ಎಲ್ಲ ಭಾಷೆಗಳಿಗೆ ಸಂಸ್ಕೃತ ಮೂಲ: ಜಗತಾಪ

0
6
loading...

ಗುಳೇದಗುಡ್ಡ: ಭಾರತೀಯ ಸಂಸ್ಕೃತಿ ಭವ್ಯವಾದದ್ದು. ಯುಗ ಯುಗಳ ಇತಿಹಾಸ ಜಗತ್ತಿನ ಯಾವ ದೇಶಗಳಿಗೂ ಇಲ್ಲ. ಮೂಲ ಭಾಷೆ ಸಂಸ್ಕೃತವನ್ನು ಆಧರಿಸಿ ಜಗತ್ತಿನ ಎಲ್ಲ ಭಾಷೆಗಳು ನಿರ್ಮಾಣವಾಗಿವೆ ಎಂದು ನಿವೃತ್ತ ಶಿಕ್ಷಕ, ಸಾಹಿತಿ ಮಹಾದೇವ ಜಗತಾಪ ಹೇಳಿದರು.
ಇಲ್ಲಿನ ಸ್ಥಳೀಯ ದೇವಾಂಗ ಸಮಾಜದ ಬನಶಂಕರಿ ಸಮುದಾಯ ಭವನದಲ್ಲಿ ದೇವಾಂಗ ಸಮಾಜ ಸಂಸ್ಕಾರ ಕೇಂದ್ರದ ವಾರ್ಷಿಕೋತ್ಸವ, ಗುರುವಂದನೆ ಹಾಗೂ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವಿÃಕರಿಸಿ ಮಾತನಾಡಿ, ಭಾರತೀಯ ಆಧ್ಯಾತ್ಮಿÃಕ ತಳಹದಿಯ ಮೇಲೆ ಜಗತ್ತಿಗೆ ಭಾರತ ಗುರುವಾಗಲಿದೆ ಎಂದರು.

ಗದಗ ಬೇಟಗೇರಿಯ ಗೀತಾ ರುದ್ರಮುನಿ ಸ್ವಾಮಿಗಳು ದೇವಾಂಗಮಠ, ಸಾಹಿತಿ ಮಹಾದೇವ ಬಸರಕೋಡ ಮಾತನಾಡಿದರು. ಮರಡಿಮಠದ ಅಭಿನವ ಕಾಡಸಿದ್ದೆÃಶ್ವರ ಶಿವಾಚಾರ್ಯ ಶ್ರಿÃಗಳು ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಮಹಾದೇವ ಜಗತಾಪ, ಜಯಶ್ರಿÃ ಕಳಸಾ, ಮಾಲಾ ರಾಜನಾಳ ಅವನ್ನು ಸನ್ಮಾನಿಸಲಾಯಿತು.
ದೇವಾಂಗ ಸಮಾಜ ದತ್ತಿ ಅಧ್ಯಕ್ಷ ಅಮಾತೆಪ್ಪ ಕೊಪ್ಪಳ, ಕೃಷ್ಣಪ್ಪ ಶಿರೂರ ಅಧ್ಯಕ್ಷತೆ ವಹಿಸಿದ್ದರು. ದೇವಾಂಗ ಸಮಾಜ ಸಂಸ್ಕಾರ ಕೇಂದ್ರದ ಸೇವಾ ಸಮಿತಿಯ ಗೌರವಾಧ್ಯಕ್ಷ ಎನ್.ಆರ್.ಅಡಕಿ, ಹನಮಸಾಗರದ ಶಿವಶಂಕರ ಮೆದಿಕೇರಿ, ಶಿವಶಂಕರ ಮುತ್ತಗಿ, ಸಂಸ್ಕಾರ ಕೇಂದ್ರದ ಅಧ್ಯಕ್ಷ ಶಂಕರ ರೂಢಗಿ, ಸಮುದಾಯ ಆರೋಗ್ಯ ಕೇಂದ್ರ ಜಯಶ್ರಿÃ ಯಂಕಂಚಿ, ರಂಗನಾಥ ಇಂಟರ್‌ನ್ಯಾಶನಲ್ ಪಬ್ಲಿಕ್ ಶಾಲೆಯ ಸಂಸ್ಕೃತ ಶಿಕ್ಷಕಿ ಮಾಲಾ ರಾಜನಾಳ, ಪುಂಡಲೀಕಪ್ಪ ದೊಡಮನಿ, ಗೋಪಾಲ ಬುಳ್ಳಾ, ಪ್ರಕಾಶ ನಿಲುಗಲ್ಲ, ಸೋಮಶೇಖರ ಗೋಲಪ್ಪನವರ, ವಿಠ್ಠಲ ಕತ್ತಿ, ಹನಮಂತ ರೂಡಗಿ, ಎಂ.ಡಿ. ಸಕ್ರಿ, ದೇವಪ್ಪ ಅಳಗೋಡಿ, ಈರಣ್ಣ ಕಂಠಿ, ಮಹಾಬಲೇಶ್ವರ ಹುಲ್ಲೂರ, ಶಂಕ್ರಪ್ಪ ಶೇಬಿನಕಟ್ಟಿ, ಪ್ರಕಾಶ ಹಾನಾಪೂರ, ಕಿರಣ ಭಾಪ್ರಿ, ಸುರೇಶ ಬ್ಯಾಳಿ, ಕೃಷ್ಣಪ್ಪ ರಾಂಪೂರ, ಬಸವರಾಜ ಗಾಡದ, ಪಾಂಡು ಸೂಳಿಕೇರಿ, ರಾಮಕೃಷ್ಣ ಮಿಣಜಗಿ, ಅನಿಲಕುಮಾರ ಬುಳ್ಳಾ, ರಾಮು ಹಾನಾಪೂರ ಮತ್ತಿತರರು ಇದ್ದರು.

loading...