ಎಡದಂಡೆ ಕಾಲುವೆಗೆ ನೀರು ಹರಿಸಲು ಒತ್ತಾಯ

0
12
loading...

ಕನ್ನಡಮ್ಮ ಸುದ್ದಿ-ಗಂಗಾವತಿ: ತುಂಗಭದ್ರಾ ಜಲಾಶಯದಿಂದ ಈ ಭಾಗದ ಎಡದಂಡೆ ಕಾಲುವೆಗೆ ತಕ್ಷಣದಿಂದ ನೀರು ಹರಿಸಬೇಕು ಎಂದು ಕನ್ನಡ ಸೇನೆ ಸಂಘಟನೆ ಜಿಲ್ಲಾ ಅಧ್ಯಕ್ಷ ಚನ್ನಬಸವ ಜೇಕೀನ್‌ ಒತ್ತಾಯಿಸಿದರು. ಸಂಘಟನೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಈ ವರ್ಷ ರಾಜ್ಯದ ಎಲ್ಲ ಕಡೆ ಮಳೆ ಚೆನ್ನಾಗಿ ಆಗಿದ್ದು, ಇದರಿಂದ ರಾಜ್ಯದ ಅನೇಕ ಜಲಾಶಯಗಳು ಭರ್ತಿಯಾಗಿವೆ. ಅದರಂತೆ ಶಿವಮೊಗ್ಗ ಸೇರಿದಂತೆ ಮಲೆನಾಡು ಭಾಗದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿರುವುದರಿಂದ ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ತುಂಗಭದ್ರಾ ಜಲಾಶಯ ಭರ್ತಿಯಾಗಲಿದೆ. ಇದರಿಂದ ಈ ಭಾಗದ ರೈತರು ತುಂಬಾ ಸಂತಸ ವ್ಯಕ್ತಪಡಿಸುತ್ತಿದ್ದು, ಕಳೆದ ನಾಲ್ಕು ವರ್ಷಗಳಿಂದ ಬರಗಾಲ ಎದುರಿಸಿ, ನೀರಿನ ತೊಂದರೆಯಿಂದ ರೈತರು ಒಂದೆ ಬೆಳೆ ಬೆಳೆಯುವಂತಾಗಿತ್ತು. ಇದರಿಂದ ರೈತರು ತೀವ್ರ ಆರ್ಥಿಕ ತೊಂದರೆ ಅನುಭವಿಸುತ್ತಿದ್ದಾರೆ ಕೂಡಲೇ ನೀರು ಹರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ತಾಲೂಕು ಅಧ್ಯಕ್ಷ ಮಂಜುನಾಥ ಪತ್ತಾರ್‌ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ತುಂಗಭದ್ರಾ ಜಲಾಶಯದ ನೀರಿನ ನಿರ್ವಹಣೆ ಸರಿಯಾಗಿ ಮಾಡದೆ ಇರುವುದಿರಂದ ರೈತರು ಅಪಾರ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದಾರೆ. ಜಲಾಶಯದಲ್ಲಿ ನೀರಿನ ಸಂಗ್ರಹವಿದ್ದರೂ ಕಾಲುವೆಗೆ ನೀರು ಹರಿಸುವಲ್ಲಿ ಅಧಿಕಾರಿಗಳ ಮಾತಿನಂತೆ ಜನಪ್ರತಿನಿಧಿಗಳು ಅವೈಜ್ಞಾನಿಕವಾಗಿ ನಿರ್ಧಾರ ಕೈಗೊಂಡಿದ್ದರಿಂದ ರಾಯಚೂರು, ಬಳ್ಳಾರಿ, ಕೊಪ್ಪಳ ಅಚ್ಚುಕಟ್ಟು ಪ್ರದೇಶದ ರೈತರು ಯಾವ ಬೆಳೆ ಬೆಳೆಯಬೇಕೆಂಬ ನಿರ್ಧಾರಕ್ಕೆ ಬಾರದ ಸ್ಥಿತಿಯಲ್ಲಿ ಕಾಲುವೆ ಮೇಲ್ಬಾಗದ ರೈತರು ಭತ್ತ, ಕೆಳಭಾಗದ ರೈತರು ಅಲ್ಪ ನೀರಿನ ಬೆಳೆ ಬೆಳೆಯಬೇಕಾದ ಸ್ಥಿತಿಯುಂಟಾಗಿ ನಷ್ಟ ಅನುಭವಿಸಿದ್ದರು. ಈ ಬಾರಿಯಾದರೂ ಕೂಡಲೇ ಸರ್ಕಾರ ತುಂಗಭದ್ರಾ ಜಲಾಶಯದ ಸಲಹಾ ಸಮಿತಿ ಸಭೆ ಕರೆದು ರೈತರ ಬೆಳೆಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಈ ವರ್ಷ ರೈತರು ಎರಡೂ ಬೆಳೆಗೂ ನೀರು ಹರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನಾ ಕಾರ್ಯದರ್ಶಿರಾಜು ಹೇರೂರು, ಗಂಗಾವತಿ ತಾಲೂಕ
ಉಪಾಧ್ಯಕ್ಷರು ಗ್ರಾಮ ಘಟಕ ವೆಂಕೋಬ ಹೆಬ್ಬಾಳ, ತಾಲೂಕ ಸಲಹೆಗಾರ ಶ್ರೀಧರ ಜಂತಕಲ್‌ ಇದ್ದರು.

loading...