ಎಂಟು ವರ್ಷ ಬಳಿಕ ಸೆರೆ ಸಿಕ್ಕ ದೈತ್ಯ ಮೊಸಳೆ

0
14
loading...

ಸಿಡ್ನಿ:ಎಂಟು ವರ್ಷದಿಂದ ವನ್ಯಜೀವಿ ಅಧಿಕಾರಿಗಳಿಗೆ ಸತಾಯಿಸುತ್ತಿದ್ದ, ೬೦ ವರ್ಷದ ದೈತ್ಯ ಮೊಸಳೆಯನ್ನು ಹಿಡಿಯುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.
ಆಸ್ಟೆçÃಲಿಯಾದಲ್ಲಿ ಸೆರೆ ಸಿಕ್ಕ ಮೊಸಳೆ, ಸುಮಾರು ೬೦೦ ಕೆ.ಜಿ ತೂಕದ್ದಾಗಿದ್ದು, ೪.೭ ಮೀಟರ್ ಉದ್ದವಾಗಿದೆ. ಈ ಮೊಸಳೆ ಕ್ಯಾಥರೀನ್ ನದಿಯಲ್ಲಿ ೨೦೧೦ ರಿಂದ ಚಳ್ಳೆಹಣ್ಣು ತಿನ್ನಿಸುತ್ತಿತ್ತು. ಕೊನೆಗೆ ದೈತ್ಯ ಮೊಸಳೆಯನ್ನು ಹಿಡಿಯುವಲ್ಲಿ ವನ್ಯಜೀವಿ ಇಲಾಖೆ ಸಫಲವಾಗಿದೆ.
‘ನಾವು ಮೊಸಳೆ ಹಿಡಿಯಲು ಬಹು ವರ್ಷಗಳಿಂದ ಪ್ರಯತ್ನ ನಡೆಸಿದ್ದೆವು. ಮೊಸಳೆ ನಮಗೆ ವಂಚಿಸುತ್ತಿತ್ತು. ದೈತ್ಯ ಆಕಾರ ಆಗಿದ್ದರಿಂದ ಹಿಡಿಯಲು ತೊಂದರೆ ಉಂಟಾಯಿತು. ಈ ಕಾರ್ಯಾಚರಣೆ ರೋಮಾಂಚಕಾರಿಯಾಗಿತ್ತು’ ಎಂದು ವನ್ಯಜೀವಿ ಅಧಿಕಾರಿ ತಿಳಿಸಿದ್ದಾರೆ.

loading...