ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ಅನುಸರಿದರೆ ಪ್ರತ್ಯೇಕ ರಾಜ್ಯದ ಕೂಗು ಖಚಿತ :ಸಿದ್ದರಾಮ ಸ್ವಾಮಿಜೀ

0
10
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಕಳೆದ 5 ವರ್ಷ ಗಳಿಂದ .  ಉತ್ತರ ಕರ್ನಾಟಕ ಅಭಿವೃದ್ಧಿಯಿಂದ ವಂಚಿತವಾಗಿದೆ. ರಾಜ್ಯದ ಎಲ್ಲಾ ಇಲಾಖೆಯ ಆಡಳಿತವನ್ನು ಸುವರ್ಣ ಸೌಧಕ್ಕೆ ಸ್ಥಳಾಂತರಿಸಬೇಕು ಎಂದು ನಾಗನೂರ ಸಿದ್ದರಾಮ ಸ್ವಾಮಿಗಳು ಒತ್ತಾಯಿದರು.

ಸ್ಥಳೀಯ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಯಾವುದೇ ಸರ್ಕಾರ ಆಡಳಿತಕ್ಕೆ ಬಂದರು ಉತ್ತರ ಕರ್ನಾಟಕ ವನ್ನು ಕಡೆಗಣಿಸುತ್ತಿವೆ. ಸಮ್ಮಿಶ್ರ ಸರಕಾರದ ಬಜೆಟಯೂ ಸಹ ಉತ್ತರ ಕರ್ನಾಟಕಕ್ಕೆ ಸರಿಯಾಗಿ ಅನುದಾನ ನೀಡದೆ ಕಡೆಗಣಿಸಿದೆ.ಇದರಿಂದ ಉ.ಕ ಅಭಿವೃದ್ಧಿ ಕುಂಟಿತವಾಗುತ್ತಿದೆ.ಆದ್ದರಿಂದ ಇದೇ‌ ಪ್ರವೃತ್ತಿ ಮುಂದು ವರೆದರೆ ಉ.ಕ‌ ಪ್ರತ್ಯೇಕ ಕೂಗು ಹೆಚ್ಚಾದರು ಆಶ್ಚರ್ಯ ಪಡುವಂತಿಲ್ಲ ಎಂದು ಎಚ್ಚರಿಸಿದರು.

ಅಲ್ಲದೆ ಇದೇ ಜುಲೈ 31ರಂದು ಉತ್ತರ ಕರ್ನಾಟಕ ಅಭಿವೃದ್ದಿ ವಿಷಯ ವಿಟ್ಟುಕೊಂಡು ವಿಧಾನ ಸೌಧದ ಎದುರು ಮಠಾಧೀಶರ ನೇತೃತ್ವದಲ್ಲಿ ಸಾಂಕೇತಿಕ ಧರಣಿ‌ ನಡೆಸಲಾಗುವುದು ಎಂದು ಸ್ವಾಮೀಜಿಗಳು ತಿಳಿಸಿದರು.

ಈ ಸಂದರ್ಭದಲ್ಲಿಗುರುಸಿದ್ಧಪ್ಪ ಶ್ರೀ ಕಾರಂಜಿಮಠ,ನಿಜಗುಣ ದೇವರು ಹುಣಶಾಳ, ಸಿದ್ಧರಾಮ ಶ್ರೀ ವಿಜಯಪುರ, ಬಿ.ಜೆ.ಪಿ ಮುಖಂಡ ಅಶೋಕ ಪೂಜಾರಿ. ಕಲ್ಯಾಣ ರಾವ್ ಮುಚಳಂಬಿ,  ಹಾಗೂ ಉಪಸ್ಥಿತರಿದ್ದರು.

loading...