ಉತ್ತಮ ಆಡಳಿತ ಪಟ್ಟಿಯಲ್ಲಿ ಕರ್ನಾಟಕಕ್ಕೆ ನಾಲ್ಕನೆ ಸ್ಥಾನ

0
12
loading...

ಬೆಂಗಳೂರು: ಬೆಂಗಳೂರು ಮೂಲದ ಪಬ್ಲಿಕ್ ಅಫೇರ್ಸ್ ಸೆಂಟರ್ (ಪಿಎಸಿ) ಉತ್ತಮ ಆಡಳಿತದ ರಾಜ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ದೇಶದಲ್ಲಿ ಉತ್ತಮ ಆಡಳಿತ ನೀಡುವ ರಾಜ್ಯಗಳಲ್ಲಿ ಕರ್ನಾಟಕ ನಾಲ್ಕನೇ ಸ್ಥಾನ ಪಡೆದಿದೆ. ಪಕ್ಕದ ಕೇರಳ ಪ್ರಥಮ ಸ್ಥಾನ ಪಡೆದರೆ, ಬಿಹಾರ ಕೊನೆ ಸ್ಥಾನದಲ್ಲಿದೆ.
2016ರಿಂದಲೂ ಪಿಎಸಿ ಅತ್ಯುತ್ತಮ ಆಡಳಿತ ನಡೆಸುವ ರಾಜ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದೆ. ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯನ್ನು ಆಧರಿಸಿ, ಲಭ್ಯವಾದ ದತ್ತಾಂಶಗಳ ಚೌಕಟ್ಟಿನಲ್ಲಿ ರಾಜ್ಯಗಳ ಆಡಳಿತವನ್ನು ಈ ಸಂಸ್ಥೆ ಪಟ್ಟಿ ಮಾಡುತ್ತಿದೆ.
ಕಳೆದ ಮೂರು ವರ್ಷಗಳಿಂದಲೂ ಪಿಎಸಿ, ಉತ್ತಮ ಆಡಳಿತ ರಾಜ್ಯಗಳನ್ನು ಪಟ್ಟಿ ಬಿಡುಗಡೆ ಮಾಡುತ್ತಿದೆ. ಇದೇ ಶನಿವಾರ 2018ನೇ ಸಾಲಿನ ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕ (ಪಿಎಐ)ವನ್ನು ಪಿಎಸಿ ಬಿಡುಗಡೆಗೊಳಿಸಿದೆ. ಜನ ಸಂಖ್ಯಾ ಆಧಾರದ ಮೇಲೆ ಸಣ್ಣ ಮತ್ತು ದೊಡ್ಡವುಗಳೆಂದು ಎರಡು ವಿಭಾಗಗಳನ್ನು ಸಂಸ್ಥೆ ಪ್ರತ್ಯೇಕಿಸಿ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದೆ.
ದೊಡ್ಡ ರಾಜ್ಯಗಳ ಪೈಕಿ ಸತತ ಮೂರನೇ ಬಾರಿ ಕೇರಳ ಪ್ರಥಮ ಸ್ಥಾನವನ್ನು ಪಡೆದಿದೆ. ಕೇರಳದ ನಂತರ ತಮಿಳುನಾಡು, ತೆಲಂಗಾಣ, ಕರ್ನಾಟಕ ಹಾಗೂ ಗುಜರಾತ್ ಕ್ರಮವಾಗಿ 2, 3, 4 ಹಾಗೂ 5ನೇ ಸ್ಥಾನವನ್ನು ಪಡೆದಿವೆ.
ಇತ್ತ, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಬಿಹಾರ ರಾಜ್ಯಗಳು ಕೊನೆಯ ಸ್ಥಾನದಲ್ಲಿವೆ. ಸಣ್ಣ ರಾಜ್ಯಗಳ ಪೈಕಿ ಹಿಮಾಚಲ ಪ್ರದೇಶ ಅಗ್ರಸ್ಥಾನದಲ್ಲಿದ್ದರೆ, ಗೋವಾ, ಮಿಜೋರಾಂ, ಸಿಕ್ಕೀಂ ಮತ್ತು ತ್ರಿಪುರಾ ರಾಜ್ಯಗಳು ನಂತರದಲ್ಲಿ ಸ್ಥಾನ ಪಡೆದಿವೆ.

loading...