ಇನ್ಮೇಲೆ ಸರ್ಕಾರಿ ಕಚೇರಿಗಳಲ್ಲಿ ಪ್ಲಾಸ್ಟಿಕ್‌ ಬಾಟಲ್‌ ಬಳಕೆ ನಿಷೇಧ…?

0
21
loading...

ಎ.ಎಚ್‌.ಖಾಜಿ
ಶಿರಹಟ್ಟಿ: ಸರಕಾರಿ ಕಚೇರಿ, ಅಧೀನ ಕಚೇರಿ ಹಾಗೂ ಸಚಿವಾಲಯದ ಸಭೆಗಳಲ್ಲಿ ಇನ್ಮುಂದೆ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್‌ ಬಾಟಲ್‌ಗಳನ್ನು ಬಳಸುವಂತಿಲ್ಲ. ಇದರ ಬದಲು ಸ್ಟೀಲ್‌ ಲೋಟ್‌ಗಳನ್ನೇ ಬಳಸಬೇಕು.
ಸಮೂಹ ರಾಷ್ಟ್ರಗಳ ಸಾರ್ವತ್ರಿಕ ಸಭೆಯು 2018ರ ವಿಶ್ವ ಪರಿಸರ ದಿನಾಚರಣೆಯನ್ನು ‘ಬೀಟ್‌ ಪ್ಲಾಸ್ಟಿಕ್‌ ಪಲ್ಯೂಶನ್‌’ ಎಂದು ಘೋಷಿಸಿದ್ದೇ ತಡ ರಾಜ್ಯ ಸರಕಾರ ಕೂಡ ಮೈಕೊಡವಿ ನಿಂತಿದ್ದು, ಸರಕಾರಿ ಕಚೇರಿಯಿಂದಲೇ ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮುಂದಾಗಿದೆ.
ಪ್ಲಾಸ್ಟಿಕ್‌ನಿಂದ ಆರೋಗ್ಯ ಮತ್ತು ಪರಿಸರದ ಮೇಲಾಗುತ್ತಿರುವ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಸಚಿವಾಲಯದ ಸಭೆಗಳಲ್ಲೂ ನೀರು ಕುಡಿಯುವುದಕ್ಕೆ ಪ್ಲಾಸ್ಟಿಕ್‌ ಬಾಟಲ್‌ಗಳ ಬದಲು ಸ್ಟೀಲ್‌ ಲೋmಗಳನ್ನೇ ಬಳಸುವಂತೆ ಸರಕಾರದ ಅಧೀನ ಕಾರ್ಯದರ್ಶಿಯವರು ಹೊರಡಿಸಿರುವ ಅದೇಶದಲ್ಲಿ ಸೂಚಿಸಿದ್ದಾರೆ.
ಎಲ್ಲರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ಲಾಸ್ಟಿಕ್‌ ಬಾಟಲ್‌ಗಳ ಬದಲು ಸ್ಟೀಲ್‌ ಉಪಕರಣಗಳಿಗೆ ಮೊರೆ ಹೋಗುವಂತೆ ಕಟ್ಟುನಿಟ್ಟಿನ ಫರ್ಮಾನು ಹೊರಡಿಸಲಾಗಿದೆ. ಕರಗದೇ ಭೂಮಿಯಲ್ಲೇ ಉಳಿದುಕೊಳ್ಳುವ ಪ್ಲಾಸ್ಟಿಕ್‌ನಿಂದ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ, ಪ್ಲಾಸ್ಟಿಕ್‌ ನಿಷೇಧಕ್ಕೆ ಸರಕಾರ ಹಲವು ವರ್ಷಗಳಿಂದ ನಾನಾ ರೀತಿಯ ಪ್ರಹಸನಗಳನ್ನು ನಡೆಸುತ್ತಲೇ ಇದೆ. ಆದರೂ ಇದರ ಮೇಲೆ ಅಂಕುಶ ಹೇರಲು ಸಾಧ್ಯವಾಗಿಲ್ಲ. ತನ್ನ ಕಚೇರಿಗಳಿಂದಲೇ ಆದೇಶ ಅನುಷ್ಠಾನಕ್ಕೆ ಸರಕಾರ ಮುಂದಾಗಿದೆ.
