ಈಜಲು ನೀರಿಗಿಳಿದು ಯುವತಿ ನೀರು ಪಾಲು

0
15
loading...

 

ಕನ್ನಡಮ್ಮ‌ಸುದ್ದಿ-ಬೆಳಗಾವಿ: ಖಾನಾಪುರ ತಾಲೂಕಿನ ಇಟಗಿ ಗ್ರಾಮದ ಸುಚಿತ್ರಾ ಘಾಡಿ ಎಂಬ ಯುವತಿ ತಿಲಾರಿ‌ ಡ್ಯಾಮ್ ನಲ್ಲಿ ಈಜಲು ನೀರಿಗಿಳಿದು ನೀರು ಪಾಲಾದ ಘಟನೆ‌ ಗುರುವಾರ ಸಂಜೆ‌ ನಡೆದಿದೆ.

ಗುರುವಾರ ಕಾಲೇಜ್ ನ ಹನ್ನೊಂದು ಜನ ಹುಡುಗಿಯರು ನಾಲ್ಕು ಜನ ಹುಡುಗರು ಸೇರಿ 18 ಜನ ಸ್ನೇಹಿತರು ಪ್ರವಾಸಕ್ಕೆ ತೆರಳಿದ ವೇಳೆ ಈ ಅವಘಡ ಸಂಭವಿಸಿದೆ.

ಸುಚಿತ್ರಾ ಘಾಡಿ ಬೆಳಗಾವಿಯಲ್ಲಿ ವ್ಯಸಾಂಗ ಮಾಡುತ್ತಿದ್ದಳು ತನ್ನ ಗೆಳತಿಯರ ಜೊತೆ ತಿಲ್ಲಾರಿ ಡ್ಯಾಂಗೆ ಹೋದ ಸಂಧರ್ಭದಲ್ಲಿ ಮೂರು ಜನ ಗೆಳತಿಯರು ಈಜಲು ನೀರಿಗಿಳಿದ್ದಾರೆ. ಅದರಲ್ಲಿ ಎರಡು ಜನ ಹುಡುಗಿಯರನ್ನು ಸ್ನೇಹಿತರು ಕಾಪಾಡುವಲ್ಲಿ ಯಶಸ್ವಿ ಯಾಗಿದ್ದಾರೆ.ಆದರೆ ಸುಚಿತ್ರಾ ನೀರಿನ ಸುಳಿವಿಗೆ ಸಿಲುಕಿಗೆ ನೀರು ಪಾಲಾಗಿದ್ದಾಳೆ .

ಈ ಕುರಿತು ಪೊಲೀಸ್ ರು ವಿದ್ಯಾರ್ಥಿಗಳು ಸ್ಥಳಕ್ಕೆ‌ ಕರೆದೊಯ್ದು ಪರಿಶೀಲನೆ‌ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

loading...