ಉಲ್ಟಾ ಹೊಡೆದ ಉ. ಕೊರಿಯಾ, ಅಣ್ವಸ್ತ್ರ ನಿಶ್ಯಸ್ತ್ರೀಕರಣಕ್ಕೆ ಒಪ್ಪಂದ

0
15
loading...

ವಾಷಿಂಗ್ಟನ್: ಕಳೆದ ಜೂನ್ 17ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೊಂದಿಗೆ ಅಣ್ವಸ್ತ್ರ ನಿಶ್ಯಸ್ತ್ರೀಕರಣದ ಕುರಿತು ಒಪ್ಪಂದ ಮಾಡಿಕೊಂಡಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಇದೀಗ ಅದಕ್ಕೆ ಉಲ್ಟಾ ಹೊಡೆದಂತೆ ಕಾಣುತ್ತಿದ್ದು, ಜಗದ ಕಣ್ಣಿಗೆ ಮಣ್ಣೆರಚಿ ರಹಸ್ಯವಾಗಿ ತನ್ನ ಅಣ್ವಸ್ತ್ರ ಯೋಜನೆಗಳನ್ನು ಮುಂದುವರೆಸಿದೆ ಎನ್ನಲಾಗಿದೆ.
ಈ ಬಗ್ಗೆ ಅಮೆರಿಕದ ಖ್ಯಾತ ಪತ್ರಿಕೆ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದ್ದು, ಟ್ರಂಪ್-ಕಿಮ್ ಸಿಂಗಾಪುರ ಶೃಂಗಸಭೆ ಬಳಿಕವೂ ಉತ್ತರ ಕೊರಿಯಾ ತನ್ನ ಅಣ್ವಸ್ತ್ರ ಯೋಜನೆಗಳನ್ನು ಯಾವುದೇ ಎಗ್ಗಿಲ್ಲದೇ ಮುಂದುವರೆಸಿಕೊಂಡು ಬಂದಿದೆ. ಕನಿಷ್ಛ ಪಕ್ಷ ಯೋಜನೆಗಳನ್ನು ನಿಧಾನಗತಿಯಾಗಿಸುತ್ತದೆ ಎಂಬ ವಿಶ್ವದ ಕಲ್ಪನೆಗೂ ಉತ್ತರ ಕೊರಿಯಾ ಸೆಡ್ಡು ಹೊಡೆದಿದ್ದು, ನಿಧಾನಗೊಳಿಸುವ ಬದಲಿಗೆ ಹಾಲಿ ನಡೆಯುತ್ತಿರುವ ಅಣ್ವಸ್ತ್ರ ಯೋಜನೆಗಳನ್ನು ತ್ವರಿತಗತಿಯಲ್ಲಿ ಸಾಗುವಂತೆ ಮಾಡಿದೆ.
ಅಲ್ಲದೆ ಈ ಯೋಜನೆಗಳು ಯಾವುದೇ ಕಾರಣಕ್ಕೂ ವಿಶ್ವದ ಕಣ್ಣಿಗೆ ಬೀಳಬಾರದು ಎಂದು ತನ್ನ ಎಲ್ಲ ಅಣ್ವಸ್ತ್ರ ಯೋಜನೆಗಳನ್ನು ರಹಸ್ಯ ಸ್ಥಳಗಳಿಗೆ ರವಾನೆ ಮಾಡಿದೆ. ಅಲ್ಲದೆ ಈ ರಹಸ್ಯ ತಾಣಗಳಿ ಯಥೇಚ್ಛ ಪ್ರಮಾಣದಲ್ಲಿ ಇಂಧನ ಪೂರೈಕೆ ಮಾಡುತ್ತಿದೆ. ಅಂತೆಯೇ ಅಣ್ವಸ್ತ್ರ ಸಂಗ್ರಹಾರಾಗರಗಳಲ್ಲಿನ ಸಿಬ್ಬಂದಿಯ ಸಂಖ್ಯೆ ಕೂಡ ಹೆಚ್ಚಾಗಿದ್ದು, ಇದು ಉತ್ತರ ಕೊರಿಯಾ ತನ್ನ ಅಣ್ವಸ್ತ್ರಗಳ ಸಂಖ್ಯೆಯನ್ನು ದಿನೇ ದಿನೇ ಹೆಚ್ಚಿಸಿಕೊಳ್ಳುತ್ತಿವೆ ಎಂಬ ಊಹಾಪುೋಹಕ್ಕೆ ಕಾರಣವಾಗಿದೆ.
ವಾಷಿಂಗ್ಟನ್ ಪೋಸ್ಟ್ ವರದಿ ಕುರಿತಂತೆ ಉತ್ತರ ಕೊರಿಯಾ ಅಧಿಕಾರಿಗಳು ಈ ವರೆಗೂ ಸ್ಪಂಧಿಸಿಲ್ಲ.

loading...