ಉತ್ತಮ ವೈದ್ಯಕೀಯ ಸೇವೆ ನೀಡಲು ಪೂರಕ ವಾತಾವರಣವಿರಲಿ

0
18
loading...

ಕನ್ನಡಮ್ಮ ಸುದ್ದಿ-ಜಮಖಂಡಿ: ವೈದ್ಯರು ಸಮಾಜದ ಒಂದು ಮುಖ್ಯ ಭಾಗವಾಗಿದ್ದು, ಮೇಲ್ಪದರಿನ ಅವರು ವೈಯಕ್ತಿಕ ಮತ್ತು ಸಮಾಜದ ಸ್ವಾಸ್ಥ್ಯಕ್ಕಾಗಿ ಹಗಲಿರುಳು ದುಡಿಯುತ್ತಾರೆ. ಕಡಿಮೆ ದರದಲ್ಲಿ ಉತ್ತಮ ಸೇವೆ ಕೊಡುತ್ತಿರುವುದರಿಂದಲೇ ಬೇರೆ ಬೇರೆ ದೇಶದಿಂದ ಜನರು ನಮ್ಮ ದೇಶಕ್ಕೆ ಅದರಲ್ಲಿ ಕರ್ನಾಟಕಕ್ಕೆ ವೈದ್ಯಕೀಯ ಸೌಲಭ್ಯ ಪಡೆದುಕೊಳ್ಳಲು ಬರುತ್ತಿದ್ದಾರೆ. ಉತ್ತಮ ವೈದ್ಯಕೀಯ ಸೇವೆ ನೀಡಲು ಪೂರಕ ವಾತಾವರಣದ ಅವಶ್ಯಕತೆ ಇದೆ ಎಂದು ಜಮಖಂಡಿಯ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನ್ನವರ ಹೇಳಿದರು.
ಭಾರತೀಯ ವೈದ್ಯಕೀಯ ಸಂಸ್ೆಥೆ ಜಮಖಂಡಿ ಶಾಖೆಯ ವತಿಯಿಂದ ಜುಲೈ 1ನೇ ತಾರೀಖು ದಡ್ಡಿ ಆಸ್ಪತ್ರೆಯ ನಿಸರ್ಗ ಭವನದಲ್ಲಿ ಜರುಗಿದ ವೈದ್ಯರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಹಿರಿಯ ವೈದ್ಯ ಡಾ. ಮಹೇಶ ಪಾಟಿಲ ಮತ್ತು ಸಾವಳಗಿ ಡಾ. ಕುಲಕರ್ಣಿಯವರನ್ನು ಸನ್ಮಾನ ಮಾಡಲಾಯಿತು.
ಡಾ. ಕಮ್ಮಾರ ಅವರ ನಿಧನದಿಂದಾಗಿ ಅವರ ಕುಟುಂಬದ ಸದಸ್ಯರಿಗೆ ಭಾರತೀಯ ವೈದ್ಯಕೀಯ ಸಂಸ್ಥೆ ಸಾಮಾಜಿಕ ಭದ್ರತಾ ಯೋಜನೆಯಡಿ ಬಂದಂತಹ ಚೆಕ್‌ನ್ನು ಅವರ ಮಗನಿಗೆ ನೀಡಲಾಯಿತು.
ಡಾ. ಎಚ್‌. ಜಿ. ದಡ್ಡಿ ಅಧ್ಯಕ್ಷತೆ ಮಾತನಾಡಿ, ಡಾ. ಬಿ. ಸಿ. ರಾಯ್‌ ಅವರ ಬಗ್ಗೆ ಸಂಕ್ಷಿಪ್ತವಾಗಿ ಹೇಳಿ ಅವರ ಆದರ್ಶಗÀಳನ್ನು ನಾವು ರೂಡಿಸಿಕೊಳ್ಳಬೇಕೆಂದರು. ಈಗೀನ ಬದಲಾದ ಪರಿಸ್ಥಿತಿಯಲ್ಲಿ ಜನರ ಮನಸ್ಥಿತಿ ವೈದ್ಯರ ಮನಸ್ಥಿತಿ ಬದಲಾದದ್ದರಿಂದ ರೋಗಿ-ವೈದ್ಯರ ಸಂಬಂಧ ಹದಗೆಡುತ್ತಿದ್ದು, ಅದನ್ನು ಸರಿಪಡಿಸಲು ಪ್ರಯತ್ನ ಮಾಡಬೇಕು. ವೈದ್ಯ ವೃತ್ತಿಯ ನಿಯಂತ್ರಣಕ್ಕಾಗಿ ಹೊಸ ಹೊಸ ಕಾನೂನುಗಳು ಬರುತ್ತಿದ್ದು, ವೈದ್ಯಕೀಯ ಶಿಕ್ಷಣ ದುಬಾರಿಯಾಗಿದೆ ಎಂದರು.
ವೈದ್ಯರು ಒತ್ತಡದಲ್ಲಿ ಕಾರ್ಯನಿರ್ವಹಿಸುವದರಿಂದ ತೊಂದರೆಗಳಾಗುತ್ತಿವೆ. ಸರಕಾರ ಈ ನಿಟ್ಟಿನಲ್ಲಿ ಲಕ್ಷವಹಿಸಿ, ವೈದ್ಯರು ಒತ್ತಾಯ, ಒತ್ತಡರಹಿತ ವಾತಾವರಣದಲ್ಲಿ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಟ್ಟು ವೈದ್ಯರ ಮೇಲೆ ಮತ್ತು ಆಸ್ಪತ್ರೆಗಳ ಮೇಲೆ ಆಗುತ್ತಿರುವ ಹಲ್ಲೆಗಳನ್ನು ತಡೆಗಟ್ಟಬೇಕು ಎಂದರು. ರೋಗ ವಾಸಿಮಾಡುವದಕ್ಕಿಂತ ರೋಗ ಬರದಂತೆ ತಡೆಗಟ್ಟುವಿಕೆಗೆ ಹೆಚ್ಚು ಒತ್ತು ಕೊಡಬೇಕೆಂದರು.
ಸಂಸ್ಥೆಯ ಕಾರ್ಯದರ್ಶಿ, ಡಾ. ವ್ಹಿ. ಎಸ್‌. ಬಿರಾದಾರ ಕಾರ್ಯಕ್ರಮ ನಿರೂಪಣೆ ಮಾಡಿದರು. ಡಾ. ಪೂಜಾರ ಮತ್ತು ಡಾ. ಜತ್ತಿ ವಿ. ಎಸ್‌. ಸನ್ಮಾನಿತರನ್ನು ಪರಿಚಯಿಸಿದರು. ಸಂಸ್ಥೆಯ ಎಲ್ಲ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

loading...