ಪರಿಸರ ದಿನಾಚರಣೆಯಂದು ಮಾತ್ರ ಪ್ಲಾಸ್ಟಿಕ್‌ ಬಳಕೆ ನಿಷೇಧ, ಪರಿಸರ ಸಂರಕ್ಷಣೆಯ ಕುರಿತಾದ ಚರ್ಚೆಗಳು ನಡೆಯುತ್ತಿದ್ದವು. ಬಳಿಕ ಇಡೀ ವರ್ಷ ಹಳೆಯ ಕಥೆಯೇ ಮುಂದುವರಿಯುತ್ತಿತ್ತು. ಆದರೆ, ಈ ಸಲ ನಾನಾ ಹಂತಗಳಲ್ಲಿ ಪ್ರಾಯೋಗಿಕ ಹೆಜ್ಜೆ ಇಡಲಾಗುತ್ತಿದೆ. ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಡುವ ಡಿಪ್ಲೊಮಾ ಮತ್ತು ಇಂಜನಿಯರಿಂಗ್‌ ಕಾಲೇಜುಗಳಲ್ಲಿ ಪ್ಲಾಸ್ಟಿಕ್‌ ಬಾಟಲ್‌ಗಳ ಬಳಕೆಯ ಮೇಲೆ ಇತ್ತೀಚಿಗೆ ನಿಷೇಧ ಹೇರಿದ್ದು, ಸಿಬ್ಬಂದಿ, ವಿದ್ಯಾರ್ಥಿಗಳು ಸ್ಟೀಲ್‌ ಲೋmಗಳನ್ನೇ ಬಳಸುವಂತೆ ನಿರ್ದೇಶನ ನೀಡಿದೆ. ಕೇವಲ ತರಗತಿ ಹಾಗೂ ಕಚೇರಿಯಷ್ಟೇ ಅಲ್ಲದೇ ತಮ್ಮಲಿಯೂ ನಡೆಸಲಾಗುವ ಸಭೆಗಳಲ್ಲಿ ಲೋಟಗಳನ್ನೇ ಬಳಸುವಂತೆ ಸೂಚಿಸುವ ಮೂಲಕ ಪರಿಸರ ಕಾಪಾಡುವಲ್ಲಿ ಕೊಡುಗೆ ನೀಡಬೇಕೆಂಬ ಸಂದೇಶ ರವಾನಿಸಿದೆ. ಮುಂದುವರಿದು ಸರಕಾರಿ ಕಚೇರಿಗಳಿಗೂ ಇದನ್ನು ಅನ್ವಯವಾಗುವಂತೆ ಸೂಚನೆ ನೀಡಿದೆ.
ಆದೇಶವಾಗಿಯೇ ಉಳಿದುಕೊಳ್ಳದಿರಲಿ
ಜೂನ 27ರಂದು ಪ್ಲಾಸ್ಟಿಕ್‌ ಬಾಟಲ್‌ಗಳ ಬಳಕೆಗೆ ನಿಷೇಧಿಸಿ ಸರಕಾರದಿಂದ ಜೂನ 27ರಂದು ಆದೇಶ ಹೊರಬಿದ್ದಿದ್ದು, ಸರಕಾರಿ ಕಚೇರಿ, ಅಧೀನ ಕಚೇರಿ, ಹಾಗೂ ಸಚಿವಾಲಯದ ಸಭೆ, ಸಮಾರಮಬಗಳಲ್ಲಿ ಪ್ಲಾಸ್ಟಿಕ್‌ ಬಾಟಲ್‌ ಬಳಕೆಗೆ ನಿಷೇಧ ಹೇರಿರುವುದು ಪರಿಸರ ಸ್ನೇಹಿ ನಿರ್ಧಾರವಾಗಿದೆ ಎಂಬುದು ಪರಿಸರ ಪ್ರೇಮಿಗಳ ಅಭಿಪ್ರಾಯವಾಗಿದ್ದು ಇದು ಕೇವಲ ಆದೇಶವಾಗಿಯೇ ಉಳಿದುಕೊಳ್ಳದೆ ಕಾಂiÀiರ್ರೂಪಕ್ಕೆ ಬರಲಿ ಎಂಬುದು ಪರಿಸರ ಪ್ರೇಮಿಗಳ ಅಶಯವಾಗಿದೆ.

loading...