಮಾಡುವ ಅವಕಾಶವನ್ನು ಸರ್ಚ್ ಇಂಜಿನ್ ಸಂಸ್ಥೆ ಗೂಗಲ್ ನೀಡಿದೆ. ಈ ಹೊರಗುತ್ತಿಗೆ ಸಂಸ್ಥೆಗಳು ಬೇರೆಯವರ ಜಿಮೇಲ್ ಓದುವುದು ಅಷ್ಟೆÃ ಅಲ್ಲದೆ ತಮ್ಮದೇ ಸಂಸ್ಥೆಯ ಉದ್ಯೊÃಗಿಗಳ ಮೇಲ್ ಸಹ ಓದುವುದಕ್ಕೆ ಮುಂದಾಗಲಿದೆ.
ಜಾಗತಿಕವಾಗಿ ಅತಿ ಹೆಚ್ಚು ಜನರು ಜಿಮೇಲ್ ಅನ್ನು ತಮ್ಮ ಖಾಸಗಿ ಈ ಮೇಲ್ ಆಗಿ ಬಳಸುತ್ತಿದ್ದಾರೆ. ಜಗತ್ತಿನಲ್ಲಿ ಸರಿಸುಮಾರು ೧.೪ ಕೋಟಿ ಜನ ಜಿಮೇಲ್ ಬಳಕೆದಾರರಿದ್ದಾರೆ ಎಂದು ಅಂದಾಜಿಸಲಾಗಿದೆ.
ಗೂಗಲ್ ಹೇಳಿಕೆಯಂತೆ ಕೆಲವೇ ಸಂದರ್ಭಗಳಲ್ಲಿ ಮಾತ್ರ ಹೊರಗುತ್ತಿಗೆ ಸಂಸ್ಥೆಗಳಿಗೆ ಬಳಕೆದಾರರ ಜಿಮೇಲ್ ಓದುವ ಅವಕಾಶವಿದೆ. ಮೇಲ್ ನಲ್ಲಿ ಬಗ್ ಅಥವಾ ತಾಂತ್ರಿಕ ಸಮಸ್ಯೆಗಳು ತಲೆದೋರಿದಾಗ ಮಾತ್ರ ಬಳಕೆದಾರರ ಅನುಮತಿಯ ಮೇರೆಗೆ ಅವರ ಮೇಲ್ ಇನ್ ಬಾಕ್ಸ್ ತೆರೆದು ಓದಬಹುದಾಗಿದೆ ಎಂದು ವರದಿ ಮಾಡಿದೆ.
ಇದುವರೆಗೆ ಗೂಗಲ್ ನೌಕರರು ಮಾತ್ರವೇ ಕೆಲವೇ ಸಂದರ್ಭಗಳಲ್ಲಿ ಬಳಕೆದಾರರ ಜಿಮೇಲ್ ಖಾತೆ ಪ್ರವೇಶಿಸಿ ಮೇಲ್ ಓದುವ ಅವಕಾಶ ಹೊಂದಿದ್ದರು.

loading...