ಇಮ್ರಾನ್ ಖಾನ್ ಕೈ ಹಿಡಿದ ಪಾಕ್ ಮತದಾರ, ಮೈತ್ರಿ ಅನಿವಾರ್ಯ

0
19
loading...

ಇಸ್ಲಾಮಾಬಾದ್: ಪಾಕ್ ಚುನಾವಣೆಯ ಫಲಿತಾಂಶ ಬಂದಿದ್ದು,ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್(ಪಿಟಿಐ) ದೇಶ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸಂಪೂರ್ಣ ಬಹುಮತವಿರದ ಕಾರಣ ಪಿಟಿಐ ಪಕ್ಷಕ್ಕೆ ಮೈತ್ರಿ ಅನಿವಾರ್ಯವಾಗಿದೆ.
ಮತದಾನ, ಮತ ಎಣಿಕೆ ಹೀಗೆ ಸುಮಾರು ಮೂರು ದಿನಗಳ ಕಾಲ ನಡೆದ ಪ್ರಕ್ರಿಯೆ ಮುಕ್ತಾಯವಾಗಿದೆ. ನಿರೀಕ್ಷೆಯಂತೆ ಇಮ್ರಾನ್ ಖಾನ್ ಪಕ್ಷ ೨೭೨ ಕ್ಷೇತ್ರಗಳಲ್ಲಿ ೧೧೫ ಸೀಟುಗಳನ್ನು ಜಯಿಸಿದೆ. ಬಹುಮತಕ್ಕೆ ಅಗತ್ಯವಿದ್ದ ೧೩೭ ಸೀಟುಗಳಿಗೆ ಪಿಟಿಐ ಪಕ್ಷಕ್ಕೆ ೨೨ ಸೀಟುಗಳ ಕೊರತೆ ಉಂಟಾಗಿದೆ.
ಇಮ್ರಾನ್ ಖಾನ್ ನೇರ ಎದುರಾಳಿ ಪಕ್ಷ ಪಾಕಿಸ್ತಾನ್ ಮುಸ್ಲಿಂ ಲೀಗ್೬೨ ಕ್ಷೇತ್ರದಲ್ಲಷ್ಟೇ ಜಯಿಸಿ ಹೀನಾಯ ಸೋಲು ಅನುಭವಿಸಿದೆ. ಬಿಲಾವಲ್ ಭುಟ್ಟೋ ನೇತೃತ್ವದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಕೇವಲ ೪೩ ಕ್ಷೇತ್ರದಲ್ಲಿ ಖಾತೆ ತೆರೆದಿದೆ. ಇನ್ನೂ ಕೆಲ ಕ್ಷೇತ್ರದ ಫಲಿತಾಂಶ ಘೋಷಣೆಯಾಗಿಲ್ಲ.ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲ ಪಾಕಿಸ್ತಾನ ರಾಜಕೀಯದಲ್ಲಿ ಸಕ್ರಿಯವಾಗಿರುವ ಇಮ್ರಾನ್ ಖಾನ್ ಮೇಲೆ ಸಾಕಷ್ಟು ನಿರೀಕ್ಷೆ ಹಾಗೂ ಸವಾಲುಗಳಿವೆ.

loading...